ಯೆಮೆನ್: ಯೆಮೆನ್ ನ ನಾಗರಿಕರು ಮತ್ತು ಅವರ ಆಸ್ತಿಗಳ ವಿರುದ್ಧ ನಡೆಸುತ್ತಿರುವ ಎಲ್ಲ ರೀತಿಯ ದಾಳಿ ಹಾಗೂ ಶತ್ರುತ್ವದ ಕಾರ್ಯಾಚರಣೆಗಳನ್ನು ತಕ್ಷಣವೇ ನಿಲ್ಲಿಸುವಂತೆ ಸೌದಿ ಅರೇಬಿಯ ನೇತೃತ್ವದ ಮೈತ್ರಿಕೂಟವು ಹೂತಿ ಬಂಡುಕೋರರಿಗೆ ಖಡಕ್ ಎಚ್ಚರಿಕೆ ನೀಡಿದೆ ಎಂದು ಂಟರಿಚಿzeeಡಿಚಿ ವರದಿ ಮಾಡಿದೆ.
ಇದರ ಬೆನ್ನಲ್ಲೇ, ಯೆಮೆನ್ ನಲ್ಲಿರುವ ಹೂತಿ ಬಂಡುಕೋರರನ್ನು ಗುರಿಯಾಗಿಸಿಕೊಂಡು ಹೊಸದಾಗಿ ಮಿಲಿಟರಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಮೈತ್ರಿಕೂಟದ ವಕ್ತಾರ ಮೇಜರ್ ಜನರಲ್ ತುರ್ಕಿ ಅಲ್-ಮಲಿಕಿ ತಿಳಿಸಿದ್ದಾರೆ.
'ಹೂತಿ ಗುಂಪು ಬಳಸುತ್ತಿದ್ದ ಪ್ರಮುಖ ಸಂಪನ್ಮೂಲಗಳನ್ನು ನಿಷ್ಕ್ರಿಯಗೊಳಿಸುವ ಉದ್ದೇಶದಿಂದ ನಿರ್ದಿಷ್ಟ ಗುರಿಗಳನ್ನು ಆಯ್ಕೆ ಮಾಡಿಕೊಂಡು ಮಿಲಿಟರಿ ಕಾರ್ಯಾಚರಣೆ ನಡೆಸಿದ್ದೇವೆ' ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
'ಹೂತಿ ಗುಂಪಿನ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಅಗತ್ಯವಾದ ಕಾರ್ಯಾಚರಣಾ ಕ್ರಮಗಳನ್ನು ಕೈಗೊಳ್ಳುವುದನ್ನು ಮತ್ತು ಜಾರಿಗೊಳಿಸುವುದನ್ನು ಮುಂದುವರಿಸುತ್ತೇವೆ. ನಾಗರಿಕರು ಹಾಗೂ ನಾಗರಿಕರ ಆಸ್ತಿಗಳ ವಿರುದ್ಧ ಹೂತಿ ಗುಂಪು ನಡೆಸುತ್ತಿರುವ ಎಲ್ಲ ರೀತಿಯ ಶತ್ರುತ್ವದ ಮತ್ತು ಕ್ರೂರ ಕಾರ್ಯಾಚರಣೆಗಳನ್ನು ತಕ್ಷಣವೇ ನಿಲ್ಲಿಸಬೇಕು' ಎಂದು ಅವರು ಎಚ್ಚರಿಸಿದ್ದಾರೆ.



