HEALTH TIPS

ಕಾಂಗ್ರೆಸ್ ವಿರುದ್ಧ ಬದಿಯಡ್ಕದಲ್ಲಿ ಬಿಜೆಪಿ ಪ್ರತಿಭಟನೆ

ಬದಿಯಡ್ಕ: ಬಿಜೆಪಿ ನೇತಾರ ಪಿ.ಕೆ.ಕೃಷ್ಣದಾಸ್ ಅವರ ಮೇಲೆ ಯೂತ್ ಕಾಂಗ್ರೆಸ್ ನಡೆಸಿದ ಅಕ್ರಮಣದ ವಿರುದ್ಧ ಬಿಜೆಪಿ ಬದಿಯಡ್ಕ ಮಂಡಲ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಬದಿಯಡ್ಕ ಪೇಟೆಯಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ನಡೆಯಿತು. ಬಿಜೆಪಿ ಕಣ್ಣೂರು ವಲಯ ಕಾರ್ಯದರ್ಶಿ ಎಂ.ಸುಧಾಮ ಗೋಸಾಡ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಹೀನ ಪ್ರವೃತ್ತಿ ಕೇರಳದಲ್ಲಿ ಪ್ರಕಟವಾಗುತ್ತಿದೆ. ರಾಜಕೀಯ ವಿರೋಧಿಗಳ ಮೇಲೆ ಹಲ್ಲೆ ನಡೆಸುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದ್ದು, ಕಾಂಗ್ರೆಸ್‍ನ ಈ ಗೂಂಡಾವರ್ತನೆಯನ್ನು ಸಾರ್ವಜನಿಕರು ತಕ್ಕ ರೀತಿಯಲ್ಲಿ ತಿರಸ್ಕರಿಸಲಿದ್ದಾರೆ. ರಾಷ್ಟ್ರೀಯ ನಾಯಕರ ಮೇಲೆ ಈ ರೀತಿ ಆಕ್ರಮಣ ನಡೆಸಿರುವ ಯೂತ್ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪೋಲೀಸ್ ಇಲಾಖೆ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. 

ರಾಜ್ಯ ಕೌನ್ಸಿಲ್ ಸದಸ್ಯ ಹರೀಶ್ ನಾರಂಪಾಡಿ ಮಾತನಾಡಿ ಅಧಿಕಾರದ ಮದದಲ್ಲಿ ಕಾಂಗ್ರೆಸ್ ಪಕ್ಷವು ದಬ್ಬಾಳಿಕೆಯ ಆಡಳಿತವನ್ನು ನೀಡುತ್ತಿದೆ. ಕೇಂದ್ರ ಗೃಹಸಚಿವ ಅಮಿತ್ ಶಾ ವಿರುದ್ಧ ಪ್ರತಿಭಟನೆಯನ್ನು ನಡೆಸಿ ಜನರನ್ನು ದಾರಿ ತಪ್ಪಿಸಲು ಯತ್ನಿಸುತ್ತಿದೆ. ರಾಷ್ಟ್ರೀಯ ನಾಯಕರನ್ನು ಗುರಿಮಾಡಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುವುದು ಕಾಂಗ್ರೆಸ್‍ಗೆ ಹೊಸತೇನಲ್ಲ. ಇಂತಹ ಪ್ರಜಾಪ್ರಭುತ್ವ ವಿರೋಧಿ ಕೃತ್ಯಗಳ ವಿರುದ್ಧ ಬಿಜೆಪಿ ಬೀದಿಗಿಳಿದು ಹೋರಾಟ ಮುಂದುವರಿಸಲಿದೆ ಎಂದು ಎಚ್ಚರಿಸಿದರು. ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಮುಂಡೋಳುಮೂಲೆ ನೇತೃತ್ವ ವಹಿಸಿದ್ದರು. ಪ್ರಮುಖರಾದ ಶ್ರೀಧರ ಬೆಳ್ಳೂರು, ರವೀಂದ್ರ ರೈ ಗೋಸಾಡ, ಜನನಿ ಎಂ., ಶಿವಕೃಷ್ಣ ಭಟ್, ಡಿ.ಶಂಕರ, ರವೀಂದ್ರನಾಥ ಶೆಟ್ಟಿ ಬೆಳ್ಳೂರು, ಮಹೇಶ್ ವಳಕ್ಕುಂಜ, ಉದನೇಶ್ವರ ಬದಿಯಡ್ಕ, ಶರತ್ ಕುಮಾರ್ ಶೆಟ್ಟಿ, ರವಿ ಏತಡ್ಕ, ಅವಿನಾಶ್ ರೈ, ಅಶ್ವಿನಿ ಕೆ.ಎಂ., ಜಯಕರ ನಾಕೂರು, ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries