ಕುಂಬಳೆ: ಮುಜುಂಗಾವು ಶ್ರೀ ಪಾರ್ಥಸಾರಥಿ ಕ್ಷೇತ್ರದಲ್ಲಿ ತುಲಾ ಸಂಕ್ರಮಣ ಪ್ರಯುಕ್ತ ಶನಿವಾರ ತೀರ್ಥಸ್ನಾನ ನಡೆಯಿತು. ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಮಂದಿ ಭಕ್ತರು ಮುಂಜಾನೆಯಿಂದಲೇ ಕ್ಷೇತ್ರಕ್ಕೆ ತಲುಪಿ ತೀರ್ಥಸ್ನಾನದಲ್ಲಿ ಪಾಲ್ಗೊಂಡು ಪುನೀತರಾದರು.
ಮುಂಜಾನೆ 4 ಗಂಟೆಗೆ ವಾದ್ಯಘೋಷಗಳೊಂದಿಗೆ ದೇವರಿಗೆ ಅಭಿಷೇಕ ನಡೆಸಿದ ಬಳಿಕ ತೀರ್ಥಸ್ನಾನ ಆರಂಭಗೊಂಡಿತು. ಬೆಳ್ತಿಗೆ ಅಕ್ಕಿ ಹಾಗೂ ಹುರುಳಿಯನ್ನು ತಲೆಗೆ ನಿವಾಳಿಸಿ ಕೆರೆಗೆ ಸಮರ್ಪಿಸಿ ಮುಳುಗಿ ಸ್ನಾನ ಮಾಡಿದರೆ ಚರ್ಮರೋಗಗಳ ಸಹಿತ ವಿವಿಧ ರೋಗ ರುಜಿನಗಳು ವಾಸಿಯಾಗುವುದೆಂಬ ನಂಬಿಕೆಯಿದೆ. ತೀರ್ಥಸ್ನಾನದಂಗವಾಗಿ ಕೆರೆಯ ಸಮೀಪ ಭದ್ರತೆ ಏರ್ಪಡಿಸಲಾಗಿತ್ತು. ಭಾಗವಹಿಸಿದ ಎಲ್ಲಾ ಭಕ್ತರಿಗೂ ಕ್ಷೇತ್ರದಲ್ಲಿ ಅನ್ನದಾನ ಏರ್ಪಡಿಸಲಾಗಿತ್ತು. 10 ಸಾವಿರಕ್ಕಿಂತಲೂ ಮಿಕ್ಕಿದ ಜನರು ತೀರ್ಥಸ್ನಾನಗೈದಿರುವುದಾಗಿ ತಿಳಿದುಬಂದಿದೆ.
ಸುಗಮ ಸಂಚಾರ:
ತೀರ್ಥಸ್ನಾನಗೈಯ್ಯುವ ಭಕ್ತಾದಿಗಳ ಸುಗಮ ಸಂಚಾರಕ್ಕೆ ಕುಂಬಳೆ-ಮುಳ್ಳೇರಿಯ ಹಾಗೂ ಕುಂಬಳೆ-ಪೆರ್ಲ ರೂಟ್ ಗಳ ಬಸ್ ಗಳು ನಾಯ್ಕಾಪಿನಿಂದ ಮುಜುಂಗಾವು ಸನ್ನಿಧಿ ಹಾಗೂ ಸೂರಂಬೈಲು-ಮುಜುಂಗಾವು ಮೂಲಕ ಸಂಚರಿಸಿ ನೆರವಾದವು.

.jpg)
.jpg)
.jpg)
.jpg)
