HEALTH TIPS

ಟಾಟಾ ಸಮೂಹದ ಬೆಳವಣಿಗೆಗಳ ಮೇಲೆ ನಿಗಾ: ಸೆಬಿ

ಕೋಲ್ಕತ್ತ: ಟಾಟಾ ಸಮೂಹದ ಮಾಲೀಕತ್ವದ ಹೊಂದಿರುವ ಕಂಪನಿಯ ಆಡಳಿತಕ್ಕೆ ಸಂಬಂಧಿಸಿದಂತೆ ಆಗುತ್ತಿರುವ ಬೆಳವಣಿಗೆಗಳ ಮೇಲೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಕಣ್ಣಿಟ್ಟಿದೆ ಎಂದು ಸೆಬಿ ಅಧ್ಯಕ್ಷ ತುಹಿನ್ ಕಾಂತ ಪಾಂಡೆ ತಿಳಿಸಿದ್ದಾರೆ.

ಟಾಟಾ ಸಮೂಹದ ಷೇರುಪೇಟೆ ನೋಂದಾಯಿತ ಕಂಪನಿಗಳು ಹಾಗೂ ಅವುಗಳ ಪ್ರವರ್ತಕರು ಸೆಬಿ ನಿಯಮಗಳಿಗೆ ಬದ್ಧರಾಗಿ ಇರಬೇಕಾ ಗುತ್ತದೆ ಎಂದು ಪಾಂಡೆ ಸ್ಪಷ್ಟಪಡಿಸಿದ್ದಾರೆ. 


ಟಾಟಾ ಸಮೂಹದ ಕಂಪನಿಗಳ ಮಾಲೀಕತ್ವವನ್ನು ಟಾಟಾ ಸನ್ಸ್ ಹೊಂದಿದೆ. ಟಾಟಾ ಸನ್ಸ್‌ನ ಆಡಳಿತಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳು ಸೃಷ್ಟಿಯಾಗಿವೆ. ಎನ್. ಚಂದ್ರಶೇಖರನ್ ಅವರನ್ನು ಟಾಟಾ ಸನ್ಸ್ ಅಧ್ಯಕ್ಷರನ್ನಾಗಿ ಮರುನೇಮಕ ಮಾಡುವುದು ಹಾಗೂ ಷೇರುಪೇಟೆಯಲ್ಲಿ ಟಾಟಾ ಸನ್ಸ್‌ನ ನೋಂದಣಿ ವಿಚಾರವಾಗಿ ಟಾಟಾ ಸನ್ಸ್‌ನ ನಿರ್ದೇಶಕರ ನಡುವೆ ಭಿನ್ನಾಭಿಪ್ರಾಯ ಇದೆ.

'ಟಾಟಾ ಸಮೂಹದ ಷೇರುಪೇಟೆ ನೋಂದಾಯಿತ ಕಂಪನಿಗಳು ಸಂಬಂಧಪಟ್ಟ ನಿಯಮಗಳನ್ನು ಪಾಲಿಸುತ್ತಿವೆ. ಆ ಕಂಪನಿಗಳ ಪ್ರವರ್ತಕರು ಎಲ್ಲ ನಿಯಮಗಳಿಗೆ ಬದ್ಧರಾಗಿ ಇರಬೇಕಾಗು ತ್ತದೆ' ಎಂದು ಪಾಂಡೆ ಅವರು ಇಲ್ಲಿ ಕಾರ್ಯಕ್ರಮವೊಂದರ ಸಂದರ್ಭದಲ್ಲಿ ಹೇಳಿದ್ದಾರೆ.

ಟಾಟಾ ಸಮೂಹದಲ್ಲಿನ ಬೆಳವಣಿಗೆ ಗಳ ಮೇಲೆ ಸೆಬಿ ನಿಗಾ ಇರಿಸಿದೆಯೇ ಎಂಬ ಪ್ರಶ್ನೆಗೆ ಅವರು, 'ಹೌದು... ನಾವು ಎಲ್ಲ ಬೆಳವಣಿಗೆಗಳ ಮೇಲೆ ಕಣ್ಣಿಡಬೇಕಾಗುತ್ತದೆ' ಎಂದು ಉತ್ತರಿಸಿದ್ದಾರೆ. ಟಾಟ ಸಮೂಹಕ್ಕೆ ಸೇರಿರುವ 26 ಕಂಪನಿಗಳು ಷೇರುಪೇಟೆಯಲ್ಲಿ ನೋಂದಾಯಿತ ಆಗಿವೆ. 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries