ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 10, 2017
ಉದ್ಯಮಿಗಳನ್ನು ಸೃಷ್ಟಿಸಬೇಕು, ಉದ್ಯೋಗ ಹುಡುಕುವವರನ್ನಲ್ಲ: ವೆಂಕಯ್ಯ ನಾಯ್ಡು
ನವದೆಹಲಿ: ಸಕರ್ಾರಕ್ಕೆ ಉದ್ಯೋಗ ಸೃಷ್ಟಿ ಸವಾಲಾಗಿರುವ ಸಂದರ್ಭದಲ್ಲಿ ಯುವಕರನ್ನು ಉದ್ಯೋಗ ಹುಡುಕುವವರನ್ನಾಗಿ ಮಾಡುವುದಕ್ಕಿಂತ ಉದ್ಯಮಿಗಳನ್ನಾಗಿ ಮಾಡುವುದೇ ಸವಾಲಿನ ಸಂಗತಿ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಭಾರತದಲ್ಲಿ ಅಸಮಾನತೆ ಇದ್ದೇ ಇದೆ, ಆದ್ದರಿಂದ ಸಮಗ್ರ ಅಭಿವೃದ್ಧಿಯ ಕಡೆಗೆ ಗಮನ ಹರಿಸಬೇಕಿದೆ, ದಮನಕ್ಕೊಳಗಾದ, ತುಳಿತಕ್ಕೊಳಗಾದವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂದು ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ಯುವ ಟ್ರಸ್ಟ್ ನ ರಜತ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿರುವ ವೆಂಕಯ್ಯ ನಾಯ್ಡು, ಯುವಜನತೆಯನ್ನು ಹೆಚ್ಚು ಉದ್ಯಮಿಗಳನ್ನಾಗಿಸಬೇಕು, ಉದ್ಯೋಗ ಹುಡುಕುವವರನ್ನಲ್ಲ, ಸ್ಟಾಟರ್್ ಅಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ ಸೇರಿದಂತೆ ಹಲವು ಕ್ರಮಗಳ ಮೂಲಕ ಎನ್ ಡಿಎ ಸಕರ್ಾರ ಈ ನಿಟ್ಟಿನಲ್ಲಿ ಯುವಜನತೆಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದ್ದಾರೆ.


