ಕೊಲ್ಲಂನಲ್ಲಿ ಸಬ್ ಎಂಜಿನಿಯರ್ ಜಿಷಾ, ಓವರ್ಸೀಯರ್ ಮೊಹಮ್ಮದ್ ನೌಫಲ್ ಆಸ್ಪತ್ರೆಗೆ ದಾಖಲು
ಕೊಲ್ಲಂ: ಸಮರಸ ಸುದ್ದಿ ಡಾಟ್ ಕಾಮ್
ಕೊಲ್ಲಂನ ಪಳ್ಳಿಮುಕ್ಕಿನಲ್ಲಿ ಕರ್ತವ್ಯದಲ್ಲಿದ್ದ ಕೆಎಸ್ಇಬಿ ಅಧಿಕಾರಿಗಳ ಮೇಲೆ ವ್ಯಾಪಾರಿಯೊಬ್ಬರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪಳ್ಳಿಮುಕ್ಕು ವಿಭಾಗದ ಸಬ್ ಎಂಜಿನಿಯರ್ ಜಿಷಾ ಮತ್ತು ಓವರ್ಸೀಯರ್ ಮೊಹಮ್ಮದ್ ನೌಫಲ್ ಹಲ್ಲೆಗೊಳಗಾದವರು. ಇಬ್ಬರೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಎನ್ಎಸ್ ಸಹಕಾರ ಆಸ್ಪತ್ರೆಯ ಸಮೀಪ ವಿದ್ಯುತ್ ಕೇಬಲ್ ದುರಸ್ತಿ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಇದರಿಂದ ವ್ಯಾಪಾರಕ್ಕೆ ತೊಂದರೆಯಾಗಿದೆ ಎಂದು ಆಕ್ರೋಶಗೊಂಡ ವ್ಯಾಪಾರಿ, ಅಧಿಕಾರಿಗಳ ಬಳಿ ಬಂದು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಮರಸ ಸುದ್ದಿ ಡಾಟ್ ಕಾಮ್



