HEALTH TIPS

'ಇಂಡಿಯಾ' ರ‍್ಯಾಲಿಯಲ್ಲಿ ಸಿಜೆಪಿ, ಜೆನ್‌ ಝೀಗೆ ಬೆಂಬಲ ಘೋಷಿಸಿದ ಮಮತಾ ಬ್ಯಾನರ್ಜಿ

ನವದೆಹಲಿ:  ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಭಾನುವಾರ(ನ.1) ನಡೆದ 'ಇಂಡಿಯಾ'ದ ರ‍್ಯಾಲಿಯಲ್ಲಿ ಸಿಜೆಪಿ ನಾಯಕತ್ವ ಮತ್ತು ಜೆನ್‌-ಝೀ ಹೋರಾಟಗಾರರಿಗೆ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ.


ಸಿಜೆಪಿ ನಾಯಕತ್ವ ಮತ್ತು ಜೆನ್ ಝೀ ಅವರ ಬೆಂಬಲ, ಹೋರಾಟದ ಮನೋಭಾವ ಹಾಗೂ ಒಗ್ಗಟ್ಟಿಗೆ ನಾನು ನನ್ನ ಪೂರ್ಣ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದೇನೆ.

ಭಾರತವನ್ನು ಉಳಿಸಲು, ಪ್ರಜಾಪ್ರಭುತ್ವವನ್ನು ರಕ್ಷಿಸಲು, ಬಿಜೆಪಿಯನ್ನು ಎದುರಿಸಲು ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಎಲ್ಲಾ ವಿರೋಧ ಪಕ್ಷಗಳು ಹಾಗೂ ಸಮಾಜದ ವಿವಿಧ ವರ್ಗಗಳು ಒಂದಾಗಬೇಕು. ಎಲ್ಲಾ ಜಾತಿಗಳು, ಸಮುದಾಯಗಳು, ಕಮ್ಯುನಿಸ್ಟರು ಬಿಜೆಪಿಯನ್ನು ಸೋಲಿಸಲು ಒಟ್ಟಾಗಿ ಹೋರಾಡೋಣ ಎಂದು ಹೇಳಿದ್ದಾರೆ.

ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳನ್ನು ಗುರಿಯಾಗಿಸಲು ಎಸ್‌ಐಆರ್ ಪ್ರಕ್ರಿಯೆಯನ್ನು ಬಳಸಿಕೊಳ್ಳುವ ಮೂಲಕ ಬಿಜೆಪಿಯು ಚುನಾವಣಾ ಅಕ್ರಮಗಳನ್ನು ಎಸಗುತ್ತಿದೆ. ಎಸ್‌ಐಆರ್ ಅನ್ನು ಬಿಜೆಪಿಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನ್ಯಾಯಯುತ ಚುನಾವಣೆಯಲ್ಲಿ ಸೋತಿಲ್ಲ. ನಮ್ಮನ್ನು ಸೋಲುವಂತೆ ಮಾಡಲಾಗಿದೆ. ಎಸ್‌ಐಆರ್ ಸೃಷ್ಟಿಸಿರುವ ಪರಿಸ್ಥಿತಿಗೆ ಬಂಗಾಳ ಬಲಿಯಾಗಿದೆ. ಬಿಜೆಪಿಯು ಬಂಗಾಳವನ್ನು ಲೂಟಿ ಮಾಡಿದೆ, ಚುನಾವಣೆಯನ್ನೇ ಹೈಜಾಕ್ ಮಾಡಿದೆ. ಆದರೆ ನಾವು ನಮ್ಮ ಪ್ರಾಣ ಕೊಟ್ಟಾದರೂ ಪ್ರಜಾಪ್ರಭುತ್ವವನ್ನು ರಕ್ಷಿಸುತ್ತೇವೆ ಎಂದು ಹೇಳಿದ್ದಾರೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries