HEALTH TIPS

ವಾಹನ ದಂಡದ ಸೋಗಿನಲ್ಲಿ ಆನ್‌ಲೈನ್ ಮೂಲಕ ಯುವತಿಯ 41,329 ರೂ. ಎಗರಿಸಿದ ಸೈಬರ್ ವಂಚಕರು

ಕುಂಬಳೆ: ವಾಹನದ ದಂಡ ಪಾವತಿಸುವ ಸೋಗಿನಲ್ಲಿ ಯುವತಿಯ ಬ್ಯಾಂಕ್ ಖಾತೆಯಿಂದ ಆನ್‌ಲೈನ್ ವಂಚಕರು 41,329 ರೂಪಾಯಿ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕುಂಬಳೆ ನಾಯ್ಕಾಪು ನಾರಾಯಣಮಂಗಲ ಹೌಸ್‌ನ ಅಕ್ಷತಾ ಕೆ. ಎಂಬವರ ಬ್ಯಾಂಕ್ ಖಾತೆಯಿಂದ ಈ ಹಣ ದೋಚಲಾಗಿದೆ. ತಮ್ಮ ಮೊಬೈಲ್ ಫೋನ್‌ಗೆ ವಾಹನದ ದಂಡ ಪಾವತಿಸಬೇಕು ಎಂಬ ಹೆಸರಿನಲ್ಲಿ ಲಿಂಕ್ ಸಹಿತ ಸಂದೇಶವೊಂದು ಬಂದಿತ್ತು. ಅದರ ಬೆನ್ನಲ್ಲೇ, ನವೆಂಬರ್ 5ರಿಂದ 7ರ ನಡುವಿನ ಅವಧಿಯಲ್ಲಿ ಮೊಬೈಲ್ ಸಂಖ್ಯೆಗೆ ಜೋಡಣೆಯಾಗಿದ್ದ ತಮ್ಮ ಬ್ಯಾಂಕ್ ಖಾತೆಯಿಂದ ಸೈಬರ್ ವಂಚಕರು ಹಲವು ಕಂತುಗಳಾಗಿ ಒಟ್ಟು 41,329 ರೂಪಾಯಿ ಎಗರಿಸಿದ್ದಾರೆ ಎಂದು ಅಕ್ಷತಾ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಕುಂಬಳೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries