HEALTH TIPS

ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಮುಂದುವರಿದ ವಿದ್ಯಾರ್ಥಿ ಪ್ರತಿಭಟನೆ, ಜಲಫಿರಂಗಿ ಪ್ರಯೋಗ- ವಿಚಾರಗೋಷ್ಠಿ ಬುಡಮೇಲುಗೊಳಿಸಲೆತ್ನಿಸಿದ ವಿದ್ಯಾರ್ಥಿಗಳ ಅಮಾನತು ವಾಪಸಾತಿಗಾಗಿ ಪ್ರತಿಭಟನೆ

ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನಲ್ಲಿ ವಿದ್ಯಾರ್ಥಿಗಳ ಹೋರಾಟ ಮುಂದುವರಿದಿದೆ. ವಿಶ್ವ ವಿದ್ಯಾಲಯದಲ್ಲಿನಡೆದ ವಂದೇ ಮಾತರಂ ರಾಷ್ಟ್ರೀಯ ವಿಚಾರಗೋಷ್ಠಿಯನ್ನು ಅಲ್ಲೋಲ ಕಲ್ಲೋಲಗೊಳಿಸಿ, ಅತಿಥಿಗಳಿಗೆ ಚಪ್ಪಲಿ, ಬೂಟು ಪ್ರದರ್ಶನ ನಡೆಸಿ ದಾಂಧಲೆ ನಡೆಸಿದ್ದ ಐವರು ವಿದ್ಯಾರ್ಥಿಗಳ ಅಮಾನತು ವಾಪಾಸುಪಡೆಯುವಂತೆ ಆಗ್ರಹಿಸಿ ಎಸ್‍ಎಫ್‍ಐ ಜಿಲ್ಲಾ ಸಮಿತಿ ವತಿಯಿಂದ ಭಾರೀ ಪ್ರತಿಭಟನೆ ನಡೆಯಿತು.  


ಪೆರಿಯ ಪಟ್ಟಣದಿಂದ ಆರಂಭಗೊಂಡ ಮೆರವಣಿಗೆಯನ್ನು ಪೆÇಲೀಸರು ಕ್ಯಾಂಪಸ್ ವಠಾರದಲ್ಲಿ ಬ್ಯಾರಿಕೇಡ್ ಅಳವಡಿಸಿ ತಡೆದರು. ಈ ಸಂದರ್ಭ ಎಸ್‍ಎಫ್‍ಐ ಕಾರ್ಯಕರ್ತರು ಬ್ಯಾರಿಕೇಡ್ ಮೇಲೇರಿ, ತೆರವುಗೊಳಿಸಲುಯತ್ನಿಸುತ್ತಿದ್ದಂತೆ ಪೆÇಲೀಸರು ಜಲಫಿರಂಗಿ ಪ್ರಯೋಗಿಸಿದರು. ಇದೇ ಸಂದರ್ಭ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕ್ಯಾಂಪಸ್‍ನೊಳಗೆ ಹಾಡು ಹಾಡುತ್ತಾ ಘೋಷಣೆ ಮೊಳಗಿಸಿ ಕ್ಯಾಂಪಸ್‍ನೊಳಗೆ ಪ್ರತಿಭಟನೆ ನಡೆಸಿದರು.   

ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಡೆದ ವಂದೇ ಮಾತರಂ ವಿಚಾರ ಸಂಕಿರಣಕ್ಕೆ ಸಂಬಂಧಿಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ವಿಚಾರಸಂಕಿರಣ ಬುಡಮೇಲುಗೊಳಿಸಲೆತ್ನಿಸಿದ 25 ಮಂದಿ ವಿದ್ಯಾರ್ಥಿಗಳ ವಿರುದ್ಧ ಬೇಕಲ ಠಾಣೆ ಪೆÇಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದರು.  ಇದರ ಜತೆಗೆ ಎಸ್‍ಎಫ್‍ಐ ಕಾರ್ಯಕರ್ತರಾದ ಎಸ್. ಸಯ್ಯದ್ ಅಲಿ, ವಿ.ಬಿ. ಆವೇದ್, ಎಂ.ಎಸ್‍ಎಫ್ ಕಾರ್ಯಕರ್ತರಾದ ಶಬೀರ್, ತಖಿಯುದ್ದೀನ್ ಹಾಗೂ ಎನ್‍ಎಸ್‍ಯು ಕಾರ್ಯಕರ್ತ ಯಾಸಿನ್ ಅವರನ್ನು ವಿಶ್ವವಿದ್ಯಾಲಯವು ಅಮಾನತುಗೊಳಿಸಿತ್ತು. ಅಮಾನತುಗೊಂಡ ವಿದ್ಯಾರ್ಥಿಗಳು ಎರಡು ವಾರಗಳ ಕಾಲ ವಿವಿ ಕ್ಯಾಂಪಸ್ ಆವರಣಕ್ಕೆ ಆಗಮಿಸಕೂಡದು ಮತ್ತು ಹಾಸ್ಟೆಲ್ ಪ್ರವೇಶಿಸಬಾರದೆಂದು ಆದೇಶಿಸಲಾಗಿದೆ. ವಿದ್ಯಾರ್ಥಿಗಳ ಅಮಾನತು ಆದೇಶ ಹಿಂಪಡೆಯಬೇಕೆಂದು ಆಗ್ರಹಿಸಿ ಎಸ್‍ಎಫ್‍ಐ ಪ್ರತಿಭಟನೆ ತೀವ್ರಗೊಳಿಸಿದೆ.

ವಿದ್ಯಾರ್ಥಿಗಳ ಅಮಾನತು ಖಂಡಿಸಿ ಗುರುವಾರ ರಾತ್ರಿಯೇ ವಿಶ್ವ ವಿದ್ಯಾಲಯ ವಠಾರದಲ್ಲಿ ಪ್ರತಿಭಟನೆ ಆರಂಭಗೊಂಡಿದೆ. ವಿಶ್ವ ವಿದ್ಯಾಲಯದ ಶಿಸ್ತು ಪಾಲನಾ ಅಧಿಕಾರಿ ಪೆÇ್ರ. ಪಿ. ಶ್ರೀಕುಮಾರ್ ಅವರು ಶಿಸ್ತು ಕ್ರಮದ ಅಂಗವಾಗಿ ಐವರು ವಿದ್ಯಾರ್ಥಿಗಳನ್ನು ಅಮಾನತು ಮಾಡಿದ್ದರು. ಆಹ್ವಾನಿತ ಗಣ್ಯರು, ಮಾಧ್ಯಮ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಎಸ್‍ಎಫ್‍ಐ ಹಾಗೂ ಎಂಎಸ್‍ಎಫ್  ಸಂಘಟನೆ ನಡೆಸಿದ ರೋಷಾವೇಶದ ಪ್ರತಿಭಟನೆ, ಚಪ್ಪಲಿ ಹಾಗೂ ಬೂಟು ಕೈಯ್ಯಲ್ಲಿ ಹಿಡಿದು ವೇದಿಕೆಯಲ್ಲಿದ್ದ ಅತಿಥಿಗಳಿಗೆ ತೋರಿಸಿರುವುದು ವಿದ್ಯಾರ್ಥಿಗಳಿಂದ ನಿರೀಕ್ಷಿಸಲಾಗದ ಹೀನ ಪ್ರವೃತ್ತಿ ಮತ್ತು ಗಂಭೀರ ಶಿಸ್ತು ಉಲ್ಲಂಘನೆ ಎಂದು ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries