HEALTH TIPS

ನನ್ನ ಬಳಿ ವಿಟೋ ಅಧಿಕಾರವಿದೆ: ಅಭಿನಂದಿಸುತ್ತಲೇ ಎಚ್ಚರಿಕೆ ನೀಡಿದ ಟ್ರಂಪ್‌

ವಾಷಿಂಗ್ಟನ್‌: ಮಧ್ಯಂತರ ಚುನಾವಣೆಯ ಸೋಲಿನ ಬೆನ್ನಲ್ಲೇ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ಡೆಮಾಕ್ರಟಿಕ್ ಪಕ್ಷವನ್ನು ಅಭಿನಂದಿಸಿದ್ದಾರೆ. 


ವಿರೋಧ ಪಕ್ಷದೊಂದಿಗೆ ಕೆಲಸ ಮಾಡಲು ತಾನು ಸಿದ್ಧನಿದ್ದೇನೆ ಎಂದು ಹೇಳಿರುವ ಅವರು, 'ನನಗೆ ಅನೇಕ ಡೆಮಾಕ್ರಟಿಕ್ ನಾಯಕರ ಪರಿಚಯವಿದೆ. 

ನನ್ನ ಬಳಿ ಸಂಪೂರ್ಣ ವಿಟೋ ಅಧಿಕಾರವಿದೆ. ಹಾಗಾಗಿ ನಾವು ಎಲ್ಲ ವಿಚಾರಗಳಲ್ಲೂ ಒಮ್ಮತಕ್ಕೆ ಬರಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸವಿದೆ' ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಟ್ರಂಪ್ ತಮ್ಮ 'ಟ್ರೂತ್ ಸೋಶಿಯಲ್'ನಲ್ಲಿ ಕೆಂಪು ಬಣ್ಣದ ಬೇಸ್‌ಬಾಲ್ ಕ್ಯಾಪ್‌ನ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಆ ಟೋಪಿಯ ಮೇಲೆ 'ವಿಟೋ' ಎಂದು ಬರೆದಿದೆ.

'ಅವರು ನನ್ನೊಂದಿಗೆ ಕೆಲಸ ಮಾಡಲು ಬಯಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಇಲ್ಲದಿದ್ದರೆ, ವಿಟೋ ಅಧಿಕಾರ ಬಳಸಿ ಮಸೂದೆಯನ್ನು ತಡೆಯುತ್ತೇನೆ. ಅದನ್ನು ಅವರು ಬಯಸುವುದಿಲ್ಲ' ಎಂದು ಟ್ರಂಪ್ ಹೇಳಿದ್ದಾರೆ.

ಡೆಮಾಕ್ರಟಿಕ್ ಪಕ್ಷದ ಭರ್ಜರಿ ಗೆಲುವಿನಿಂದಾಗಿ, ಅಮೆರಿಕದ ಆಡಳಿತದಲ್ಲಿ ಮಹತ್ವದ ಬದಲಾವಣೆಗಳಾಗುವ ಸಾಧ್ಯತೆಯಿದೆ. ಟ್ರಂಪ್ ಸರ್ಕಾರದ ಕಾನೂನು ಪ್ರಸ್ತಾಪಗಳನ್ನು ತಡೆಯಲು, ಅವರ ಆಡಳಿತದ ವಿರುದ್ಧ ವ್ಯಾಪಕ ತನಿಖೆಗಳನ್ನು ನಡೆಸಲು ಹಾಗೂ ನ್ಯಾಯಾಂಗ ಮತ್ತು ಉನ್ನತ ಸರ್ಕಾರಿ ಹುದ್ದೆಗಳಿಗೆ ಅವರು ಮಾಡುವ ನೇಮಕಾತಿಗಳಿಗೆ ಅಡ್ಡಿಪಡಿಸಲು ವಿರೋಧ ಪಕ್ಷಕ್ಕೆ ಅವಕಾಶ ದೊರೆಯಲಿದೆ.

ಇದಕ್ಕೂ ಮೊದಲು 'ಟ್ರೂತ್ ಸೋಶಿಯಲ್'ನಲ್ಲಿ ಪೋಸ್ಟ್ ಮಾಡಿದ್ದ ಟ್ರಂಪ್, ತಾವು ಚುನಾವಣಾ ಕಣದಲ್ಲಿರದ ಕಾರಣ ರಿಪಬ್ಲಿಕನ್ ಪಕ್ಷ ಸೋಲು ಅನುಭವಿಸಿದೆ ಎಂದು ಹೇಳಿದ್ದರು.

'ನಾನೇ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ, ನಾವು ಭಾರೀ ಬಹುಮತದೊಂದಿಗೆ ಗೆಲ್ಲುತ್ತಿದ್ದೆವು!' ಎಂದು ಅವರು ಬರೆದುಕೊಂಡಿದ್ದರು.

ಏನಿದು ವಿಟೋ ಅಧಿಕಾರ:

ವಿಟೋ ಅಧಿಕಾರ ಎಂದರೆ, ಕಾಂಗ್ರೆಸ್ ಅಂಗೀಕರಿಸಿದ ಮಸೂದೆಯನ್ನು ತಿರಸ್ಕರಿಸುವ ಮೂಲಕ ಅದು ಕಾನೂನಾಗಿ ಜಾರಿಗೆ ಬರುವುದನ್ನು ತಡೆಯುವ ಅಮೆರಿಕ ಅಧ್ಯಕ್ಷರ ಸಾಂವಿಧಾನಿಕ ಅಧಿಕಾರವಾಗಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries