HEALTH TIPS

AI ಬಳಸಿ ಮನೆಯಲ್ಲೇ ನಕಲಿ ಮದ್ಯ ತಯಾರಿಸಿ ಪೊಲೀಸರ ಅತಿಥಿಯಾದ ಭೂಪ!

ಭೋಪಾಲ್‌: ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವಿಸಿದ ಪರಿಣಾಮ ಹಲವರು ಪ್ರಾಣ ಕಳೆದುಕೊಂಡಿದ್ದರು. ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಆರೋಪಿಯೊಬ್ಬ, ಕೃತಕ ಬುದ್ಧಿಮತ್ತೆ (ಎಐ) ನೆರವಿನಿಂದ ರಾಸಾಯನಿಕಗಳು ಮತ್ತು ನೀರನ್ನು ಬೆರೆಸಿ ಮನೆಯಲ್ಲೇ ಮದ್ಯ ತಯಾರಿಸಿರುವುದು ಬೆಳಕಿಗೆ ಬಂದಿದೆ. 


ಆರೋಪಿಯು ನಕಲಿ ಮತ್ತು ಅಸಲಿ ಮದ್ಯವನ್ನು ಮಿಶ್ರಣ ಮಾಡುತ್ತಿದ್ದ. ಬಳಿಕ ಆ ಮದ್ಯವನ್ನು ಸ್ಕ್ರ್ಯಾಪ್ ವ್ಯಾಪಾರಿಗಳಿಂದ ಸಂಗ್ರಹಿಸಿದ ಪರವಾನಗಿ ಪಡೆದ ಮದ್ಯದ ಖಾಲಿ ಬಾಟಲಿಗಳಿಗೆ ತುಂಬಿಸಿ, ಗ್ರಾಮೀಣ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಅಜಯ್ ರಾಥೋಡ್ ಎಂಬಾತ ಮನೆಯಲ್ಲೇ ಮದ್ಯ ತಯಾರಿಸುವ ವಿಧಾನಗಳನ್ನು ಹುಡುಕಲು ಎಐ ಮೊರೆ ಹೋಗಿದ್ದ. ಇದಕ್ಕಾಗಿ ಇಂದೋರ್‌ನ ಖಾಸಗಿ ಸಂಸ್ಥೆಯೊಂದರ ಮೂಲಕ ರಾಸಾಯನಿಕಗಳನ್ನು ತರಿಸಿಕೊಂಡಿದ್ದ ಎಂದು ದೇವಾಸ್ ಕೊತ್ವಾಲಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಕ್ರಮ ಮದ್ಯ ಮಾರಾಟ ಆರೋಪದ ಮೇಲೆ ಪೊಲೀಸರು ಸೋಮವಾರ 10 ಮಂದಿಯನ್ನು ಬಂಧಿಸಿದ್ದರು. ಬಂಧಿತ ಆರೋಪಿಗಳಿಂದ ಅಪಾರ ಪ್ರಮಾಣ ನಕಲಿ ಮದ್ಯವನ್ನು ವಶಪಡಿಸಿಕೊಂಡಿದ್ದರು. ಆರೋಪಿಗಳನ್ನು ವಿಚಾರಣೆ ನಡೆಸಿದ ವೇಳೆ ನಕಲಿ ಮದ್ಯ ತಯಾರಿಕೆ ಮತ್ತು ಮಾರಾಟದ ಬಗ್ಗೆ ಮಾಹಿತಿ ಬಹಿರಂಗಗೊಂಡಿದೆ.

ಅಕ್ಟೋಬರ್ 2 ಮತ್ತು 7ರ ನಡುವೆ ಅಜಯ್ ಸ್ಕ್ರ್ಯಾಪ್ ವ್ಯಾಪಾರಿಗಳಿಂದ ಪರವಾನಗಿ ಪಡೆದ ಮದ್ಯದ ಖಾಲಿ ಬಾಟಲಿಗಳನ್ನು ಸಂಗ್ರಹಿಸಿದ್ದ. ಬಳಿಕ ಇತರ ಆರೋಪಿಗಳ ಸಹಾಯದೊಂದಿಗೆ ರಾಸಾಯನಿಕಗಳು ಮತ್ತು ನೀರನ್ನು ಬೆರೆಸಿ ಮನೆಯಲ್ಲೇ ನಕಲಿ ಮದ್ಯ ತಯಾರಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.

ಬಂಧಿತರಲ್ಲಿ ದೇವಾಸ್ ಮತ್ತು ಇಂದೋರ್ ಜಿಲ್ಲೆಯಲ್ಲಿರುವ ಮೂರು ಪರವಾನಗಿ ಪಡೆದ ಮದ್ಯದ ಅಂಗಡಿಗಳ ಇಬ್ಬರು ವ್ಯವಸ್ಥಾಪಕರು ಮತ್ತು ಇಬ್ಬರು ಮಾರಾಟಗಾರರು ಸೇರಿದ್ದಾರೆ. ಇವರು ರಾಥೋರ್ ಮತ್ತು ಇತರರಿಗೆ ಅಕ್ರಮವಾಗಿ ಮದ್ಯವನ್ನು ಪೂರೈಸುತ್ತಿದ್ದರು ಎಂದು ಆರೋಪಿಸಲಾಗಿದೆ.

ನಕಲಿ ಮದ್ಯ ತಯಾರಿಸಲು ಬಳಸಲಾದ ರಾಸಾಯನಿಕಗಳನ್ನು ಪೂರೈಸಿದ್ದ ಇಂದೋರ್‌ನ ಖಾಸಗಿ ಸಂಸ್ಥೆಯ ಗೋದಾಮನ್ನು ಪೊಲೀಸರು ಬಂದ್ ಮಾಡಿದ್ದಾರೆ.

ದೇವಾಸ್ ಜಿಲ್ಲೆಯ ಚಂದನಾ, ಬಿಂಜನಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೆಪ್ಟೆಂಬರ್ 27ರಿಂದ ಅಕ್ಟೋಬರ್ 16ರ ನಡುವೆ ವಿಷಪೂರಿತ ಮದ್ಯ ಸೇವಿಸಿ ಕನಿಷ್ಠ 10 ಮಂದಿ ಮೃತಪಟ್ಟಿದ್ದರು ಎಂದು ವರದಿಯಾಗಿದೆ.

ಕಳೆದ ಒಂದು ತಿಂಗಳಲ್ಲಿ ಈ ಪ್ರದೇಶಗಳಲ್ಲಿ ನಕಲಿ ಮದ್ಯ ಸೇವನೆಯಿಂದ 22 ಮಂದಿ ಮೃತಪಟ್ಟಿದ್ದಾರೆ ಮತ್ತು ಕನಿಷ್ಠ 40 ಮಂದಿ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ದೂರಿದ್ದಾರೆ.

ವಿವಾದ ತೀವ್ರಗೊಂಡ ಬೆನ್ನಲ್ಲೇ ನಕಲಿ ಮದ್ಯ ತಯಾರಿಕೆ ಸಂಬಂಧ ತನಿಖೆ ನಡೆಸಲು ರಾಜ್ಯ ಸರ್ಕಾರವು ಐವರು ಸದಸ್ಯರನ್ನೊಳಗೊಂಡ ಉನ್ನತ ಮಟ್ಟದ ತನಿಖಾ ತಂಡವನ್ನು ರಚಿಸಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries