HEALTH TIPS

ಜೋಡುಕಲ್ಲು ಗಣೇಶ ಮಂದಿರ ಸಂರಕ್ಷಣೆಗಾಗಿ ಇಂದು 'ಜಾಗೃತ ಹಿಂದೂ ಶಕ್ತಿ ಸಂಗಮ'

ಉಪ್ಪಳ: ಐತಿಹಾಸಿಕ ಜೋಡುಕಲ್ಲು ಗಣೇಶ ಮಂದಿರದ ಸಂರಕ್ಷಣೆಗಾಗಿ ಕಳೆದ ಹಲವು ದಿನಗಳಿಂದ ನಿರಂತರ ಭಜನೆ, ಯಾಗ, ನಾಮಜಪ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಭರದಿಂದ ಸಾಗುತ್ತಿವೆ. ಇದರ ಮುಂದುವರಿದ ಭಾಗವಾಗಿ ಮಂದಿರ ರಕ್ಷಣೆಯ ಸಂಕಲ್ಪದೊಂದಿಗೆ ಇಂದು(ಭಾನುವಾರ) ಜೋಡುಕಲ್ಲು ಜಂಕ್ಷನ್‍ನಲ್ಲಿ ಬೃಹತ್ ' ಜೋಡುಕಲ್ಲು ಚಲೋ - ಜಾಗೃತ ಹಿಂದೂ ಶಕ್ತಿ ಸಂಗಮ'ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಈಗಾಗಲೇ ಮಂದಿರದ ಜಾಗಕ್ಕೆ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಸೇರಿದಂತೆ ಪ್ರಮುಖ ಮಠಾಧೀಶರು ಭೇಟಿ ನೀಡಿ ಆಶೀರ್ವಚನ ಮತ್ತು ಮಾರ್ಗದರ್ಶನ ನೀಡಿದ್ದಾರೆ. ಅಲ್ಲದೆ ವಿವಿಧ ಧಾರ್ಮಿಕ ಮುಖಂಡರು ಕ್ಷೇತ್ರಕ್ಕೆ ಆಗಮಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಮಂದಿರದ ಪರಿಸರಕ್ಕೆ ಆಗಮಿಸಿ ಧಾರ್ಮಿಕ ಕೈಂಕರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇಂದುಯಲಿರುವ ಐತಿಹಾಸಿಕ ಶಕ್ತಿ ಸಂಗಮ ಸಮಾವೇಶದ ಹಿನ್ನೆಲೆಯಲ್ಲಿ ಜೋಡುಕಲ್ಲು ಪರಿಸರದಲ್ಲಿ ಸಿದ್ಧತೆಗಳು ಹಾಗೂ ಸ್ವಚ್ಛತಾ ಕಾರ್ಯಗಳು ಪೂರ್ಣಗೊಂಡಿದೆ. ಬಿಗು ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries