HEALTH TIPS

ಉತ್ತರ ಪ್ರದೇಶ: ಇಬ್ಬರು ಇಆರ್‌ಒಗಳ ಅಮಾನತು

 ನವದೆಹಲಿ:  ಮತದಾರರ ಪಟ್ಟಿಯಲ್ಲಿ ಅಕ್ರಮ ಎಸಗಿರುವ ಆರೋಪದಡಿ ಉತ್ತರ ಪ್ರದೇಶದ ಪೀಲೀಭೀತ್ ವಿಧಾನಸಭಾ ಕ್ಷೇತ್ರದ ಇಬ್ಬರು ಚುನಾವಣಾ ನೋಂದಣಿ ಅಧಿಕಾರಿಗಳನ್ನು (ಇಆರ್‌ಒ) ಅಮಾನತುಗೊಳಿಸಲು ಚುನಾವಣಾ ಆಯೋಗ ಆದೇಶಿಸಿದೆ.


ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ ಶನಿವಾರ ಬರೆದ ಪತ್ರದಲ್ಲಿ, ಆಯೋಗವು ಇಆರ್‌ಒಗಳಾದ ಮಯಾಂಕ್‌ ಗೋಸ್ವಾಮಿ ಮತ್ತು ಹೇಮಂತ್‌ ಚೌಧರಿ ಅವರನ್ನು ತಕ್ಷಣ ಅಮಾನತುಗೊಳಿಸುವಂತೆ ನಿರ್ದೇಶಿಸಲಾಗಿದೆ.

ಅವರ ವಿರುದ್ಧದ ಆರೋಪಪಟ್ಟಿಗಳನ್ನು ಪರಿಶೀಲನೆಗಾಗಿ ಆಯೋಗಕ್ಕೆ ಸಲ್ಲಿಸಬೇಕು ಮತ್ತು ಆಯೋಗದ ಪೂರ್ವಾನುಮತಿಯಿಲ್ಲದೆ ಅವರನ್ನು ಪುನಃ ನೇಮಕ ಮಾಡುವಂತಿಲ್ಲ ಎಂದಿದೆ.

ಇಬ್ಬರು ಅಧಿಕಾರಿಗಳು ಮತ್ತು ಮತದಾರರ ನೋಂದಣಿ ಕೇಂದ್ರದ ಕಂಪ್ಯೂಟರ್‌ ಆಪರೇಟರ್‌ ಅನಿಲ್‌ ಕುಮಾರ್‌ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನೊಂದಿಗೆ 2023ರ ಭಾರತೀಯ ನ್ಯಾಯ ಸಂಹಿತೆಯ 198ನೇ ಸೆಕ್ಷನ್‌ ಸೇರಿಸುವಂತೆ ನಿರ್ದೇಶಿಸಿದೆ.

ಕಾಂಗ್ರೆಸ್‌ ಮತ್ತು ಸಮಾಜವಾದಿ ಸೇರಿದಂತೆ ವಿಪಕ್ಷಗಳು ಮತದಾರರ ಪಟ್ಟಿಯಲ್ಲಿ ದೊಡ್ಡ ಪ್ರಮಾಣದ ಅಕ್ರಮವಾಗಿದೆ ಎಂದು ಆರೋಪಿಸಿದ್ದವು. ಬಳಿಕ ತನಿಖೆ ನಡೆಸಲಾಗಿತ್ತು. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries