ಕಾಸರಗೋಡು ಸರ್ಕಾರಿ ಯು.ಪಿ. ಶಾಲೆಯಲ್ಲಿ ಕಾರ್ಯಕ್ರಮ; ಬೆಟರ್ ಲೈಫ್ ಫೌಂಡೇಶನ್ ಇಂಡಿಯಾದಿಂದ ಯೋಜನೆ
ಕಾಸರಗೋಡು: ಬೆಟರ್ ಲೈಫ್ ಫೌಂಡೇಶನ್ ಇಂಡಿಯಾ ಸಂಸ್ಥೆಯ ವತಿಯಿಂದ ಜಾರಿಗೊಳಿಸಿರುವ ‘ಆರೋಗ್ಯವಂತ ಶಾಲಾ ಬಾಲಕಿಯರು’ ಯೋಜನೆಯ ಅಂಗವಾಗಿ ಕಾಸರಗೋಡು ಸರ್ಕಾರಿ ಯು.ಪಿ. ಶಾಲೆಯ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್ಗಳನ್ನು ವಿತರಿಸಲಾಯಿತು. ಕಾಸರಗೋಡು ನಗರಸಭೆಯ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷೆ ಎನ್.ಆರ್. ವಿದ್ಯಾಶ್ರೀ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೆ.ಸಿ. ಲೈಜುಮೋನ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಬೆಟರ್ ಲೈಫ್ ಫೌಂಡೇಶನ್ ಇಂಡಿಯಾದ ಅಧ್ಯಕ್ಷ ಮೋಹನದಾಸ್ ವಯಲಂಕುಳಿ, ಕಾರ್ಯಾಚರಣೆ ಮುಖ್ಯಸ್ಥ ಕೆ. ಅಕ್ಷಯ್, ಕಾರ್ಯಕ್ರಮ ಸಂಯೋಜಕಿ ಟಿ. ದೇವಿಕಾ ಹಾಗೂ ಸಿಬ್ಬಂದಿ ಕಾರ್ಯದರ್ಶಿ ಎ. ಶ್ರೀಕುಮಾರ್ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಭಾರತಿ ಸ್ವಾಗತಿಸಿದರು. ಡಾ. ಒ. ಕನಕಲತಾ ವಂದಿಸಿದರು.


