ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 10, 2017
ಪ್ರತಾಪನಗರದಲ್ಲಿ ಕೊಂಡವೂರು ಶ್ರೀಗಳಿಂದ ಸತ್ಸಂಗ
ಉಪ್ಪಳ: ಮಂಗಲ್ಪಾಡಿ ಗ್ರಾಮ ವಿಕಾಸ ಸಮಿತಿ ಮತ್ತು ಶ್ರೀ ಗೌರೀ ಗಣೇಶ ಮಂದಿರ ಪ್ರತಾಪನಗರ ಇವುಗಳ ಅಶ್ರಯದಲ್ಲಿ ಗೋಪೂಜೆ ಆಚರಣೆಯ ಹಿನ್ನೆಲೆಯಲ್ಲಿ ಇತ್ತೀಚೆಗೆ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಅವರಿಂದ ಸತ್ಸಂಗ ಕಾರ್ಯಕ್ರಮ ನಡೆಯಿತು.
ಮನುಷ್ಯನ ಮನಸ್ಸು ವಿಶಾಲವಾದಷ್ಟೂ ಆತ ಸಜ್ಜನನಾಗುತ್ತಾನೆ. ಜೊತೆಗೆ ಇತರರನ್ನೂ ಒಳ್ಳೆಯವರಾಗುವಂತೆ ಪ್ರೇರೇಪಣೆ ನೀಡುತ್ತಾನೆ. ಒಬ್ಬ ನಿಷ್ಕಲ್ಮಶ ಮನಸ್ಸಿನಿಂದ ಸಮಾಜದ ಹಿತಕ್ಕಾಗಿ ದುಡಿಯುತ್ತಾನೆಯೋ ಆತನ ಬಗ್ಗೆ ಸಮಾಜವೂ ಅಪಾರವಾದ ಗೌರವವನ್ನು ಬೆಳೆಸಿಕೊಂಡಿರುತ್ತದೆ. ಸಮಾಜದ ಏಳಿಗೆಗೋಸ್ಕರ ಸರ್ವಸ್ವವನ್ನೂ ತ್ಯಾಗ ಮಾಡುವವನನ್ನು ಸಮಾಜ ಎಂದೂ ಕಡೆಗಣಿಸದು ಎಂದು ಅವರು ನುಡಿದರು. ಗ್ರಾಮ ವಿಕಾಸ ಸಮಿತಿ ಹಾಗೂ ಗೌರೀ ಗಣೇಶ ಮಂದಿರದ ಪದಾಧಿಕಾರಿಗಳು, ಕಾರ್ಯಕರ್ತರು ಸತ್ಸಂಗದಲ್ಲಿ ಭಾಗವಹಿಸಿದರು.


