ಶಿಲ್ಲಾಂಗ್: ಮೇಘಾಲಯದಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ (ಯುಡಿಪಿ)ಗೆ ಭಾರಿ ಹಿನ್ನಡೆಯಾಗಿದ್ದು, ಪಕ್ಷದ 12 ಶಾಸಕರ ಪೈಕಿ ಎಂಟು ಮಂದಿ ಬಿಜೆಪಿಯಲ್ಲಿ ವಿಲೀನವಾಗಿರುವುದಕ್ಕೆ ವಿಧಾನಸಭೆಯ ಸ್ಪೀಕರ್ ಥಾಮಸ್ ಎ. ಸಂಗ್ಮಾ ಮಾನ್ಯತೆ ನೀಡಿದ್ದಾರೆ. ಇದರಿಂದ ಯುಡಿಪಿಯ ಸಂಖ್ಯಾಬಲ ನಾಲ್ಕಕ್ಕೆ ಕುಸಿದಿದ್ದು, ಬಿಜೆಪಿಯ ಶಾಸಕರ ಸಂಖ್ಯೆ ಎರಡರಿಂದ 10ಕ್ಕೆ ಏರಿಕೆಯಾಗಿದೆ.
60 ಸದಸ್ಯ ಬಲದ ಮೇಘಾಲಯ ವಿಧಾನಸಭೆಯಲ್ಲಿ ಸ್ಪೀಕರ್ ಅವರ ನಿರ್ಧಾರದಿಂದ ಪಕ್ಷಗಳ ಸಂಖ್ಯಾಬಲದಲ್ಲಿ ಅಧಿಕೃತ ಬದಲಾವಣೆಯಾಗಿದೆ. ವಿಲೀನಕ್ಕೆ ಮಾನ್ಯತೆ ದೊರೆತಿರುವುದರಿಂದ ಎಂಟು ಶಾಸಕರು ಇನ್ನು ಮುಂದೆ ಬಿಜೆಪಿಯ ಶಾಸಕರಾಗಿ ಗುರುತಿಸಿಕೊಳ್ಳಲಿದ್ದಾರೆ.
ಈ ಕುರಿತು ಅಧಿಸೂಚನೆ ಹೊರಡಿಸಿರುವ ಮೇಘಾಲಯ ವಿಧಾನಸಭೆಯ ಕಾರ್ಯದರ್ಶಿಗಳು, ಯುಡಿಪಿಯ ಎಂಟು ಶಾಸಕರು ಭಾರತೀಯ ಸಂವಿಧಾನದ 10ನೇ ಪರಿಚ್ಛೇದದ ನಾಲ್ಕನೇ ನಿಯಮದಡಿ ಬಿಜೆಪಿಯಲ್ಲಿ ವಿಲೀನವಾಗಿರುವುದಕ್ಕೆ ಸ್ಪೀಕರ್ ಮಾನ್ಯತೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಲಖ್ಮೇನ್ ರಿಂಬುಯಿ, ಪಿಯುಸ್ ಮಾರ್ವೈನ್, ಕೈರ್ಮೆನ್ ಶೈಲ್ಲಾ, ಮೇರಾಲ್ಬಾರ್ನ್ ಸೈಯೆಮ್, ಮ್ಯಾಥ್ಯೂ ಬಿಯಾಂಡ್ ಸ್ಟಾರ್ ಕುರ್ಬಾಹ್, ಒಲ್ಲಾನ್ ಸಿಂಗ್ ಸುಯಿನ್, ಬಾಲಾಜೈದ್ ಕುಪರ್ ಸೈನ್ರೆಮ್ ಮತ್ತು ಸೈನ್ಷಾರ್ಕುಪರ್ ರಾಯ್ ಲಿಂಗ್ಡೊ ತಬಾಹ್ ಅವರು ಬಿಜೆಪಿಯಲ್ಲಿ ವಿಲೀನವಾಗಿರುವ ಎಂಟು ಶಾಸಕರು ತಿಳಿದು ಬಂದಿದೆ.



