HEALTH TIPS

ಇಸ್ರೇಲ್‌ ಚುನಾವಣೆ| ನೆತನ್ಯಾಹು ಬಣಕ್ಕೆ ಬಹುಮತ ಕೊರತೆ: ಸರ್ಕಾರ ರಚನೆ ಅನಿಶ್ಚಿತತೆ

ಟೆಲ್‌ ಅವೀವ್‌: ಇಸ್ರೇಲ್‌ ಚುನಾವಣೆಯಲ್ಲಿ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಬಣವು ಬಹುಮತದ ಕೊರತೆ ಎದುರಿಸುತ್ತಿರುವುದರಿಂದ ಸರ್ಕಾರ ರಚನೆ ಅನಿಶ್ಚಿತವಾಗಿದೆ.


120 ಸದಸ್ಯ ಬಲದ ಸಂಸತ್ತಿನಲ್ಲಿ ಬಹುಮತಕ್ಕೆ 61 ಸ್ಥಾನಗಳು ಬೇಕಾಗುತ್ತವೆ. ನೆತನ್ಯಾಹು ನೇತೃತ್ವದ ಲಿಕುಡ್‌ ಪಕ್ಷವು 53 ಸ್ಥಾನಗಳಲ್ಲಿ ಜಯಗಳಿಸಿದೆ. 

ಬಹುಮತಕ್ಕೆ ಅಗತ್ಯವಿರುವುದಕ್ಕಿಂತ 8 ಸ್ಥಾನಗಳ ಕೊರತೆಯನ್ನು ಎದುರಿಸುತ್ತಿದೆ. ಹೊಸ ಸರ್ಕಾರ ರಚನೆಯಲ್ಲಿ ಅರಬ್‌ ಪಕ್ಷಗಳೊಂದಿಗೆ ಕೈಜೋಡಿಸುವುದಿಲ್ಲ ಎಂದು ನೆತನ್ಯಾಹು ಈಗಾಗಲೇ ಹೇಳಿರುವುದರಿಂದ ಬಿಕ್ಕಟ್ಟು ತಲೆದೋರಿದೆ.

ಮಾಜಿ ಸೇನಾ ಮುಖ್ಯಸ್ಥ ಐಸೆನ್‌ಕೋಟ್‌ ನೇತೃತ್ವದ ವಿರೋಧ ಪಕ್ಷಗಳ ಮೈತ್ರಿಕೂಟವು 48 ಸ್ಥಾನಗಳಲ್ಲಿ ಹಾಗೂ ಅರಬ್‌ ಪಕ್ಷಗಳು 19 ಸ್ಥಾನಗಳಲ್ಲಿ ಜಯಗಳಿಸಿವೆ ಎಂದು ಇಸ್ರೇಲ್‌ನ ಕೇಂದ್ರ ಚುನಾವಣಾ ಸಮಿತಿಯು (ಸಿಇಸಿ) ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ.

ನೆತನ್ಯಾಹು ಆರೋಪ ಆಧಾರರಹಿತ: ಸಿಇಸಿ ಚುನಾವಣಾ ದೂರುಗಳ ಕುರಿತು ವಿಚಾರಣೆಗಳನ್ನು ಪೂರ್ಣಗೊಳಿಸಿದ ನಂತರ ಚುನಾವಣಾ ಸಮಿತಿಯು ನವೆಂಬರ್‌ 4ರಂದು ಅಂತಿಮ ಫಲಿತಾಂಶವನ್ನು ಅಧ್ಯಕ್ಷ ಐಸಾಕ್‌ ಹೆರ್ಜಾಗ್‌ ಅವರಿಗೆ ಸಲ್ಲಿಸಲಿದೆ. ನಂತರ ಅಧ್ಯಕ್ಷರು ಪಕ್ಷಗಳ ಮುಖಂಡರನ್ನು ಕರೆದು ಬಹುಮತ ಇರುವ ಪಕ್ಷಕ್ಕೆ ಹೊಸ ಸರ್ಕಾರ ರಚನೆಗೆ ಶಿಫಾರಸು ಮಾಡುತ್ತಾರೆ. 'ಚುನಾವಣೆಯನ್ನು ಕಾನೂನುಬದ್ಧವಾಗಿ ನಡೆಸಲಾಗಿದೆ ಎಂದಿರುವ ಸಿಇಸಿ ಮಹಾನಿರ್ದೇಶಕ ಡೀನ್‌ ಲಿವ್ನೆ ಅರಬ್‌ ಪಕ್ಷಗಳಿಂದ ಅಕ್ರಮ ನಡೆದಿದೆ ಎಂಬ ನೆತನ್ಯಾಹು ಅವರ ಆರೋಪವು ಆಧಾರರಹಿತ' ಎಂದು ಹೇಳಿದ್ದಾರೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries