HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ದಾಸರಪದಗಳು ಸಾರ್ವಕಾಲಿಕ ಮೌಲ್ಯದ್ದು : ಬಬಿತಾ ಕಾಸರಗೋಡು: ದಾಸರ ಅನು`ವಜನ್ಯ ವಿಚಾರಧಾರೆಗಳ ಮೂಲಕ ಸೃಷ್ಟಿಯಾದ ಪದಗಳು ಸಾರ್ವಕಾಲಿಕ ಮೌಲ್ಯದ್ದು ಎಂದು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿ ಬಬಿತಾ ಅವರು ಅಭಿಪ್ರಾಯಪಟ್ಟರು. ಅವರು ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಸಹಕಾರದೊಂದಿಗೆ ಆಯೋಜಿಸಿದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ಕನಕದಾಸರು ಜನಮಾನಸದಲ್ಲಿ ಬೆರೆತು ಹೋದ ಸಾಹಿತಿ. ಅವರ ಕೀರ್ತನೆಗಳಲ್ಲಿ ಮುಖ್ಯ ಭಾವ ಶಕ್ತಿ. ಕನರ್ಾಟಕ ಸಂಗೀತಕ್ಕೆ ಅವರ ಕೊಡುಗೆ ಅಪಾರ. ಸಮಾಜವನ್ನು ಸಮದೃಷ್ಟಿಯಿಂದ ನೋಡಿದ ಕನಕದಾಸರು ಧಾಮರ್ಿಕದ ಮುಖವಾಡವನ್ನು ಹೊತ್ತುಕೊಂಡು ಧಾಮರ್ಿಕ ಕಪಟತನವನ್ನು ತೋರುವ ಕಪಟಿಗಳನ್ನು ಬಯಲಿಗೆಳೆದವರು. ಸಮಾಜದಲ್ಲಿರುವ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ ಕನಕದಾಸರು `ನಾನೆಂಬ ಅಹಂ' ಬಿಟ್ಟರೆ ಸ್ವರ್ಗಕ್ಕೆ ಹೋಗಬಹುದು ಎಂಬುದನ್ನು ತೋರಿಸಿಕೊಟ್ಟವರು ಕನಕದಾಸರು ತೋರಿಸಿಕೊಟ್ಟ ಅಹಂ ನಿವಾರಣೆಯ ನಿದರ್ಶನ ಇಂದಿಗೂ ಪ್ರಸ್ತುತ. ಅವರ ಕೀರ್ತನೆಗಳಲ್ಲಿ ಸರಳವಾದ ಉದಾಹರಣೆ ಕೊಡುವ ಮೂಲಕ ಗಹನವಾದ ವಿಚಾರಗಳನ್ನು ತೆರೆದಿಡುತ್ತಾರೆ ಎಂದರು. ಯುದ್ಧವು ಯಾರ ಹೃದಯವನ್ನೂ ಶುದ್ಧಿ ಮಾಡುವುದಿಲ್ಲ. ಯುದ್ಧವೆಂದರೆ ಜೀವಿಗಳೊಡನೆ ನಡೆಸುವ ಚೆಲ್ಲಾಟ. ಯುದ್ಧವೆಂದರೆ ನಾಶ. ಅದೊಂದು ರಾಕ್ಷಸಿ ಪ್ರವೃತಿ. ಈ ರಾಜ್ಯದ ರಾಜನೊಬ್ಬನಿದ್ದರೆ, ರಾಜ್ಯ ರಾಜ್ಯಗಳ ರಾಜನೊಬ್ಬನಿದ್ದಾನೆ. ನಾನು ಅವನನ್ನು ಅರಸಿ ಹೊರಟೆ ಎಂದು ಆತ್ಮಶೋಧನೆಯಲ್ಲಿ ಕನಕದಾಸರು ತೊಡಗುತ್ತಾರೆ ಎಂದು ಹೇಳಿದರು. ಮನಸ್ಸಿಗೆ ನಾಟುವ ಸಾಹಿತ್ಯ : ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಖ್ಯಾತ ದಾಸ ಸಂಕೀರ್ತನಕಾರರಾದ ರಾಮಕೃಷ್ಣ ಕಾಟುಕುಕ್ಕೆ ಅವರು ಮಾತನಾಡಿ ದಾಸ ಕೀರ್ತನೆಗಳು ಭಜನೆಗೆ ಮೂಲವಾದ ಹಾಡುಗಳು. ಕನಕದಾಸರು ಕೀರ್ತನೆಗಳ ಮೂಲಕ ಭಾವನೆಗೆ, ಮನಸ್ಸಿಗೆ ನಾಟುವಂತೆ ಸಾಹಿತ್ಯವನ್ನು ನೀಡಿದ್ದಾರೆ. ಇಂದು ಭಗವಂತನೊಂದಿಗೆ ಒಂದು ದಿನ ಕೂಡಾ ಅನುಸಂ`ಾನ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಅವರು ಸೇವಾ ತತ್ವ ಇದ್ದಲ್ಲಿ ಭಗವಂತ ಒಲಿಯುತ್ತಾನೆ. ಆರೋಗ್ಯಪೂರ್ಣವಾದ ಜೀವನಕ್ಕೆ ಭಗವಂತ ನಮ್ಮೊಂದಿಗಿರುತ್ತಾನೆ. ಕನಕದಾಸರ ಪದಗಳನ್ನು, ಕೀರ್ತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪಾವನರಾಗೋಣ ಎಂದರು. ಕಾರ್ಯಕ್ರಮದಲ್ಲಿ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕನಕದಾಸರು ಕನ್ನಡ ನಾಡು ಕಂಡ ಅಪರೂಪದ ಕೀರ್ತನಕಾರರು, ಕವಿ, ಸಮಾಜ ಸುಧಾರಕರು ಹಾಗೂ ದಾರ್ಶನಿಕರು. ಹಿಂಸೆಯ ನಿರರ್ಥಕತೆಯನ್ನು ಕಂಡು ದಾಸ ಶ್ರೇಷ್ಠರಾದರು. ಆತ್ಮಶೋಧನೆಯಲ್ಲಿ ಕನರ್ಾಟಕದ ಎಲ್ಲ ಪ್ರಮುಖ ಪುಣ್ಯ ಸ್ಥಳಗಳನ್ನು ಸಂದಶರ್ಿಸಿ ವ್ಯಾಸರಾಯರ ಶಿಷ್ಯನಾಗಿ, ಅನೇಕ ಭಕ್ತಿ ರಸ ಪ್ರಧಾನ ಕಾವ್ಯಗಳನ್ನು ರಚಿಸಿ ಕನಕದಾಸನಾಗುತ್ತಾರೆ ಎಂದರು. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಶಿವರಾಮ ಕಾಸರಗೋಡು ಅವರು ಶುಭಹಾರೈಸಿದರು. ಕನಕ ಜಯಂತಿ ಕಾರ್ಯಕ್ರಮದಂಗವಾಗಿ ಸಪ್ತಗಿರಿ ಮಹಿಳಾ ಭಜನಾ ಸಂಘ ಪಾರೆಕಟ್ಟೆ, ಶ್ರೀ ಮುತ್ತಪ್ಪ ಮಹಿಳಾ ಭಜನಾ ಸಂಘ ಪಾರೆಕಟ್ಟೆ ಮತ್ತು ಶ್ರೀರಾಮನಾಥ ಸಾಂಸ್ಕೃತಿಕ ಭಜನಾ ಸಂಘ ಕೋಟೆಕಣಿ ಇವರಿಂದ ದಾಸ ಕೀರ್ತನೆ ನಡೆಯಿತು. ಶ್ರೀರಾಮನಾಥ ಸಾಂಸ್ಕೃತಿಕ `ವನ ಸಮಿತಿಯ ಪ್ರಧಾನ ಸಂಚಾಲಕ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಸಂದೇಶ್ ಕೋಟೆಕಣಿ ಸ್ವಾಗತಿಸಿದರು. ದಿವಾಕರ ಅಶೋಕನಗರ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries