HEALTH TIPS

ಐದು ರಾಜ್ಯಗಳಲ್ಲಿ ಮತದಾರರ ಸಂಖ್ಯೆ ಶೇ 13.4 ಇಳಿಕೆ

 ನವದೆಹಲಿ:  ಉತ್ತರ ಪ್ರದೇಶ, ಪಂಜಾಬ್‌, ಉತ್ತರಾಖಂಡ, ಗೋವಾ ಮತ್ತು ಮಣಿಪುರ ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪೂರ್ಣಗೊಂಡ ಬಳಿಕ ಮತದಾರರ ಸಂಖ್ಯೆಯಲ್ಲಿ ಶೇ 13.24ರಷ್ಟು ಇಳಿಕೆಯಾಗಿದೆ ಎಂದು ದತ್ತಾಂಶಗಳು ತೋರಿಸುತ್ತವೆ.


ಈ ಐದೂ ರಾಜ್ಯಗಳಲ್ಲಿ ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ.

ಚುನಾವಣಾ ಆಯೋಗದ ದತ್ತಾಂಶದ ಪ್ರಕಾರ, ಈ ಐದು ರಾಜ್ಯಗಳಲ್ಲಿ ಎಸ್‌ಐಆರ್‌ಗೂ ಮುನ್ನ 18.71 ಕೊಟಿ ಇದ್ದ ಮತದಾರರ ಸಂಖ್ಯೆ, ಎಸ್‌ಐಆರ್‌ ಪೂರ್ಣಗೊಂಡ ಬಳಿಕ 16.43 ಕೋಟಿಗೆ ಇಳಿಕೆಯಾಗಿದೆ. ಅಂದರೆ ಒಟ್ಟಾರೆ 2.29 ಕೋಟಿ ಮತದಾರರು ಸಂಖ್ಯೆ ಕಡಿಮೆಯಾಗಿದೆ.

ಐದು ರಾಜ್ಯಗಳಲ್ಲಿ ಪೈಕಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಮತದಾರರು ಪಟ್ಟಿಯಿಂದ ಹೊರಗುಳಿದಿದ್ದಾರೆ. ಇಲ್ಲಿ ಎಸ್‌ಐಆರ್‌ಗೂ ಮುನ್ನ 15.44 ಕೋಟಿ ಇದ್ದ ಮತದಾರರ ಸಂಖ್ಯೆ, ಪರಿಷ್ಕರಣೆ ಬಳಿಕ 13.40 ಕೋಟಿಗೆ ಇಳಿದಿದೆ.

ಪಂಜಾಬ್‌ನಲ್ಲಿ ಎಸ್‌ಐಆರ್‌ಗೂ ಮುನ್ನ 2.15 ಕೋಟಿ ಇದ್ದ ಮತದಾರರ ಸಂಖ್ಯೆ ಪರಿಷ್ಕರಣೆ ನಂತರ 1.94 ಕೋಟಿಗಿಳಿದಿದೆ. ಉತ್ತರಾಖಂಡದಲ್ಲಿ 80 ಲಕ್ಷ ಇದ್ದ ಮತದಾರರ ಸಂಖ್ಯೆ ಪರಿಷ್ಕಣೆ ಬಳಿಕ 71 ಲಕ್ಷಕ್ಕೆ ಇಳಿಕೆ ಕಂಡಿದೆ.

ಮಣಿಪುರದಲ್ಲಿ ಎಸ್‌ಐಆರ್‌ಗೂ ಮುನ್ನ 20.90 ಲಕ್ಷ ಇದ್ದ ಮತದಾರರ ಸಂಖ್ಯೆ ಪರಿಷ್ಕರಣೆ ನಂತರ 19.30 ಲಕ್ಷಕ್ಕೆ ಇಳಿದಿದೆ. ಗೋವಾದಲ್ಲಿ 11.85 ಲಕ್ಷ ಇದ್ದ ಮತದಾರರ ಸಂಖ್ಯೆ ಎಸ್‌ಐಆರ್‌ ನಂತರ 10.85 ಲಕ್ಷಕ್ಕೆ ಇಳಿಕೆ ಕಂಡಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries