ನವದೆಹಲಿ: ಡೀಸೆಲ್ ಮತ್ತು ವಿಮಾನ ಇಂಧನ (ಎಟಿಎಫ್) ರಫ್ತು ಮೇಲೆ ವಿಧಿಸುವ ಆಕಸ್ಮಿಕ ಲಾಭ ತೆರಿಗೆಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ಆದರೆ, ಇದೇ ವೇಳೆ ಪೆಟ್ರೋಲ್ ರಫ್ತು ಮೇಲಿನ ಸುಂಕವನ್ನು ಶೂನ್ಯಕ್ಕೆ ಇಳಿಸಿದೆ.
ಪರಿಷ್ಕೃತ ದರವು ಶನಿವಾರದಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಅಧಿಸೂಚನೆಯಲ್ಲಿ ತಿಳಿಸಿದೆ.
ಈ ಮೊದಲು ಪ್ರತಿ ಲೀಟರ್ ವಿಮಾನ ಇಂಧನ ರಫ್ತಿಗೆ ₹10.5 ವಿಶೇಷ ಹೆಚ್ಚುವರಿ ಎಕ್ಸೈಸ್ ಸುಂಕ (ಎಸ್ಎಇಡಿ) ವಿಧಿಸಲಾಗುತ್ತಿತ್ತು. ಅದನ್ನು ಈಗ ₹11 ಹೆಚ್ಚಿಸಲಾಗಿದೆ. ಡೀಸೆಲ್ ಮೇಲಿನ ಈ ಸುಂಕವನ್ನು ₹8.5ರಿಂದ ₹11.5ಕ್ಕೆ ಏರಿಕೆ ಮಾಡಲಾಗಿದೆ. ಪೆಟ್ರೋಲ್ ಮೇಲಿದ್ದ ₹2.5ರಷ್ಟು ಸುಂಕವನ್ನು ಶೂನ್ಯಕ್ಕೆ ಇಳಿಸಲಾಗಿದೆ.



