HEALTH TIPS

ಅಮೆರಿಕದ ನಿರ್ಬಂಧಗಳ ನಡುವೆಯೇ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯಕ್ಕೆ EUನ ಉನ್ನತ ಮಾನವ ಹಕ್ಕುಗಳ ಪ್ರಶಸ್ತಿ

ಹೇಗ್: ಅಮೆರಿಕದ ನಿರ್ಬಂಧಗಳನ್ನು ಎದುರಿಸುತ್ತಿರುವ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯಕ್ಕೆ (Iಅಅ) ಯುರೋಪಿಯನ್ ಒಕ್ಕೂಟದ (EU) ಉನ್ನತ ಮಾನವ ಹಕ್ಕುಗಳ ಪ್ರಶಸ್ತಿ ಲಭಿಸಿದೆ. ನ್ಯಾಯಾಲಯವು 'ಅಭೂತಪೂರ್ವ ಸವಾಲುಗಳನ್ನು' ಎದುರಿಸುತ್ತಿರುವ ಸಂದರ್ಭದಲ್ಲಿ ಈ ಮನ್ನಣೆ ದೊರೆತಿದೆ ಎಂದು ICC ಅಧ್ಯಕ್ಷೆ ನ್ಯಾಯಮೂರ್ತಿ ಟೊಮೊಕೊ ಅಕಾನೆ ತಿಳಿಸಿದ್ದಾರೆ ಎಂದು Aljazeera ವರದಿ ಮಾಡಿದೆ. 


ಸ್ವತಂತ್ರ ನ್ಯಾಯಾಂಗ ಸಂಸ್ಥೆಗಳ ಮಹತ್ವವನ್ನು ಮತ್ತು ಅಂತರರಾಷ್ಟ್ರೀಯ ಕಾನೂನನ್ನು ಎತ್ತಿಹಿಡಿಯಲು ಶ್ರಮಿಸುವವರ ಕಾರ್ಯವನ್ನು ಈ ಪ್ರಶಸ್ತಿ ಪುನರುಚ್ಚರಿಸುತ್ತದೆ ಎಂದು ಅವರು ಹೇಳಿದ್ದಾರೆ.

'ಸಂಘರ್ಷಗಳು ಹೆಚ್ಚುತ್ತಿರುವ ಜಗತ್ತಿನಲ್ಲಿ ನ್ಯಾಯವಿಲ್ಲದೆ ಶಾಂತಿ ಸಾಧ್ಯವಿಲ್ಲ; ಕಾನೂನಿಲ್ಲದೆ ಭದ್ರತೆಯೂ ಸಾಧ್ಯವಿಲ್ಲ' ಎಂದು ಅಕಾನೆ ಪ್ರತಿಪಾದಿಸಿದ್ದಾರೆ.

ICCಯ ಮಾಜಿ ನ್ಯಾಯಮೂರ್ತಿ ನವಿ ಪಿಳ್ಳೈ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ. ಸಂಕಷ್ಟಗಳನ್ನು ಎದುರಿಸುತ್ತಿರುವ ನ್ಯಾಯಾಲಯಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗಿರುವುದರ ಸಂಕೇತವಾಗಿ ಈ ಪ್ರಶಸ್ತಿಯನ್ನು ವ್ಯಾಪಕವಾಗಿ ಪರಿಗಣಿಸಲಾಗಿದೆ.

ನೆತನ್ಯಾಹು ವಿರುದ್ಧದ ಬಂಧನ ವಾರಂಟ್‌ ಗೆ ಟ್ರಂಪ್ ವಿರೋಧ

2025ರ ಫೆಬ್ರುವರಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ICC ವಿರುದ್ಧ ನಿರ್ಬಂಧಗಳನ್ನು ವಿಧಿಸಿದ್ದರು. ಗಾಝಾದಲ್ಲಿ ನಡೆದ ಯುದ್ಧಾಪರಾಧಗಳ ಆರೋಪಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಬಂಧನ ವಾರಂಟ್‌ ಗಳನ್ನು ಹೊರಡಿಸಿದ್ದೂ ಸೇರಿದಂತೆ, ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ICC 'ಕಾನೂನುಬಾಹಿರ ಮತ್ತು ಆಧಾರರಹಿತ ಕ್ರಮಗಳನ್ನು' ಕೈಗೊಂಡಿದೆ ಎಂದು ಟ್ರಂಪ್ ಆರೋಪಿಸಿದ್ದರು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries