HEALTH TIPS

ಟ್ರಂಪ್‌ಗೆ ಸಿಗಲಿಲ್ಲ ನೊಬೆಲ್: ಅಮೆರಿಕ ಅಧ್ಯಕ್ಷರ ಕಾಲೆಳೆದ ಶಾಂತಿ ಪುರಸ್ಕೃತೆ

ಓಸ್ಲೊ: ಜನರು ತಮಗೆ ಹೀಗೆಯೇ ಚಪ್ಪಾಳೆ ತಟ್ಟುತ್ತಿದ್ದರೆ ತಾವು ನೊಬೆಲ್ ಪ್ರಶಸ್ತಿಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ 'ಹಂಚಿಕೊಳ್ಳಬಹುದು'ಎಂದು ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿರುವ ನವಿ ಪಿಳ್ಳೈ ತಮಾಷೆ ಮಾಡಿದ್ದಾರೆ.


ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾದ ನಂತರ ನ್ಯೂರೆಂಬರ್ಗ್‌ನಲ್ಲಿ ಜನರು ಪಿಳ್ಳೈ ಅವರಿಗೆ ಚಪ್ಪಾಳೆ ತಟ್ಟಿ ಅಭಿನಂದಿಸುತ್ತಿರುವುದನ್ನು ತೋರಿಸುವ ವಿಡಿಯೊವೊಂದನ್ನು ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಪ್ರಧಾನ ಕಾರ್ಯದರ್ಶಿಯು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಹಂಚಿಕೊಂಡಿದ್ದಾರೆ. 

ಅದರಲ್ಲಿ ಪಿಳ್ಳೈ, 'ನೀವು ಇನ್ನೂ ಸ್ವಲ್ಪ ಹೆಚ್ಚು ಚಪ್ಪಾಳೆ ತಟ್ಟಿದರೆ ನಾನು ಈ ಪ್ರಶಸ್ತಿಯನ್ನು ಟ್ರಂಪ್ ಅವರೊಂದಿಗೆ ಹಂಚಿಕೊಳ್ಳಬಹುದು' ಎಂದು ತಮಾಷೆಯಾಗಿ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು,'ಶಾಂತಿ ಮಾತುಕತೆ ಮೂಲಕ ವಿಶ್ವದ ಹಲವು ಯುದ್ಧಗಳನ್ನು ನಿಲ್ಲಿಸಿರುವ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕು' ಎಂದು ಬಹಿರಂಗವಾಗಿ ಹೇಳಿದ್ದರು.

ಪ್ರಶಸ್ತಿ ಘೋಷಣೆಯಾದ ಬಗ್ಗೆ ಮಾತನಾಡಿದ 85 ವರ್ಷದ ಪಿಳ್ಳೈ, 'ಈ ಸುದ್ದಿ ಕೇಳಿದಾಗ ಇದು ಯಾವುದೋ ತಮಾಷೆ ಇರಬೇಕು ಎನಿಸಿತು. ಒಬ್ಬ ವಕೀಲ ಹಾಗೂ ನ್ಯಾಯಾಧೀಶೆಯಾಗಿ, ನಾನು ಇದನ್ನು ಇನ್ನು ಖಚಿತಪಡಿಸಿಕೊಳ್ಳಲು ಬಯಸುತ್ತೇನೆ' ಎಂದು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ವಿಶ್ವಸಂಸ್ಥೆಯ ಪರವಾಗಿರುವ 'ಯುಎನ್ ಸ್ವತಂತ್ರ ಅಂತರರಾಷ್ಟ್ರೀಯ ತನಿಖಾ ಆಯೋಗ'ದ ಮುಖ್ಯಸ್ಥರಾಗಿ ನಾನು ಕೊನೆಯದಾಗಿ ಗಾಜಾ ಕುರಿತ ವರದಿಯನ್ನು ಸಲ್ಲಿಸಿದೆ. ಅಲ್ಲಿ ನಡೆಯುತ್ತಿರುವುದನ್ನು ನರಮೇಧ ಎಂದು ಹೆಸರಿಸಿದ್ದೆ. ಆ ವರದಿಗೆ ಬಂದ ಪ್ರಮುಖ ಪ್ರತಿಕ್ರಿಯೆಗಳಲ್ಲಿ ಒಂದೆಂದರೆ ನನ್ನ ಧೈರ್ಯವನ್ನು ಶ್ಲಾಘಿಸಿದ್ದು. ಸತ್ಯವನ್ನು ಹೇಳಲು ಧೈರ್ಯದ ಅಗತ್ಯವೇಕೆ ಎಂದು ನನಗೆ ಎಷ್ಟು ಆಶ್ಚರ್ಯವಾಯಿತು ಎಂಬುದನ್ನು ನೀವು ಊಹಿಸಬಹುದು ಎಂದು ಹೇಳಿದ್ದಾರೆ.

ನೊಬೆಲ್ ಶಾಂತಿ ಪ್ರಶಸ್ತಿಯು ಚಿನ್ನದ ಪದಕ, ಪ್ರಮಾಣಪತ್ರ ಮತ್ತು ಸುಮಾರು 1.2 ಮಿಲಿಯನ್ ಅಮೆರಿಕನ್ ಡಾಲರ್ (₹11.5 ಕೋಟಿ) ಒಳಗೊಂಡಿದೆ. ಡಿಸೆಂಬರ್ 10ರಂದು ಓಸ್ಲೊದಲ್ಲಿ ನಡೆಯಲಿರುವ ಅಧಿಕೃತ ಸಮಾರಂಭದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.


NOW - Nobel Peace Prize winner Navi Pillay says 'if you clap a little bit more I may share this prize with Trump'





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries