HEALTH TIPS

ಪಂಜಾಬ್‌: ಆಮ್‌ ಆದ್ಮಿ ಪಕ್ಷ ತೊರೆದ ಇಬ್ಬರು ಶಾಸಕರು

ಪಾಟಿಯಾಲ : ಪಂಜಾಬ್‌ ವಿಧಾನಸಭೆಯ ಆಮ್‌ ಆದ್ಮಿ ಪಕ್ಷದ (ಆಪ್‌) ಶಾಸಕರಾದ ಚೇತನ್‌ ಸಿಂಗ್‌ ಜೌರಾಮ್‌ಜರ ಹಾಗೂ ಹರ್ಮೀತ್‌ ಸಿಂಗ್‌ ಪಠಾಣ್‌ಮಾಜರ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.


2027ರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ, ಶನಿವಾರ ಆಪ್‌ ಪಕ್ಷವು ತಮ್ಮ ಮೊದಲ ಪಟ್ಟಿ ಬಿಡುಗಡೆಗೊಳಿಸಿದ ಬೆನ್ನಲ್ಲೇ, ಈ ಬೆಳವಣಿಗೆ ನಡೆದಿದೆ. 

ಚೇತನ್‌ ಸಸಿಂಗ್ ಅವರು ಪಟಿಯಾಲ ಜಿಲ್ಲೆಯ ಸಮಾಣಾ ಹಾಗೂ ಹರ್ಮೀತ್‌ ಸಿಂಗ್‌ ಸನೌರ್‌ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಎರಡೂ ಕ್ಷೇತ್ರಗಳಿಗೆ ಇನ್ನಷ್ಟೇ ಅಭ್ಯರ್ಥಿಗಳನ್ನು ಪ್ರಕಟಿಸಬೇಕಿದೆ. ಹೀಗಿದ್ದರೂ ಹರ್ಮೀತ್‌ ಸಿಂಗ್ ಅವರು ತಮ್ಮ ರಾಜೀನಾಮೆ ಪತ್ರವನ್ನು ಆಪ್‌ ಪಕ್ಷದ ರಾಷ್ಟ್ರೀಯ ಸಂಯೋಜಕ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಕಳುಹಿಸಿದ್ದಾರೆ. ಚೇತನ್‌ ಸಿಂಗ್‌ ಅವರು ತಮ್ಮ ರಾಜೀನಾಮೆಯ ನಿರ್ಧಾರವನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಸಮಾಣಾ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿ ಪಂಜಾಬ್‌ನ ಮಾಜಿ ಸಚಿವ ಸುರ್ಜಿತ್‌ ಸಿಂಗ್‌ ರಕ್ಡಾ ಅವರನ್ನು ಆಮ್‌ ಆದ್ಮಿ ಪಕ್ಷವು ಕಳೆದ ಸೆಪ್ಟೆಂಬರ್‌ನಲ್ಲಿ ನೇಮಕಗೊಳಿಸಿತ್ತು. ಅವರನ್ನೇ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವುದು ಬಹುತೇಕ ಖಚಿತವಾಗಿದೆ. ‌

ಸನೌರ್‌ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಹರ್ಮೀತ್‌ ಸಿಂಗ್‌ ಅವರು ತಮ್ಮದೇ ಪಕ್ಷದ ಕಾರ್ಯವೈಖರಿ ಕುರಿತು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries