ಕಾಸರಗೋಡು: ನಗರದಲ್ಲಿ ಅವೈಜ್ಞಾನಿಕ ಟ್ರಾಫಿಕ್ ವ್ಯವಸ್ಥೆ, ಅಕ್ರಮ ವಾಹನ ನಿಲುಗಡೆ ಮತ್ತು ರಸ್ತೆ ಬದಿಯ ವ್ಯಾಪಾರದಿಂದ ಉಂಟಾಗುವ ಸಂಚಾರ ದಟ್ಟಣೆಯಿಂದ ಉಂಟಗುವ ಟ್ರಾಫಿಕ್‍ಜಾಮ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಆಗ್ರಹಿಸಿ ಅ. 10ರಂದು ನಡೆಸಲುದ್ದೇಶಿಸಿದ್ದ ಖಾಸಗಿ ಬಸ್‍ಗಳ ಹಳೇಬಸ್‍ನಿಲ್ದಾಣ ಪ್ರವೇಶಿದಿರುವ ಮುಷ್ಕರ ಹಿಂತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಕೇರಳ ರಾಜ್ಯ ಖಾಸಗಿ ಬಸ್ ಆಪರೇಟರ್‍ಗಳ ಒಕ್ಕೂಟದ ಕಾಸರಗೋಡು ತಾಲೂಕು ಘಟಕ ಪ್ರಕಟಣೆ ಹೊರಡಿಸಿದೆ.
ಹಳೇ ಬಸ್ ನಿಲ್ದಾಣ ಸುತ್ತು ಬಳಸಿ ಖಾಸಗಿಬಸ್‍ಗಳು ಸಂಚರಿಸುವ ಮಧ್ಯೆ ಅವೈಜ್ಞಾನಿಕ ಟ್ರಾಫಿಕ್ ವ್ಯವಸ್ಥೆ ಹಾಗೂ ಅಕ್ರಮ ವಾಹನ ನಿಲುಗಡೆಯಿಂದ ನಿಗದಿತ ಸಮಯಕ್ಕೆ ಸಂಚರಿಸಲು ಸಾಧ್ಯವಾಗುತ್ತಿಲ್ಲ.ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಅ.10ರಿಂದ ಹೊಸ ಬಸ್ ನಿಲ್ದಾಣಕ್ಕೆ ಸಂಚಾರ ಸ್ಥಗಿತಗೊಳಿಸುವ ತೀರ್ಮಾನವನ್ನು ಒಕ್ಕೂಟ ಕೈಗೊಂಡಿತ್ತು. ಈ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ನಡೆಸಿದ ಮಾತುಕತೆಯನ್ವಯ ಸಮಸ್ಯೆ ಪರಿಹಾರಕ್ಕಾಗಿ ವಿಸ್ತøತ ಸಭೆ ನಡೆಯಬೇಕಾಗಿದ್ದು, ಅಲ್ಲಿಯ ವರೆಗೆ ಮುಷ್ಕರ ಮುಂದೂಡುವಂತೆ ಸಲಹೆ ನೀಡಿರುವ ಹಿನ್ನೆಲೆಯಲ್ಲಿ ಮುಷ್ಕರ ಮುಂದೂಡಿರುವುದಾಗಿ ಒಕ್ಕೂಟ ಪದಾದಿಕಾರಿಗಳು ತಿಳಿಸಿದ್ದಾರೆ.


