ಕೈರೊ: ನೈರುತ್ಯ ಯೆಮೆನ್ನ ಮಾರುಕಟ್ಟೆಯ ಮೇಲೆ ಶುಕ್ರವಾರ ವಾಯುದಾಳಿ ನಡೆಸಿದ್ದು, ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ ಎಂದು ಇರಾನ್ ಬೆಂಬಲಿತ ಹೂಥಿ ಬಂಡುಕೋರ ಸಂಘಟನೆ ಶುಕ್ರವಾರ ಹೇಳಿದೆ.
ಸೌದಿ ಬೆಂಬಲಿತ ಸೇನಾ ಪಡೆಗಳು ಹಾಗೂ ಹೂಥಿಗಳು ನಡುವೆ ಹೋರಾಟ ಆರಂಭಗೊಂಡ ಬಳಿಕ ನಡೆದ ಅತೀ ದೊಡ್ಡ ದಾಳಿ ಇದಾಗಿದೆ.
ತೈಜ್ನ ಅಲ್-ವಝಿಯಾ ಮಾರುಕಟ್ಟೆಯ ಮೇಲೆ ನಡೆದ ವಾಯುದಾಳಿಯಲ್ಲಿ ಕನಿಷ್ಠ 15 ಮಂದಿ ಗಾಯಗೊಂಡಿದ್ದಾರೆ ಎಂದು ಹೂಥಿಯ ಆರೋಗ್ಯ ಸಚಿವಾಲಯ ವಕ್ತಾರ ಅನೀಸ್ ಅಲ್ಸಬಹಿ ಅವರು ಸುದ್ದಿವಾಹಿನಿ 'ಅಲ್ ಮಸಿರಾ'ಗೆ ತಿಳಿಸಿದ್ದಾರೆ.


