HEALTH TIPS

ದುರ್ವರ್ತನೆ, ಬೆದರಿಕೆ ಆರೋಪಿಸಿದ್ದ ಪತ್ರಕರ್ತೆಯಿಂದ ರಾಹುಲ್ ಗಾಂಧಿ ವಿರುದ್ಧ ದೂರು; FIR ದಾಖಲಿಸಲು ಮನವಿ

ನವದೆಹಲಿ:  ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಪತ್ರಕರ್ತೆ ರಿಚಾ ಪರಾಶರ್ ಕ್ರಿಮಿನಲ್ ದೂರು ದಾಖಲಿಸಿದ್ದು, FIR ದಾಖಲಿಸುವಂತೆ ಕೋರಿದ್ದಾರೆ. ಸುಪ್ರೀಂ ಕೋರ್ಟ್ ಬಳಿ ನಡೆದ ಪ್ರತಿಭಟನೆಯನ್ನು ವರದಿ ಮಾಡುವ ವೇಳೆ ರಾಹುಲ್ ಗಾಂಧಿ ಮತ್ತು ಅವರ ಭದ್ರತಾ ಸಿಬ್ಬಂದಿ ತಮ್ಮೊಂದಿಗೆ ದುರ್ವರ್ತನೆ ತೋರಿದ್ದಾರೆ ಎಂದು ಅವರು ಆರೋಪಿಸಿದ್ದಾರೆ ಎಂದು times of india ವರದಿ ಮಾಡಿದೆ.


ಅಕ್ಟೋಬರ್ 12ರಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ 'ಇಂಡಿಯಾ' ಮೈತ್ರಿಕೂಟ ನಡೆಸಿದ ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪರಾಶರ್ ತಿಳಿಸಿದ್ದಾರೆ. ತಾವು ಮೂರು ತಿಂಗಳ ಗರ್ಭಿಣಿಯಾಗಿದ್ದು, ರಾಹುಲ್ ಗಾಂಧಿ ತಮ್ಮ ಕೈ ಹಿಡಿದು ಎಳೆದರು. ಬಳಿಕ ಅವರ ಭದ್ರತಾ ಸಿಬ್ಬಂದಿ ತಮ್ಮನ್ನು ತಳ್ಳಿದ್ದರಿಂದ ಸುಪ್ರೀಂ ಕೋರ್ಟ್ನ ಮೆಟ್ಟಿಲುಗಳಿಂದ ಕೆಳಗೆ ಬಿದ್ದಿದ್ದಾಗಿ ಆರೋಪಿಸಿದ್ದಾರೆ.

ಹೊಟ್ಟೆಯ ಮೇಲೆ ಬಿದ್ದಿದ್ದರಿಂದ ಕೈ ಮತ್ತು ಮೊಣಕಾಲುಗಳಿಗೆ ಗಾಯಗಳಾಗಿದ್ದು, ಮೊಬೈಲ್ ಫೋನ್ ಒಡೆದುಹೋಗಿದೆ ಎಂದು ಅವರು ಹೇಳಿದ್ದಾರೆ. ಆಸ್ಪತ್ರೆಯ ಹಾಸಿಗೆಯಲ್ಲಿದ್ದಾಗ ಚಿತ್ರೀಕರಿಸಿದ ವಿಡಿಯೊದಲ್ಲಿ ಘಟನೆಯನ್ನು ವಿವರಿಸಿರುವ ಪರಾಶರ್, ಇತರ ಪತ್ರಕರ್ತರು ಮೈಕ್ರೊಫೋನ್ ಗಳನ್ನು ಮುಂದಕ್ಕೆ ಚಾಚುತ್ತಿದ್ದುದರಿಂದ ತಾವೂ ಮೈಕ್ರೊಫೋನ್ ಮುಂದಿಟ್ಟಿದ್ದಾಗಿ ತಿಳಿಸಿದ್ದಾರೆ. ಇದರಿಂದ ಅಸಮಾಧಾನಗೊಂಡ ರಾಹುಲ್ ಗಾಂಧಿ ತಮ್ಮ ಕೈ ಹಿಡಿದು ಎಳೆದರು. ಬಳಿಕ ಅವರ ಅಂಗರಕ್ಷಕರು ತಳ್ಳಿದರು ಎಂದು ಆರೋಪಿಸಿದ್ದಾರೆ.

ಇದಕ್ಕೂ ಮುನ್ನ, 'ಪಿತೃಪ್ರಧಾನ ವ್ಯವಸ್ಥೆಯನ್ನು ಧ್ವಂಸಗೊಳಿಸಿ' ಎಂಬ ಘೋಷಣೆ ನೀಡುವ ವ್ಯಕ್ತಿಯೇ ತಮ್ಮನ್ನು ತಳ್ಳಿದ್ದಾರೆ ಎಂದು ಆರೋಪಿಸಿ ಪರಾಶರ್ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೊ ಹಂಚಿಕೊಂಡಿದ್ದರು.

ಕಾಂಗ್ರೆಸ್ ಸಂಸದರು ತಮ್ಮ ಕ್ಯಾಮೆರಾಮನ್ ನನ್ನು ತಳ್ಳಿದ್ದರಿಂದ ಅವರು ತಮ್ಮ ಮೇಲೆ ಬಿದ್ದರು. ಬಳಿಕ ಜನದಟ್ಟಣೆಯಿಂದ ಉಂಟಾದ ಗೊಂದಲದಲ್ಲಿ ಇತರ ನಾಲ್ವರೂ ತಮ್ಮ ಮೇಲೆ ಬಿದ್ದರು ಎಂದು ಅವರು ತಿಳಿಸಿದ್ದಾರೆ. ರಾಹುಲ್ ಗಾಂಧಿಗೆ ತಾವು ಯಾವುದೇ ಪ್ರಶ್ನೆ ಕೇಳಿರಲಿಲ್ಲ ಅಥವಾ ಏನನ್ನೂ ಹೇಳಿರಲಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

ತಾವು ಬಿದ್ದಾಗ ನೆರವು ನೀಡುವ ಬದಲು ರಾಹುಲ್ ಗಾಂಧಿ ಅವರ ಬೆಂಬಲಿಗರು ಕೂಗಾಡಿದರು ಎಂದು ಪರಾಶರ್ ಆರೋಪಿಸಿದ್ದಾರೆ. ಮಹಿಳಾ ಸುರಕ್ಷತೆ ಕುರಿತು ಕಾಂಗ್ರೆಸ್ ನ ನಿಲುವನ್ನು ಪ್ರಶ್ನಿಸಿರುವ ಅವರು, ಘಟನೆಯನ್ನು ಚಿತ್ರೀಕರಿಸಿದ ಮಾಧ್ಯಮ ಸಂಸ್ಥೆಗಳು ತಮ್ಮ ಬಳಿಯಿರುವ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries