ನ್ಯೂಯಾರ್ಕ್/ ಸಿಯಾಟೆಲ್ : ಅಮೆರಿಕದ ಪೆಸಿಫಿಕ್‌ನ ವಾಯವ್ಯದಲ್ಲಿರುವ ಐದು ರಾಜ್ಯಗಳು ಹಾಗೂ ವಿವಿಧ ನಗರಗಳ 20 ಮೇಯರ್‌ಗಳು ಜೊತೆಗೂಡಿ ಇದೇ ಮೊದಲ ಬಾರಿಗೆ ರಾಜ್ಯದ ರಾಜಧಾನಿ ಹಾಗೂ ನಗರ ಕೇಂದ್ರಗಳಲ್ಲಿ ದೀಪಾವಳಿ ಆಚರಿಸಲು ನಿರ್ಧರಿಸಿದ್ದಾರೆ.
ಭಾರತೀಯ-ಅಮೆರಿಕನ್ ಸಮುದಾಯದ ವೈವಿಧ್ಯತೆ ಹಾಗೂ ಕೊಡುಗೆಯನ್ನು ಇದೇ ವೇಳೆ ಸ್ಮರಿಸಿದ್ದಾರೆ.
ಅಮೆರಿಕದಲ್ಲಿ ದೀಪಾವಳಿ ಸಂಭ್ರಮಾಚರಣೆಯು ಅಕ್ಟೋಬರ್ ಮಧ್ಯಭಾಗದಿಂದ ನವೆಂಬರ್ 10ರವರೆಗೂ ನಡೆಯುತ್ತದೆ. ಒರೆಗಾಂವ್‌ನ ಗವರ್ನರ್ ಅವರು ರಾಜಧಾನಿ ಸಲೇಂನಲ್ಲಿ ಅಂತಿಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಎಂದು ಸಿಯಾಟೆಲ್‌ನ ಭಾರತೀಯ ಕಾನ್ಸುಲೇಟ್ ಕಚೇರಿ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಸೆನೆಟರ್‌ಗಳು, ಅಮೆರಿಕ ಕಾಂಗ್ರೆಸ್‌ನ ಸದಸ್ಯರು, ಸ್ಥಳೀಯ ಮೇಯರ್ ಹಾಗೂ ಭಾರತೀಯ-ಅಮೆರಿಕನ್ ಸಮುದಾಯದವರ ಸಮ್ಮುಖದಲ್ಲಿ ಸಂಭ್ರಮಾಚರಣೆ ನಡೆಯಲಿದೆ.
ವಾಷಿಂಗ್ಟನ್‌ನ ರೊಟುಂಡಾದಲ್ಲಿರುವ ಆಡಳಿತ ಕಚೇರಿಯಲ್ಲಿ ನಡೆದ ದೀಪಾವಳಿ ಸಂಭ್ರಮಾಚರಣೆಯಲ್ಲಿ ಸಿಯಾಟೆಲ್‌ನಲ್ಲಿನ ಭಾರತೀಯ ಕಾನ್ಸುಲ್ ಜನರಲ್ ಪ್ರಕಾಶ್ ಗುಪ್ತಾ ಮಾತನಾಡಿದರು -ಪಿಟಿಐ ಚಿತ್ರ


