ಕಾಸರಗೋಡು: ತ್ರಿಕರಿಪುರ ವಿಪಿಪಿಎಂಕೆಪಿಎಸ್ ಸರ್ಕಾರಿ ವಿಎಚ್‍ಎಸ್‍ಎಸ್ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಐಸಿಡಿಎಸ್ ನೀಲೇಶ್ವರ ಹೆಚ್ಚುವರಿ ಕಚೇರಿ ಜಂಟಿಯಾಗಿ ಶಾಲೆಯಲ್ಲಿ ಪೌಷ್ಟಿಕಾಂಶ ಪ್ರದರ್ಶನ, ಆಹಾರ ಮೇಳ ಮತ್ತು ಜಾಗೃತಿ ತರಗತಿಯನ್ನು ಆಯೋಜಿಸಿತ್ತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪೆÇೀಷಣ್ ಅಭಿಯಾನ 2.0 ಮತ್ತು ಪೆÇೀಷಣ್ ಮಾ ಯೋಜನೆಯ ಭಾಗವಾಗಿ ಆಯೋಜಿಸಲಾದ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಮನು ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಂ. ರಾಜೀಶ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಇ.ಕೆ. ಬಿಜಿ ಮುಖ್ಯ ಅತಿಥಿಯಾಗಿದ್ದರು. ಶಾಲಾ ಪಿಟಿಎ ಅಧ್ಯಕ್ಷೆ ಯು.ಪಿ. ಶರೀಫ್, ಮುಖ್ಯೋಪಾಧ್ಯಾಯಿನಿ ಇ.ಕೆ. ಬೈಜಾ, ಶಾಲಾ ಕೌನ್ಸಿಲರ್ ಕೆ.ವಿ. ಅನಿಮಾ, ಮಾತೃ ಪಿಟಿಎ ಅಧ್ಯಕ್ಷೆ ಪಿ. ಸೌಮ್ಯ ಮತ್ತು ಎನ್‍ಎಸ್‍ಎಸ್ ಕಾರ್ಯಕ್ರಮ ಅಧಿಕಾರಿ ಕೆ.ಎಂ. ರಂಜಿತ್ ಮಾತನಾಡಿದರು. ಐಸಿಡಿಎಸ್ ಮೇಲ್ವಿಚಾರಕಿ ಪಿ.ಪಿ. ರೇವತಿ ತರಗತಿಯನ್ನು ನಿರ್ವಹಿಸಿದರು.
ವಿಎಚ್‍ಎಸ್‍ಇ ಪ್ರಾಂಶುಪಾಲ ವಿ.ಕೆ. ರಾಜೇಶ್ ಆಹಾರೋತ್ಸವದ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಹಿರಿಯ ಶಿಕ್ಷಕಿ ಟಿ.ಸಿ. ನೀನಾ ಸ್ವಾಗತಿಸಿ, ಸ್ವಯಂಸೇವಕ ಕಾರ್ಯದರ್ಶಿ ಎ.ಕೆ. ತೀರ್ಥ ವಂದಿಸಿದರು.


