HEALTH TIPS

ಎಸ್‌ಐಆರ್‌ | ನಮೂನೆ-6ರಲ್ಲಿನ 'ಘೋಷಣೆ' ರದ್ದು: ಚುನಾವಣಾ ಆಯೋಗ

ನವದೆಹಲಿ(PTI): ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್‌) ಪೂರ್ಣಗೊಂಡಿರುವ ರಾಜ್ಯಗಳಲ್ಲಿ ಆನ್‌ಲೈನ್‌ ಮೂಲಕ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗಾಗಿ ಅರ್ಜಿ (ನಮೂನೆ-6) ಜೊತೆ ಹೆಚ್ಚುವರಿಯಾಗಿ 'ಎಸ್‌ಐಆರ್‌ ಸಂಬಂಧಿತ ಘೋಷಣೆ' ಸಲ್ಲಿಸುವುದನ್ನು ಚುನಾವಣಾ ಆಯೋಗ ಹಿಂಪಡೆದಿದೆ.

ಸದ್ಯ ಎಸ್‌ಐಆರ್‌ ನಡೆಯುತ್ತಿರುವ ರಾಜ್ಯಗಳಲ್ಲಿ, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಅರ್ಜಿ ಸಲ್ಲಿಸುವವರು ಈ ಘೋಷಣೆ ಸಲ್ಲಿಸಬೇಕು.

ಎಸ್‌ಐಆರ್‌ ಪೂರ್ಣಗೊಂಡಿರುವ ರಾಜ್ಯಗಳಲ್ಲಿ, ಈ 'ಹೆಚ್ಚುವರಿ ಘೋಷಣೆ'ಯನ್ನು ಇಸಿಐಎನ್‌ಇಟಿ ಆಯಪ್‌, ಪೋರ್ಟಲ್‌ ಹಾಗೂ ಮುಖ್ಯ ಚುನಾವಣಾ ಅಧಿಕಾರಿಗಳ ಪೋರ್ಟಲ್‌ಗಳಿಂದ ತೆಗೆದು ಹಾಕಲಾಗಿದೆ. ಹೊಸದಾಗಿ ಹೆಸರು ನೋಂದಣಿಗೆ ಅರ್ಜಿ ಸಲ್ಲಿಸುವವರು ಮತದಾರರ ನೋಂದಣಿ ನಿಯಮಗಳು,1960ರಡಿ ನಿರ್ದಿಷ್ಟಪಡಿಸಿದ ನಮೂನೆ-6 ಅನ್ನು ಮಾತ್ರ ಸಲ್ಲಿಸಬೇಕು ಎಂದು ಆಯೋಗ ಹೇಳಿದೆ.

ಹೊಸದಾಗಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸುವವರು, ಈ ಹಿಂದೆ ನಡೆದಿದ್ದ ಎಸ್‌ಐಆರ್‌ ನಂತರ ಸಿದ್ಧಪಡಿಸಲಾದ ಮತದಾರರ ಪಟ್ಟಿಯಲ್ಲಿನ ತಮ್ಮ ವಿವರಗಳು ಅಥವಾ ತಮ್ಮ ಪಾಲಕರು ಇಲ್ಲವೇ ಅಜ್ಜ/ಅಜ್ಜಿಯರ ವಿವರಗಳನ್ನು ಈ 'ಹೆಚ್ಚುವರಿ ಘೋಷಣೆ' ಮೂಲಕ ಸಲ್ಲಿಸಬೇಕು. ಈ ಘೋಷಣೆಯು ಸದ್ಯ ಎಸ್‌ಐಆರ್‌ ನಡೆಯುತ್ತಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದ ಇಸಿಐಎನ್‌ಇಟಿ ಪೋರ್ಟಲ್‌ನಲ್ಲಿ ಲಭ್ಯ ಇದೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌, ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಹಾಗೂ ವಿವೇಕ್‌ ಜೋಶಿ ಅವರು ಸೆಪ್ಟೆಂಬರ್ 26ರಂದು ಸಭೆ ನಡೆಸಿ, ಎಸ್‌ಐಆರ್‌ ಕುರಿತು ಸುದೀರ್ಘ ಚರ್ಚೆ ನಡೆಸಿದ್ದರು. ಸಭೆ ಬೆನ್ನಲ್ಲೇ, ಈ ಹೆಚ್ಚುವರಿ ಘೋಷಣೆ ಸಲ್ಲಿಸುವುದನ್ನು ಹಿಂಪಡೆಯುವ ಕುರಿತು ಆಯೋಗವು ನಿರ್ಧಾರ ಕೈಗೊಂಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries