HEALTH TIPS

ಬುಲೆಟ್‌ ರೈಲು: ದೆಹಲಿ-ಆಗ್ರಾ ಪ್ರಯಾಣಕ್ಕೆ ಕೇವಲ 59 ನಿಮಿಷ

ವಾರಾಣಸಿ: ಬುಲೆಟ್‌ ರೈಲು ಯೋಜನೆಯ ಉತ್ತರ ಕಾರಿಡಾರ್‌ ನಿರ್ಮಾಣದಿಂದ ಪ್ರಯಾಣ ಅವಧಿ ಗಮನಾರ್ಹವಾಗಿ ತಗ್ಗಲಿದೆ. ದೆಹಲಿ-ಕಾನ್ಪುರಕ್ಕೆ ಒಂದು ಗಂಟೆ 45 ನಿಮಿಷದಲ್ಲಿ ತಲುಪಬಹುದು, ದೆಹಲಿ-ಆಗ್ರಾವನ್ನು 59 ನಿಮಿಷದಲ್ಲಿ ತಲುಪಬಹುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದರು. 


ದೆಹಲಿ-ಲಖನೌ 2 ತಾಸು 12 ನಿಮಿಷದಲ್ಲಿ ಮತ್ತು ಲಖನೌ-ವಾರಾಣಸಿಯನ್ನು 1 ಗಂಟೆ 21 ನಿಮಿಷದಲ್ಲಿ ತಲುಪಬಹುದು. ವಾರಾಣಸಿ-ದೆಹಲಿಯನ್ನು 3 ತಾಸು 35 ನಿಮಿಷದಲ್ಲಿ ತಲುಪಬಹುದು ಎಂದು ಹೇಳಿದರು.

ವಾರಾಣಸಿ-ನವದೆಹಲಿ ನಡುವಿನ ವಂದೇ ಭಾರತ್‌ ಸ್ಲೀಪರ್‌ ಎಕ್ಸ್‌ಪ್ರೆಸ್‌ ಸೇವೆಗೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಉತ್ತರ ಕಾರಿಡಾರ್‌ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅನುಮೋದನೆ ನೀಡಿದ್ದಾರೆ ಎಂದು ಶನಿವಾರ ತಿಳಿಸಿದರು.

ಉತ್ತರ ಕಾರಿಡಾರ್‌ ಮಾರ್ಗವು ದೆಹಲಿ, ಆಗ್ರಾ, ಕಾನ್ಪುರ, ಲಖನೌ, ಅಯೋಧ್ಯೆ, ವಾರಾಣಸಿ, ಪ್ರಯಾಗರಾಜ್‌, ಪಟ್ನಾ, ಸಿಲಿಗುರಿ ಮತ್ತು ಗುವಾಹಟಿಯನ್ನು ಸಂಪರ್ಕಿಸಲಿದೆ ಎಂದು ವಿವರಿಸಿದರು.

ಕಾಮಗಾರಿ ವೇಗಗತಿಯಲ್ಲಿ ನಡೆಯುತ್ತಿದೆ. ಪೂರ್ಣಪ್ರಮಾಣದಲ್ಲಿ 'ಮೇಕ್‌ ಇನ್‌ ಇಂಡಿಯಾ' ಪರಿಕಲ್ಪನೆಯಡಿಯಲ್ಲಿ ನಿರ್ಮಾಣವಾಗುತ್ತಿದೆ ಎಂದು ಹೇಳಿದರು. 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries