HEALTH TIPS

ಎಸ್‌ಐಆರ್‌: ಪ್ರಧಾನಿ ಮೋದಿ, ಗೃಹಸಚಿವ ಅಮಿತ್‌ ಶಾ ರೂಪಿಸಿದ ಪಿತೂರಿ- ಕಾಂಗ್ರೆಸ್‌

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯು (ಎಸ್‌ಐಆರ್‌) ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರು ರೂಪಿಸಿದ ಪಿತೂರಿಯಾಗಿದ್ದು, ಅದನ್ನು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್‌ ಕುಮಾರ್‌ ಮೂಲಕ ಕಾರ್ಯಗತಗೊಳಿಸಲಾಗುತ್ತಿದೆ ಎಂದು ಕಾಂಗ್ರೆಸ್‌ ಗುರುವಾರ ಆರೋಪಿಸಿದೆ. 


ಸಿಇಸಿ ಕುಮಾರ್‌ ಅವರನ್ನು ವಜಾಗೊಳಿಸಬೇಕು, ಎಸ್‌ಐಆರ್‌ ಅನ್ನು ಅಮಾನತುಗೊಳಿಸಬೇಕು, ಇಸಿಐಎನ್‌ಇಟಿ ಪೋರ್ಟಲ್‌ ಅನ್ನು ಪರಿಷ್ಕರಿಸಬೇಕು ಎಂಬ ಬೇಡಿಕೆಗಳನ್ನು ಕಾಂಗ್ರೆಸ್‌ ಪುನರುಚ್ಚರಿಸಿದೆ.

ಎಸ್‌ಐಆರ್‌ ಪೂರ್ಣಗೊಂಡ ಅಥವಾ ನಡೆಯುತ್ತಿರುವ ಕನಿಷ್ಠ ಆರು ರಾಜ್ಯಗಳಲ್ಲಿ ಇಲ್ಲಿಯವರೆಗೆ ಪತ್ತೆಯಾದ ಶಂಕಿತ ವಿದೇಶಿ ಪ್ರಜೆಗಳ ಸಂಖ್ಯೆ ಕೇವಲ 1,600 ಇದೆ. ಇದು ಅಲ್ಲಿನ ಒಟ್ಟು ಮತದಾರರಿಗೆ ಹೋಲಿಸಿದರೆ ಅತಿ ಕಡಿಮೆ ಎಂದು ಮಾಧ್ಯಮ ವರದಿಯೊಂದನ್ನು ಉಲ್ಲೇಖಿಸಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌ ಹೇಳಿದ್ದಾರೆ.

'ಮತದಾರರ ಪಟ್ಟಿಯನ್ನು ಶುದ್ಧೀಕರಿಸಲು ನುಸುಳುಕೋರರನ್ನು ಪತ್ತೆಹಚ್ಚುವುದು, ಅವರ ಹೆಸರನ್ನು ಅಳಿಸುವುದು ಮತ್ತು ಗಡೀಪಾರು ಮಾಡುವ ಉದ್ದೇಶವನ್ನು ಎಸ್‌ಐಆರ್ ಒಳಗೊಂಡಿದೆ ಎಂದು ಗೃಹ ಸಚಿವ ಅಮಿತ್‌ ಶಾ ಪ್ರತಿಪಾದಿಸಿದ್ದರು. ಹಾಗಾದರೆ ಎಸ್‌ಐಆರ್‌ ನಿಜವಾಗಿ ಸಾಧಿಸಿದ್ದೇನು' ಎಂದು ಅವರು ಪ್ರಶ್ನಿಸಿದರು.

ಕರ್ನಾಟಕ, ಜಾರ್ಖಂಡ್‌, ಮೇಘಾಲಯ, ಕೇರಳಂ, ಗೋವಾ ಮತ್ತು ಮಿಜೋರಾಂ ರಾಜ್ಯಗಳಲ್ಲಿ ವಿವಿಧ ದೇಶಗಳಿಗೆ ಸೇರಿದ 1,600 ವಿದೇಶಿಯರನ್ನು ಪತ್ತೆಹಚ್ಚಿ ಅವರ ಹೆಸರನ್ನು ಅಳಿಸಲಾಗಿದೆ. ಇಷ್ಟು ಕಡಿಮೆ ಸಂಖ್ಯೆಯ ವಿದೇಶಿಯರನ್ನು ಹುಡುಕಲು ಸುಮಾರು 10 ಕೋಟಿ ಜನರು ಎಸ್‌ಐಆರ್‌ ಪ್ರಕ್ರಿಯೆಗೆ ಒಳಗಾಗಬೇಕಾಯಿತು ಎಂದು ಅವರು ವ್ಯಂಗ್ಯವಾಡಿದ್ದಾರೆ.

ಕರ್ನಾಟಕದಲ್ಲಿ 99.7 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅಳಿಸಲಾಗಿದೆ. ಈ ಪೈಕಿ ಕೇವಲ 716 ಜನರನ್ನು ವಿದೇಶಿಗರು ಎಂದು ಗುರುತಿಸಲಾಗಿದ್ದು, ಅವರಲ್ಲಿ 545 ಮಂದಿ ನೇಪಾಳಿಗರಾಗಿದ್ದಾರೆ ಎಂದು ಅವರು ಹೇಳಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries