HEALTH TIPS

ಬೇಳ ಸರ್ಕಾರಿ ಐಟಿಐಯಲ್ಲಿ ಆರೋಗ್ಯ ಮತ್ತು ಶುಚಿತ್ವದ ಕುರಿತು ಜಾಗೃತಿ ತರಗತಿ

ಬದಿಯಡ್ಕ: ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆಯ ಸಾಮೂಹಿಕ ಐಕ್ಯತಾ ಕಾರ್ಯಕ್ರಮ ಹಾಗೂ ಆರೋಗ್ಯ ಇಲಾಖೆಯ 'ಹೆಲ್ತ್ ಕೇರಳ' ಅಭಿಯಾನದ ಅಂಗವಾಗಿ ಬೇಳ ಸರ್ಕಾರಿ ಐಟಿಐಯಲ್ಲಿ ಆರೋಗ್ಯ ಜಾಗೃತಿ ತರಗತಿ ನಡೆಯಿತು.

'ಆರೋಗ್ಯ, ಶುಚಿತ್ವ ಮತ್ತು ವ್ಯಕ್ತಿತ್ವ ವಿಕಸನ' ಎಂಬ ವಿಷಯದ ಕುರಿತು ಬದಿಯಡ್ಕ ಬ್ಲಾಕ್ ಕುಟುಂಬ ಆರೋಗ್ಯ ಕೇಂದ್ರದ ಹೆಲ್ತ್ ಇನ್‍ಸ್ಪೆಕ್ಟರ್ ರಾಜೇಶ್ ಕೆ. ನಂಬಿಯಾರ್ ಅವರು ಜಾಗೃತಿ ತರಗತಿ ನಡೆಸಿಕೊಟ್ಟರು.

ಬೇಳ ಸರ್ಕಾರಿ ಐಟಿಐಯ ತರಬೇತಿ ಅಧೀಕ್ಷಕ ಹಾಗೂ ಪ್ರಾಂಶುಪಾಲ ರಾಜೇಶ್ ಬಾಬು ಎ. ಅವರು ಸ್ವಾಗತಿಸಿ, ತರಬೇತಿ ಬೋಧಕ ಮುಹಮ್ಮದ್ ಯಾಸೀನ್ ಎಸ್.ಎಂ. ಅವರು ವಂದಿಸಿದರು. ಬದಿಯಡ್ಕದ ಜೂನಿಯರ್ ಹೆಲ್ತ್ ಇನ್‍ಸ್ಪೆಕ್ಟರ್ ಗ್ರೇಡ್-1 ಶಿಜು ಕೆ.ಪಿ. ಅವರು ಶುಭಾಶಂಸನೆಗೈದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries