ಮಂಜೇಶ್ವರ: ಚೆರ್ವತ್ತೂರು ಉಪಜಿಲ್ಲೆಯ ಸರ್ಕಾರಿ ಪಾಡಿಕ್ಕೀಲ್ ಯು.ಪಿ ಶಾಲೆಗೆ ವರ್ಗಾವಣೆಯಾಗಿ ತೆರಳುತ್ತಿರುವ ಮಂಜೇಶ್ವರ ಬಿ.ಆರ್.ಸಿ ಬಿ.ಪಿ.ಸಿ ರಾಜಗೋಪಾಲನ್ ಅವರಿಗೆ ಸಹೋದ್ಯೋಗಿಗಳು ಬೀಳ್ಕೊಡುಗೆ ನೀಡಿದರು. ಮಂಜೇಶ್ವರ ಎ.ಇ.ಒ ನಾರಾಯಣ ದೇಲಂಪಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮಂಜೇಶ್ವರ ಬಿ.ಆರ್.ಸಿಯ ಚಟುವಟಿಕೆಗಳಿಗೆ ನೇತೃತ್ವ ವಹಿಸುವುದರ ಜೊತೆಗೆ ವಿಶೇಷ ಚೇತನ ಮಕ್ಕಳ ಕಲ್ಯಾಣ ಮತ್ತು ಉನ್ನತಿಗಾಗಿ ವಿಶೇಷ ಗಮನ ಹರಿಸಿ ಕೆಲಸ ಮಾಡಿದ ವ್ಯಕ್ತಿ ರಾಜಗೋಪಾಲನ್ ಎಂದು ಸಮಾರಂಭದಲ್ಲಿ ಮಾತನಾಡಿ ಅಭಿನಂದಿಸಿದರು.
ಮುಳಿಂಜ ಜಿ.ಎಲ್.ಪಿ.ಶಾಲೆಯ ಮುಖ್ಯಶಿಕ್ಷಕಿ ಚಿತ್ರಾವತಿ ಚಿಗುರುಪಾದೆ, ಮಂಜೇಶ್ವರ ಬಿ.ಆರ್.ಸಿಯಲ್ಲಿ ತನ್ನ ಅಲ್ಪಾವಧಿಯಲ್ಲಿಯೇ ಅತಿ ಹೆಚ್ಚು ವಿನೂತನ ಕಾರ್ಯಕ್ರಮ ಆಯೋಜಿಸಿ ಯಾವುದೇ ನಿಧಿಗಳಿಲ್ಲದಿದ್ದರೂ ಪ್ರಾಯೋಜಕತ್ವ ಪಡೆದು ವಿಶೇಷ ಚೇತನ ಮಕ್ಕಳಿಗಾಗಿ ವಿಹಾರಯಾತ್ರೆ, ಹಾಸಿಗೆ ಹಿಡಿದ ಮಕ್ಕಳಿಗೆ ಡಯಾಪರ್ ವಿತರಣೆ, ಓಣಂ ಆಚರಣೆ ಕಾರ್ಯಕ್ರಮಗಳು ಮುಂತಾದ ಚಟುವಟಿಕೆಗಳಿಗೆ ಅವರು ನೇತೃತ್ವ ವಹಿಸಿದ್ದರು. ಮಕ್ಕಳ ಸಂತೋಷ ಮತ್ತು ಸಾಮಾಜಿಕ ಪಾಲ್ಗೊಳ್ಳುವಿಕೆಗೆ ಮಹತ್ವ ನೀಡಿ ನಡೆಸಿದ ಇಂತಹ ಕಾರ್ಯಗಳು ಗಮನಾರ್ಹವಾದವು ಎಂದು ತಿಳಿಸಿ ಅವರ ಪ್ರಾಮಾಣಿಕ ಕಾರ್ಯ ವೈಖರಿ ನಮಗೆಲ್ಲ ಮಾರ್ಗ ದೀಪವೆಂದರು.
ಬಿ.ಆರ್.ಸಿ. ಯ ಶಾರದಾ, ರೀಮಾ, ಅನಿತಾ, ವೇಗಾ, ಸಜಿತ್ ಎ., ಸಚಿನ್ ಕುಮಾರ್, ಮೋಹಿನಿಕುಮಾರಿ, ರಶ್ಮಿ, ಎಂ.ಪ್ರಕಾಶನ್, ಸುನಿಲ್ ಕುಮಾರ್ ಮುಂತಾದವರು ಶುಭ ಹಾರೈಸಿದರು. ಬಿ.ಆರ್.ಸಿ ತರಬೇತುದಾರ ಎಂ.ಎ ಸುಮಯ್ಯ ಸ್ವಾಗತಿಸಿ, ಸಿ.ಆರ್.ಸಿ.ಸಿ ನಾರಾಯಣ ರಾಜ್ ವಂದಿಸಿದರು.

.jpg)
.jpg)
