HEALTH TIPS

ಸಿಪಿಎಂ ಬಂದ್ಯೋಡು ಲೋಕಲ್ ಕಾರ್ಯದರ್ಶಿಗೆ ಮನೆ ನಿರ್ಮಾಣ: ಸಮಿತಿ ರಚನೆ

ಉಪ್ಪಳ: ಸಿಪಿಎಂ ಬಂದ್ಯೋಡು ಲೋಕಲ್ ಸಮಿತಿ ಕಾರ್ಯದರ್ಶಿ ಹನೀಫ್ ಶಿರಿಯ ಅವರಿಗೆ ಪಕ್ಷದ ಕುಂಬಳೆ ಏರಿಯಾ ಸಮಿತಿ ವತಿಯಿಂದ ನೂತನ ಮನೆ ನಿರ್ಮಿಸಿಕೊಡಲು ತೀರ್ಮಾನಿಸಲಾಗಿದ್ದು, ಈ ಸಂಬಂಧ ರಚನಾ ಸಭೆಯು ಕೈಕಂಬದ ಸಾಗರ್ ಸಭಾಂಗಣದಲ್ಲಿ ನಡೆಯಿತು.

ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಕೆ.ಆರ್. ಜಯಾನಂದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಿಪಿಎಂ ರಾಜ್ಯ ಸಮಿತಿ ಸದಸ್ಯ, ನ್ಯಾಯವಾದಿ ಸಿ.ಎಚ್. ಕುಂಞಂಬು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮನೆ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ ಸಿ.ಜಿ. ಮ್ಯಾಥ್ಯೂ ಹಾಗೂ ಸಂಚಾಲಕರಾಗಿ ಅಬ್ದುಲ್ ರಜಾಕ್ ಚಿಪ್ಪಾರು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಏರಿಯಾ ಸಮಿತಿ ಸದಸ್ಯರಾದ ಚಂದ್ರ ನಾಯ್ಕ್ ಮಾನಿಪ್ಪಾಡಿ, ಹಾರೀಸ್ ಪೈವಳಿಕೆ, ಪ್ರಶಾಂತ ಕನಿಲ, ಕರುಣಾಕರ ಶೆಟ್ಟಿ, ಸಾದಿಕ್ ಚೆರುಗೋಳಿ, ನವೀನ, ರಾಮಚಂದ್ರ ಟಿ. ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಏರಿಯಾ ಕಾರ್ಯದರ್ಶಿ ಸಿ.ಜಿ. ಮ್ಯಾಥ್ಯೂ ಸ್ವಾಗತಿಸಿ, ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries