HEALTH TIPS

ತಮಿಳುನಾಡು: ಕೈದಿಗಳ ಪರಾರಿ ತಡೆಯಲು ಜೈಲು ಸಿಬ್ಬಂದಿಗೆ ವಿಶೇಷ ಅಧಿಕಾರ

ಚೆನ್ನೈ: ವಿಚಾರಣಾಧೀನ ಕೈದಿಗಳು ಜೈಲಿನಿಂದ ಪರಾರಿಯಾಗಿದ್ದ ಪ್ರಕರಣದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ತಮಿಳುನಾಡು ಕಾರಾಗೃಹ ಇಲಾಖೆ, ಭದ್ರತಾ ಸಿಬ್ಬಂದಿಗೆ ವಿಶೇಷ ಅಧಿಕಾರ ನೀಡಲು ಮುಂದಾಗಿದೆ.


ಭದ್ರತಾ ಲೋಪವನ್ನು ತಪ್ಪಿಸುವ ಸಲುವಾಗಿ ಹಾಗೂ ಕೈದಿಗಳು ಪರಾರಿಯಾಗದಂತೆ ನೋಡಿಕೊಳ್ಳಲು ಅಗತ್ಯಬಿದ್ದರೆ ಶಸ್ತ್ರಾಸ್ತ್ರ (ಬಂದೂಕು) ಬಳಸುವ ಅಧಿಕಾರವನ್ನು ಸಿಬ್ಬಂದಿಗೆ ನೀಡಲು ತೀರ್ಮಾನಿಸಲಾಗಿದೆ. 

ಈ ಸಂಬಂಧ ಪೊಲೀಸ್ ಮಹಾನಿರ್ದೇಶಕ (ಕಾರಾಗೃಹ) ಸಂದೀಪ್‌ ರೈ ರಾಥೋಡ್‌ ನಿರ್ದೇಶನ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ಬುಧವಾರ ತಿಳಿಸಿವೆ.

ಥೇಣಿ ಜಿಲ್ಲೆಯ ಅಂಡಿಪಟ್ಟಿ ಸಮೀಪದ ಥೆಂಕಪಟ್ಟಿ ಉಪ ಕಾರಾಗೃಹದಲ್ಲಿದ್ದ 17 ವಿಚಾರಣಾಧೀನ ಕೈದಿಗಳು ಜೈಲಿನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಅಕ್ಟೋಬರ್‌ 26ರ ತಡರಾತ್ರಿ ಪರಾರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಭದ್ರತಾ ಕ್ರಮಕ್ಕೆ ಆದೇಶಿಸಲಾಗಿದೆ.

ಕೈದಿಯೊಬ್ಬ ಅಸ್ವಸ್ಥನಾಗಿದ್ದಾನೆ ಎಂದು ವಾರ್ಡನ್‌ಗೆ ಸುಳ್ಳು ಹೇಳಿದ್ದ ಇತರ ಕೈದಿಗಳು, ಕೋಣೆಯ ಬಾಗಿಲು ತೆರೆಯುತ್ತಿದ್ದಂತೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಂಡಿದ್ದರು.

ಪರಾರಿಯಾಗಿದ್ದ ಕೈದಿಗಳ ಪೈಕಿ 13 ಮಂದಿಯನ್ನು ಮಂಗಳವಾರ ಹಾಗೂ ಇನ್ನಿಬ್ಬರನ್ನು ಬುಧವಾರ ಬಂಧಿಸಲಾಗಿದೆ. ಇದರೊಂದಿಗೆ ಸಿಕ್ಕಿಬಿದ್ದ ಒಟ್ಟು ಕೈದಿಗಳ ಸಂಖ್ಯೆ 15ಕ್ಕೆ ಏರಿದೆ. ಮತ್ತಿಬ್ಬರ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ.  






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries