ಬದಿಯಡ್ಕ: ಕನ್ನೆಪ್ಪಾಡಿ ಆಶ್ರಮ ಆಶ್ರಮದ ಸಂಸ್ಥಾಪಕಿ ದಿ. ಶಾರದಾ ಟೀಚರ್ ಅವರ ಪುಣ್ಯ ಸ್ಮರಣೆ ಆಶ್ರಮದಲ್ಲಿ ಆಶ್ರಮ ನಿರ್ವಹಣಾ ಟ್ರಸ್ಟ್ ಅಧ್ಯಕ್ಷ ಶ್ರೀಕೃಷ್ಣ ಭಟ್ ಪುದುಕೋಳಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಹಿಂದೂ ಸೇವಾ ಪ್ರತಿಷ್ಠಾನದ ನಿರ್ದೇಶಕ ಸುರೇಶ್ ಈ ಸಂದರ್ಭ ಮಾತನಾಡಿ, ಆಶ್ರಮವು ತನ್ನ ಸಂಸ್ಥಾಪಕಿಯಾದ ದಿ. ಬಿ.ವೈ. ಶಾರದಾ ಟೀಚರ್ ಅವರ ದೂರದೃಷ್ಟಿ, ಸಹಾನುಭೂತಿ ಮತ್ತು ನಿಸ್ವಾರ್ಥ ಸೇವೆಯನ್ನು ಅತ್ಯಂತ ಕೃತಜ್ಞತೆಯಿಂದ ಸ್ಮರಿಸುತ್ತದೆ. ಅವರ ಮೌಲ್ಯಗಳು ಮತ್ತು ಸಮರ್ಪಣಾ ಭಾವವು ಆಶ್ರಯ ಆಶ್ರಮದ ಪಯಣಕ್ಕೆ ನಿರಂತರ ಸ್ಫೂರ್ತಿಯನ್ನು ನೀಡುತ್ತಿವೆ ಎಂದರು.
ಜನಸೇವಾ ವಿಶ್ವಸ್ಥ ನಿಧಿ ಟ್ರಸ್ಟಿನ ಶಶಿಧರ ಕೆ. ಶಾರದ ಟೀಚರ್ ಅವರ ದೂರದೃಷ್ಟಿ, ಸಮರ್ಪಣೆ ಮತ್ತು ನಿರಂತರ ಕೊಡುಗೆಯನ್ನು ಸ್ಮರಿಸಿದರು.
ಸವಿತಾ ಭಟ್, ಸುಚಿತ ಟೀಚರ್ ಗುಣಾಜೆ ಶಿವಶಂಕರ ಭಟ್, ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷ ಶಂಕರ ಡಿ, ಬ್ಲಾಕ್ ಪಂಚಾಯತಿ ಸದಸ್ಯ ಮಹೇಶ್ ವಳಕ್ಕುಂಜ, ಅಖಿಲೇಶ್ ನಗುಮುಗಂ ಅವರು ಶಾರದ ಟೀಚರ್ ಜೊತೆಗಿನ ನೆನಪುಗಳನ್ನು ಹಂಚಿಕೊಂಡರು.
ಬದಿಯಡ್ಕ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಕೆ.ಎಂ.ಅಶ್ವಿನಿ, ಸದಸ್ಯರುಗಳಾದ ಗಂಗಾಧರ ಗೋಳಿಯಡ್ಕ, ಬಾಲಕೃಷ್ಣ ಶೆಟ್ಟಿ, ಶ್ಯಾಮ ಪ್ರಸಾದ್ ಸರಳಿ ಅವಿನಾಶ್ ರೈ, ಶ್ರೀನಾಥ್, ಬಿ.ಕೆ. ಪ್ರಕಾಶ್, ಟಿ. ಗಣಪತಿ ಭಟ್, ಸುರೇಶ್ ಮಿಮಿಕ್ರಿ, ಪ್ರಸಾದ್ ಕುಳಮರ್ವ, ಪ್ರತೀಕ್ ಮುಂತಾವರು ಉಪಸ್ಥಿತರಿದ್ದರು. ರಮೇಶ್ ಕಳೇರಿ ಸ್ವಾಗತಿಸಿ, ರಾಘವೇಂದ್ರ ನಾಯಕ್ ವಂದಿಸಿದರು. ಅನಂತಪುರ ಮಹಿಳಾ ಭಜನಾ ಸಂಘ, ನಾಯ್ಕಾಪು ನೇತೃತ್ವದಲ್ಲಿ ಭಜನಾ ಸೇವೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸಂಸ್ಥಾಪಕರ ಸ್ಮರಣಾರ್ಥ ಪುಷ್ಪಾರ್ಚನೆ, ಪ್ರಾರ್ಥನೆ ಮತ್ತು ಸಭೆ ನಡೆಯಿತು. ವಸಂತ ಬಾರಡ್ಕ, ಲೀಲಾವತಿ ಕನಕಪಾಡಿ ಭಕ್ತಿ ಗೀತೆ ಹಾಡಿದರು.

.jpg)
.jpg)
