HEALTH TIPS

ಕಾಸರಗೋಡು ದಸರೋತ್ಸವ ಸಂಪನ್ನ: ಸ್ವಚ್ಛತಾ ಕಾಯಕಯೋಗಿಗಳಿಗೆ ಸನ್ಮಾನ, ‘ಗೆಜ್ಜೆ ಹೆಜ್ಜೆ’ ನೃತ್ಯ ವೈಭವ

 ಕಾಸರಗೋಡು: ನಗರದ ಕೋಟೆಕಣಿಯಲ್ಲಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯ ವತಿಯಿಂದ ಅತ್ಯಂತ ವೈಭವ ಮತ್ತು ಸಾಂಸ್ಕೃತಿಕ ಸಂಭ್ರಮದೊಂದಿಗೆ ಆಯೋಜಿಸಲಾಗಿದ್ದ 'ಕಾಸರಗೋಡು ದಸರೋತ್ಸವ'ದ ಸಮಾರೋಪ ಸಮಾರಂಭವು ಭಾನುವಾರ ಯಶಸ್ವಿಯಾಗಿ ನೆರವೇರಿತು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಾಸ ಸಂಕೀರ್ತನಕಾರ ಹರಿದಾಸ ಜಯಾನಂದ ಕುಮಾರ್ ಅವರು, "ಗಡಿನಾಡಿನ ನೆಲದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಸಾಂಸ್ಕೃತಿಕ ಉತ್ಸವಗಳು ನಮ್ಮ ಅಸ್ಮಿತೆಯನ್ನು ಗಟ್ಟಿಗೊಳಿಸುತ್ತವೆ. ಸಮಾಜಕ್ಕಾಗಿ ನಿರಂತರವಾಗಿ ನಿಸ್ವಾರ್ಥ ಸೇವೆ ಸಲ್ಲಿಸುವ ತಳಮಟ್ಟದ ಕಾಯಕಜೀವಿಗಳನ್ನು ಗುರುತಿಸಿ ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಮತ್ತು ಸಮಾಜದ ಹೊಣೆಗಾರಿಕೆಯಾಗಿದೆ," ಎಂದು ಅಭಿಪ್ರಾಯಪಟ್ಟರು.

ಗಣ್ಯರ ನುಡಿ:

ಬೆಂಗಳೂರು ಕನ್ನಡ ಕ್ರಿಯಾಸಮಿತಿಯ ಗೌರವಾಧ್ಯಕ್ಷ ಶಿವಪ್ರಸಾದ್ ಹೆಚ್.ಸಿ. ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, "ಗಡಿನಾಡಿನಲ್ಲಿ ಕನ್ನಡದ ಕಂಪನ್ನು ಪಸರಿಸಲು ನಿರಂತರ ಸಾಂಸ್ಕೃತಿಕ ಹಾಗೂ ಭಾಷಿಕ ಚಟುವಟಿಕೆಗಳು ಅನಿವಾರ್ಯ. ಗಡಿಯಂಚಿನಲ್ಲಿದ್ದರೂ ಇಲ್ಲಿನ ಜನರಲ್ಲಿರುವ ಕನ್ನಡದ ಕಿಚ್ಚು ರಾಜಧಾನಿಯ ಜನರಿಗೂ ಮಾದರಿ ಹಾಗೂ ಪ್ರೇರಣಾದಾಯಕವಾಗಿದೆ," ಎಂದು ಶ್ಲಾಘಿಸಿದರು.

ಮತ್ತೊಬ್ಬ ಮುಖ್ಯ ಅತಿಥಿ, ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜ್ಞಾನಿ ಶ್ಯಾನುಭೋಗ್ ಮಾತನಾಡಿ, "ಗ್ರಾಮದ ಪ್ರಗತಿ ಹಾಗೂ ಸ್ವಚ್ಛತೆಯೇ ನೈಜ ಸಮಾಜ ಸೇವೆ. ಸಾರ್ವಜನಿಕ ಆರೋಗ್ಯ ಮತ್ತು ನೈರ್ಮಲ್ಯ ಕಾಪಾಡುವಲ್ಲಿ ಹಗಲಿರುಳು ದುಡಿಯುವ ಹಸಿರು ಕ್ರಿಯಾಸೇನೆ ಸಿಬ್ಬಂದಿಗಳನ್ನು ಈ ವೇದಿಕೆಯಲ್ಲಿ ಗೌರವಿಸಿರುವುದು ಶ್ಲಾಘನೀಯ ಕ್ರಮ," ಎಂದರು. ಸಮಾರಂಭದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಶಿವರಾಮ ಕಾಸರಗೋಡು ಉಪಸ್ಥಿತರಿದ್ದರು.


ಕಾಯಕಯೋಗಿಗಳಿಗೆ ‘ದಸರಾ ಗೌರವಾರ್ಪಣೆ’:

ನಗರದ ನೈರ್ಮಲ್ಯ ಮತ್ತು ಸ್ವಚ್ಛತೆಗೆ ನಿರಂತರ ಶ್ರಮಿಸುತ್ತಿರುವ ನಗರಸಭೆಯ ಹಸಿರು ಕ್ರಿಯಾಸೇನೆ ಸಿಬ್ಬಂದಿಗಳಾದ ಗಾಯತ್ರಿ ಕಿಣಿ, ಚಿತ್ರಾ ಬಿ., ಶಕುಂತಳಾ ಸಿ. ಹಾಗೂ ಜಯಶ್ರೀ ಕೆ. ಅವರಿಗೆ ಶಾಲು ಹೊದಿಸಿ 'ದಸರಾ ಗೌರವಾರ್ಪಣೆ' ನೀಡಿ ಸನ್ಮಾನಿಸಲಾಯಿತು.

ಸಾಂಸ್ಕೃತಿಕ ರಂಗು:

ಕಾರ್ಯಕ್ರಮದ ಆರಂಭದಲ್ಲಿ ದಿವಾಕರ ಅಶೋಕ ನಗರ, ಸುನಿಲ್ ಕೋಲಾರ, ಗಣೇಶ ಆಚಾರ್ಯ ಹಾಗೂ ಉದಯ ಆಚಾರ್ಯ ಕಾಳೆ ಅವರಿಂದ ಸುಶ್ರಾವ್ಯ ಗಾಯನ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಗುರುರಾಜ್ ಎಂ.ಆರ್ ಬಳಗ ಮತ್ತು ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ ಕಾಸರಗೋಡು ಇವರ ಸಂಯುಕ್ತ ಆಶ್ರಯದಲ್ಲಿ ಬಾಲಪ್ರತಿಭೆಗಳಿಂದ ಪ್ರದರ್ಶನಗೊಂಡ 'ಗೆಜ್ಜೆ ಹೆಜ್ಜೆ' ನೃತ್ಯ ವೈಭವ ಪ್ರೇಕ್ಷಕರ ಮನಸೂರೆಗೊಂಡಿತು.

ಸಮಿತಿಯ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶ್ರೀಷ ಜಿ.ಕೆ. ವಂದಿಸಿದರು. ಪತ್ರಕರ್ತ ಪುರುಷೋತ್ತಮ ಭಟ್ ಕೆ. ಕಾರ್ಯಕ್ರಮ ನಿರೂಪಿಸಿದರು. 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries