HEALTH TIPS

ಮೀನುಗಾರರಿಗೆ ಆಸರೆಯಾದ ಮೊಬೈಲ್ ಮೀನು ಮಾರಾಟ ಕಿಯೋಸ್ಕ್‌ಗಳು

ಕಾಸರಗೋಡು: ಮೀನು ಮಾರಾಟ ಕ್ಷೇತ್ರದಲ್ಲಿ ಮೀನುಗಾರರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೇರಳ ಸರ್ಕಾರ ಜಾರಿಗೊಳಿಸಿರುವ ಮೊಬೈಲ್ ಫಿಶ್ ವೆಂಡಿಂಗ್ ಕಿಯೋಸ್ಕ್ ಯೋಜನೆ ಉತ್ತಮ ಫಲಿತಾಂಶ ನೀಡುತ್ತಿದೆ. ಈ ಯೋಜನೆಯಡಿ ಮೀನುಗಾರರಿಗೆ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ವಾಹನಗಳನ್ನು ಉಚಿತವಾಗಿ ವಿತರಿಸಲಾಗಿದೆ.


ಕಾಸರಗೋಡು ಮತ್ತು ಉಪ್ಪಳ ಮಾರುಕಟ್ಟೆಗಳಲ್ಲಿ ಹಲವು ವರ್ಷಗಳಿಂದ ಮೀನು ಮಾರಾಟ ಮಾಡುತ್ತಿರುವ ಫಲಾನುಭವಿ ಎಸ್. ಯೋಗಿನಿ ಹಾಗೂ ಅವರ ಸಹೋದ್ಯೋಗಿಗಳು ಈ ಯೋಜನೆಯಿಂದ ತಮ್ಮ ವ್ಯಾಪಾರ ಸುಧಾರಿಸಿದ್ದು, ಆದಾಯವೂ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ಮಾರುಕಟ್ಟೆಯಲ್ಲಿ ವ್ಯಾಪಾರ ಮುಗಿದ ಬಳಿಕ ಉಳಿದ ಮೀನುಗಳನ್ನು ಗ್ರಾಮೀಣ ಪ್ರದೇಶಗಳಿಗೆ ಕೊಂಡೊಯ್ದು ಮಾರಾಟ ಮಾಡಲು ಈ ವಾಹನಗಳು ನೆರವಾಗುತ್ತಿವೆ. ಮೀನು ಮಾರಾಟಕ್ಕಾಗಿ ವಿವಿಧ ಸ್ಥಳಗಳಿಗೆ ಸಂಚರಿಸುವುದಕ್ಕೂ ಕಿಯೋಸ್ಕ್ ವಾಹನ ಅನುಕೂಲವಾಗಿದೆ.

ಮುಂಜಾನೆ ಮಂಗಳೂರಿನ ಮಾರುಕಟ್ಟೆಗೆ ತೆರಳಿ ಕಡಿಮೆ ಬೆಲೆಗೆ ಮೀನು ಖರೀದಿಸಿ ತರಲು ಸಾಧ್ಯವಾಗುತ್ತಿದೆ. ವಾಹನದಲ್ಲಿರುವ ಸೌಲಭ್ಯಗಳಿಂದ ಮೀನುಗಳನ್ನು ತಾಜಾವಾಗಿ, ಕೆಡದಂತೆ ಸಂಗ್ರಹಿಸಿಡಲು ಸಹಾಯವಾಗುತ್ತಿದೆ ಎಂದು ಯೋಗಿನಿ ಮತ್ತು ಸಹೋದ್ಯೋಗಿಗಳು ತಿಳಿಸಿದ್ದಾರೆ.

ಮಹಿಳಾ ಮೀನುಗಾರರಿಗೆ ಆರ್ಥಿಕ ಬಲ

ಈ ಯೋಜನೆಯ ಪ್ರಮುಖ ಫಲಾನುಭವಿಗಳು ಮಹಿಳಾ ಮೀನುಗಾರರಾಗಿದ್ದು, ಅವರ ವ್ಯಾಪಾರ ಅಭಿವೃದ್ಧಿ ಮತ್ತು ಆರ್ಥಿಕ ಸ್ವಾವಲಂಬನೆಗೆ ಇದು ನೆರವಾಗುತ್ತಿದೆ.

ಕೇರಳ ಸರ್ಕಾರದ 100 ದಿನಗಳ ಕಾರ್ಯಯೋಜನೆಯ ಭಾಗವಾಗಿ ಮೀನುಗಾರಿಕಾ ಇಲಾಖೆ ಈ ಕಿಯೋಸ್ಕ್ ವಾಹನಗಳನ್ನು ವಿತರಿಸಿದೆ.

ಸಮಗ್ರ ಆಧುನಿಕ ಕರಾವಳಿ ಮೀನುಗಾರಿಕಾ ಗ್ರಾಮ ಯೋಜನೆಯಡಿ ಶಿರಿಯ ಮತ್ತು ಬಂಕಾರ ಮಂಜೇಶ್ವರ ಪ್ರದೇಶಗಳ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಐವರು ಮಹಿಳಾ ಮೀನುಗಾರರಿಗೆ ಒಂದು ಕಿಯೋಸ್ಕ್ ಎಂಬ ಲೆಕ್ಕದಲ್ಲಿ ಒಟ್ಟು 10 ಕಿಯೋಸ್ಕ್‌ಗಳನ್ನು ವಿತರಿಸಲಾಗಿದೆ.

ಮೀನುಗಾರಿಕಾ ಸಚಿವ ವಿ.ಇ. ಅಬ್ದುಲ್ ಗಫೂರ್ ಅವರು ಕಿಯೋಸ್ಕ್‌ಗಳ ಕೀಲಿಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿ, ವಾಹನಗಳ ಸಂಚಾರಕ್ಕೆ ಚಾಲನೆ ನೀಡಿದ್ದರು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries