HEALTH TIPS

ಕುಟುಂಬ ಆರೋಗ್ಯ ಕೇಂದ್ರದಲ್ಲಿ ಸೌರ ವಿದ್ಯುತ್ ಫಲಕ ಉದ್ಘಾಟನೆ

 ವಿದ್ಯುತ್ ವೆಚ್ಚ ಕಡಿತ, ಪರಿಸರ ಸ್ನೇಹಿ ಇಂಧನ ಬಳಕೆಗೆ ಆದ್ಯತೆ

ಕಾಸರಗೋಡು: ಕುಟುಂಬ ಆರೋಗ್ಯ ಕೇಂದ್ರದಲ್ಲಿ ಅಳವಡಿಸಲಾದ ಸೌರ ವಿದ್ಯುತ್ ಫಲಕವನ್ನು ವಲಿಯಪರಂಬ ಗ್ರಾಮ ಪಂಚಾಯತ್ ಅಧ್ಯಕ್ಷೆ ಎಂ.ಟಿ. ಬುಶ್ರಾ ಉದ್ಘಾಟಿಸಿದರು. 


ಆರೋಗ್ಯ ಕೇಂದ್ರದ ಕಾರ್ಯನಿರ್ವಹಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸುವುದು, ವಿದ್ಯುತ್ ವೆಚ್ಚವನ್ನು ಕಡಿಮೆಗೊಳಿಸುವುದು ಹಾಗೂ ಪರಿಸರ ಸ್ನೇಹಿ ಇಂಧನ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಸೌರ ವಿದ್ಯುತ್ ಫಲಕವನ್ನು ಅಳವಡಿಸಲಾಗಿದೆ.

ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಎನ್. ಶೀಬಾ ಅಧ್ಯಕ್ಷತೆ ವಹಿಸಿದ್ದರು. ವಿಶ್ವ ಪಾರ್ಶ್ವವಾಯು ದಿನಾಚರಣೆಯ ಅಂಗವಾಗಿ ಪಾರ್ಶ್ವವಾಯುವಿನ ಲಕ್ಷಣಗಳನ್ನು ಗುರುತಿಸುವ ಮಹತ್ವ ಹಾಗೂ ಕಾಯಿಲೆ ಕಾಣಿಸಿಕೊಂಡ ಸಂದರ್ಭದಲ್ಲಿ ತಡಮಾಡದೆ ಚಿಕಿತ್ಸೆ ಪಡೆಯುವ ಅಗತ್ಯದ ಕುರಿತು ವೈದ್ಯಾಧಿಕಾರಿ ಶ್ರೀಕುಮಾರ್ ಮೋಹನ್ ಜಾಗೃತಿ ಸಂದೇಶ ನೀಡಿದರು.

ಬ್ಲಾಕ್ ಪಂಚಾಯತ್ ಸದಸ್ಯೆ ಸಿಂಧು, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಪಿ. ಅಬ್ದುಲ್ ಶುಕ್ಕೂರು ಹಾಜಿ, ಕ್ಷೇಮകാര്യ ಸ್ಥಾಯಿ ಸಮಿತಿ ಅಧ್ಯಕ್ಷೆ ಬಿ.ಎಸ್. ಶರೀಫ, ವಾರ್ಡ್ ಸದಸ್ಯ ಪಿ.ವಿ. ಜನಾರ್ದನನ್, ಉಸ್ಮಾನ್ ಪಾಂಡ್ಯಾಲ, ಸಿ. ನಾರಾಯಣನ್, ಕೆ.ವಿ. ಅಂಬುಕುಂಞಿ ಹಾಗೂ ಪಿ.ವಿ. ಬಾಲಕೃಷ್ಣನ್ ಉಪಸ್ಥಿತರಿದ್ದರು.

ವೈದ್ಯಾಧಿಕಾರಿ ಶ್ರೀಕುಮಾರ್ ಮೋಹನ್ ಸ್ವಾಗತಿಸಿದರು. ವಿನೋದ್ ಆಲಂತಟ್ಟ ವಂದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries