HEALTH TIPS

ಭಾರತದ ಕಾನೂನುಗಳನ್ನು ಪಾಲಿಸಿದರೆ ಮಸ್ಕ್‌ರ ಸ್ಟಾರ್‌ಲಿಂಕ್‌ಗೆ ಸ್ವಾಗತ: ರಿಲಯನ್ಸ್

ನವದೆಹಲಿ: ಸ್ಯಾಟಲೈಟ್ ಕಮ್ಯುನಿಕೇಷನ್ಸ್ ಕ್ಷೇತ್ರದಲ್ಲಿ ಇಲಾನ್ ಮಸ್ಕ್ ಅವರ 'ಸ್ಟಾರ್‌ಲಿಂಕ್' ಸೇರಿದಂತೆ ಯಾವುದೇ ಸ್ಪರ್ಧೆಗೂ ನಾವು ಹೆದರುವುದಿಲ್ಲ ಹಾಗೂ ಅದನ್ನು ಸ್ವಾಗತಿಸುತ್ತೇವೆ. ಆದರೆ ಪ್ರತಿಯೊಂದು ಕಂಪನಿಯೂ ಭಾರತದ ಕಾನೂನುಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ತಿಳಿಸಿದೆ. 


ಭಾರತದ ಸ್ಯಾಟಲೈಟ್ ಕಮ್ಯುನಿಕೇಷನ್ಸ್ ಮಾರುಕಟ್ಟೆಯಲ್ಲಿನ ಸ್ಪರ್ಧೆಯ ಕುರಿತು ಇಲಾನ್ ಮಸ್ಕ್ ಇತ್ತೀಚೆಗೆ ಸಾರ್ವಜನಿಕವಾಗಿ ಮಾಡಿದ ಟೀಕೆಗಳ ನಂತರ ರಿಲಯನ್ಸ್ ಸಂಸ್ಥೆಯು ಈ ಹೇಳಿಕೆ ಬಿಡುಗಡೆ ಮಾಡಿದೆ. ಸ್ಯಾಟಲೈಟ್ ವಲಯದಲ್ಲಿ ಹೆಚ್ಚಿನ ಸ್ಪರ್ಧೆ ಏರ್ಪಟ್ಟರೆ ಅದು ಗ್ರಾಹಕರಿಗೆ ಹೆಚ್ಚಿನ ಅನುಕೂಲ ತರಲಿದೆ ಎಂದು ವಾದಿಸಿದ್ದ ಮಸ್ಕ್, ರಿಲಯನ್ಸ್ ಸಂಸ್ಥೆಯನ್ನು ಟೀಕಿಸಿದ್ದರು. ಅವರ ಟೀಕೆಗಳಿಗೆ ರಿಲಯನ್ಸ್ ನೀಡಿದ ಮೊದಲ ಪ್ರತಿಕ್ರಿಯೆ ಇದಾಗಿದೆ.

'ರಿಲಯನ್ಸ್ ಮತ್ತು ಭಾರತೀಯ ಮಾರುಕಟ್ಟೆಯ ಕುರಿತು ಇತ್ತೀಚೆಗೆ ಬಂದಿರುವ ಹೇಳಿಕೆಗಳ ಹಿನ್ನೆಲೆಯಲ್ಲಿ, ನಾವು ನಿಜವಾದ ಸತ್ಯಾಂಶಗಳನ್ನು ದಾಖಲಿಸಲು ಬಯಸುತ್ತೇವೆ. ನಾವೆಂದೂ ಸ್ಪರ್ಧೆಗೆ ಹೆದರಿಲ್ಲ. ಸ್ಪರ್ಧೆ ಎನ್ನುವುದು ಗ್ರಾಹಕರಿಗೆ ಯಾರು ಅತ್ಯುತ್ತಮ ಸೇವೆ ನೀಡುತ್ತಾರೆ ಎಂಬುದನ್ನು ನಿರ್ಧರಿಸುವ ನಿಜವಾದ ಒರೆಗಲ್ಲು ಆಗಿದೆ' ಎಂದು ಹೇಳಿದೆ.

ಸ್ಯಾಟಲೈಟ್ ಕಮ್ಯುನಿಕೇಷನ್ಸ್ ಕ್ಷೇತ್ರದಲ್ಲಿ ಸ್ಟಾರ್‌ಲಿಂಕ್ ಸೇರಿದಂತೆ ಯಾವುದೇ ಸ್ಪರ್ಧೆಯನ್ನು ನಾವು ಸ್ವಾಗತಿಸುತ್ತೇವೆ. ಜಿಯೊ ಸೇರಿದಂತೆ ಪ್ರತಿಯೊಂದು ಕಂಪನಿಯೂ ಭಾರತದ ಜನರಿಗೆ ಸೇವೆ ಸಲ್ಲಿಸಬೇಕು ಮತ್ತು ದೇಶದ ಕಾನೂನು ಹಾಗೂ ನೀತಿಗಳಿಗೆ ಬದ್ಧವಾಗಿರಬೇಕು ಎಂದು ಹೇಳಿದೆ.

ಜನರ ಜೀವನವನ್ನು ಸುಧಾರಿಸುವಂತಹ ಹೂಡಿಕೆ ಹಾಗೂ ತಂತ್ರಜ್ಞಾನ ನಾವೀನ್ಯತೆಯನ್ನು ಮುಕ್ತವಾಗಿ ಸ್ವಾಗತಿಸುವ ಭಾರತದಲ್ಲೇ ರಿಲಯನ್ಸ್ ಕೂಡ ಬೆಳೆದಿದೆ. ಭಾರತ ಸರ್ಕಾರವು ತಿಳಿಸಿರುವಂತೆ, ಅರ್ಜಿದಾರರು ಭಾರತೀಯರಿರಲಿ ಅಥವಾ ವಿದೇಶಿಯರಿರಲಿ, ಪ್ರತಿಯೊಬ್ಬರಿಗೂ ಒಂದೇ ರೀತಿಯ ಪ್ರಕ್ರಿಯೆಯನ್ನು ಅನ್ವಯಿಸುತ್ತದೆ. ಜಿಯೊ ಕಂಪನಿಯ ಸ್ವಂತ ಸ್ಯಾಟಲೈಟ್ ಸೇವೆಗಳು ಕೂಡ ಸರ್ಕಾರಿ ಅನುಮತಿಗಳಿಗಾಗಿ ಕಾಯುತ್ತಿವೆ ಎಂದು ಹೇಳಿದೆ.

ಜಿಯೊ ಸಂಸ್ಥೆಯು 2016ರಲ್ಲಿ ಭಾರತದ ಟೆಲಿಕಾಂ ಮಾರುಕಟ್ಟೆಗೆ ಒಬ್ಬನೇ ಒಬ್ಬ ಗ್ರಾಹಕನೂ ಇಲ್ಲದೆ ಹೊಸ ಸಂಸ್ಥೆಯಾಗಿ ಪ್ರವೇಶಿಸಿತ್ತು. ಆದರೆ ಕೇವಲ ಹತ್ತು ವರ್ಷಗಳ ಅವಧಿಯಲ್ಲಿ 53 ಕೋಟಿಗೂ ಹೆಚ್ಚು ಗ್ರಾಹಕರ ನಂಬಿಕೆಯನ್ನು ಗಳಿಸಿದೆ. ಭಾರತೀಯರಿಗೆ ವಿಶ್ವದಲ್ಲೇ ಅತ್ಯಂತ ಕೈಗೆಟುಕುವ ದರದ ಡೇಟಾ ಹಾಗೂ ಅತ್ಯುತ್ತಮ ಡಿಜಿಟಲ್ ಮೂಲಸೌಕರ್ಯವನ್ನು ಒದಗಿಸಿದೆ ಎಂದು ತಿಳಿಸಿದೆ.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries