ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 12, 2017
ಕವಿ ಅಚ್ಚರಿಯ ಚಕ್ಷುಗಳೊಂದಿಗೆ ನಿರಂತರ ಚಲನಶೀಲತೆಯನ್ನು ಕಾಯ್ದುಕೊಳ್ಳುವ ಯತ್ನದಲ್ಲಿರುತ್ತಾನೆ-ಡಾ.ಬಿ.ಎ.ವಿವೇಕ ರೈ.
ಮಂಜೇಶ್ವರ: ಎಲ್ಲಾ ಕಾಲಕ್ಕೂ ಪ್ರಸ್ತುತವಾಗುವ ಕಾವ್ಯ, ಸಾಹಿತ್ಯಗಳು ಸಾಹಿತ್ತಿಕವಾಗಿ ನೆಲೆಗೊಂಡಾಗ ವರ್ತಮಾನದ ಪ್ರೀತಿ, ಬದುಕುವ ರೀತಿಯಾಗಿ ನೆಲೆಗೊಳ್ಳುತ್ತದೆ. ಮಾಧುರ್ಯ, ಪ್ರೀತಿ, ಸಮರಸತೆಯನ್ನು ಕಟ್ಟುವ ಕೆಲಸ ಸಾಹಿತ್ಯ ಮಾಡಬೇಕು ಎಂದು ಹಿರಿಯ ವಿದ್ವಾಂಸ, ಹಂಪಿ ವಿವಿಯ ವಿಶ್ರಾಂತ ಉಪಕುಲಪತಿ ಡಾ. ಬಿ.ಎ.ವಿವೇಕ ರೈ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಸರಗೋಡು ಜಿಲ್ಲಾ ಲೇಖಕರ ಸಂಘ, ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಟ್ರಸ್ಟ್ ಮತ್ತು ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಸಮಿತಿ ಆಶ್ರಯದಲ್ಲಿ ಹಿರಿಯ ಸಾಹಿತಿ, ಯಕ್ಷಗಾನ ಅರ್ಥಧಾರಿ, ವೈದ್ಯ ಡಾ.ರಮಾನಂದ ಬನಾರಿಯವರ "ಮುತ್ತು ನೀರಾಗದು" ಕವನ ಸಂಕಲನ ಬಿಡುಗಡೆ, ಕವಿಗೋಷ್ಠಿ, ಕೃತಿ ಸಂಭ್ರಮ ಮತ್ತು ಕಾವ್ಯಗಾಯನ ಕಾರ್ಯಕ್ರಮವನ್ನು ಶನಿವಾರ ಅಪರಾಹ್ನ ಮಂಜೇಶ್ವರ ಗೋವಿಂದ ಪೈ ಸ್ಮಾರಕ "ಗಿಳಿವಿಂಡು"ವಿನ ಪಾತರ್ಿಸುಬ್ಬ ವೇದಿಕೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ವಿಜ್ಞಾನಕ್ಕೆ ನಿಲುಕಲಾರದ ಭಾವನೆ, ಆನಂದಗಳಂತಹ ಸೂಕ್ಷ್ಮತೆಗಳನ್ನು ಕವಿ ಶೋಧಿಸುತ್ತಾನೆ. ಅನುಭವಗಳು ವರ್ತಮಾನದೊಂದಿಗೆ ಮಿಳಿತಗೊಂಡು ತತ್ವಜ್ಞಾನದ ಸ್ವರೂಪದಲ್ಲಿ ಹೊಸ ಸಂಪರ್ಕವನ್ನು ಪಡೆಯಲು ಹೊರಟಾಗ ಕಾವ್ಯ ಹುಟ್ಟಿಕೊಳ್ಳುತ್ತದೆ ಎಂದು ತಿಳಿಸಿದ ಅವರು, ಡಾ.ಬನಾರಿಯವರು ವೃತ್ತಿಯಲ್ಲಿ ವೈದ್ಯರಾದರೂ ಪ್ರವೃತ್ತಿಯಲ್ಲಿ ಬಹುಮುಖದ ಸಾಧಕರಾಗಿ ಗುರುತಿಸಿಕೊಂಡಿರುವುದು ವ್ಯಕ್ತಿತ್ವ ನಿರೂಪಣೆಯ ಸಂಕೇತವೆಂದು ಅವರು ತಿಳಿಸಿದರು. ಪ್ರತಿಯೊಂದು ಅನುಭವಗಳೂ ಪ್ರತಿ ಘಳಿಗೆಯೂ ಹೊಸಹೊಸ ಹೊಳಹುಗಳೊಂದಿಗೆ ಅಕ್ಷರ ಸ್ವರೂಪಪಡೆಯುವುದು ಋಷಿ ಸದೃಶ ಚಿಕಿತ್ಸಕತನದ ಭೀಮ ಕವಿಯ ಗುಣವಿಶೇಷ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಜಗತ್ತಿನಲ್ಲಿ ಇಂದು ಅಚ್ಚರಿ ಮಾಯವಾಗುವ ಭೀತಿ ಎದುರಿಸುತ್ತಿದೆ. ಅಚ್ಚರಿ ರಹಿತ ಬದುಕು ಜಡತ್ವಕ್ಕೆ ಕೊಂಡೊಯ್ಯುತ್ತದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಕವಿ ಸದಾ ಅಚ್ಚರಿಯ ಚಕ್ಷುಗಳೊಂದಿಗೆ ನಿರಂತರ ಚಲನಶೀಲತೆಯನ್ನು ಕಾಯ್ದುಕೊಳ್ಳುವ ಯತ್ನದಲ್ಲಿರುತ್ತಾನೆ ಎಂದು ಬಿ.ಎ.ವಿವೇಕ ರೈಗಳು ತಿಳಿಸಿದರು. ಜಿಜ್ಞಾಸೆ, ತಾತ್ವಿಕ ನೆಲೆಗಟ್ಟಿನ ಪ್ರಕೃತಿ ಸಿದ್ದಾಂತ ಕಾವ್ಯದ ಹುಟ್ಟಿಗೆ ಕಾರಣವಾಗಿ ಅನುಭವಗಳೊಂದಿಗೆ ಶೋಧಿಸಲ್ಪಟ್ಟು ಸಮೃದ್ದ ಸಮಾಜ ನಿಮರ್ಾಣಕ್ಕೆ ಕಾರಣವಾಗುತ್ತದೆ ಎಂದ ಅವರು, ನಿರಂತರ ಅಧ್ಯಯನ ಬೆಳೆಸುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ. ಭಟ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಬಿಡುಗಡೆಗೊಂಡ ಕವನ ಸಂಕಲನದ ಕುರಿತು ಕವಿ, ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕ ಬಾಲಕೃಷ್ಣ ಹೊಸಂಗಡಿ ಕೃತಿಪರಿಚಯ ಮಾಡಿದರು.
ಗಿಳಿವಿಂಡು ಟ್ರಸ್ಟ್ ಸದಸ್ಯ ಕೆ.ಆರ್.ಜಯಾನಂದ, ಕೃತಿಕಾರ ಡಾ.ರಮಾನಂದ ಬನಾರಿ ಉಪಸ್ಥಿತರಿದ್ದು ಮಾತನಾಡಿದರು. ಈ ಸಂದರ್ಭ ಡಾ.ಬನಾರಿಯವರ ಎತ್ತಿರೆತ್ತಿರಾರತಿ, ನಮ್ಮ ತಾಯಿ ಭಾರತಿ ಎಮಬ ಪ್ರಸಿದ್ದ ಗೀತೆಗೆ ಸಾಹಿತಿ, ಅರ್ಥಧಾರಿ, ಗಾಯಕಿ ಜಯಶ್ರೀ ಶ್ರೀಕೃಷ್ಣಯ್ಯ ಅನಂತಪುರ ರಾಗ ಸಂಯೋಜನೆ ನಡೆಸಿ ಹಾಡಿದರು. ಜೊತೆಗೆ ಡಾ.ಬಿ.ಎ.ವಿವೇಕ ರೈಗಳು ಭಾವಸಂಗಮ-ಗೀತಗಾಯನ ವೈವಿಧ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರೇಮಗಂಗಾ ಕಾರಿಂಜೆ, ಶ್ರೀಲತಾ ಕಾರಿಂಜೆ, ಜಯಶ್ರೀ ಶ್ರೀಕೃಷ್ಣಯ್ಯ ಅನಂತಪುರ ನಡೆಸಿಕೊಟ್ಟರು. ಗೋವಿಂದ ಪೈಗಳ ತಾಯೆ ಬಾರ ಮೊಗವ ತೋರ ಗೀತೆಗಳ ಸಹಿತ ಕನ್ನಡ ಸಾಹಿತ್ಯ ಲೋಕದ ಪ್ರಸಿದ್ದ ಕವಿಗಳ ವಿವಿಧ ಗೀತಗಳ ಗಾಯನ ನಡೆಯಿತು.
ಗೋವಿಂದ ಪೈ ಸ್ಮಾರಕ ಗಿಳಿವಿಂಡು ಯೋಜನೆಯ ಟ್ರಸ್ಟಿ ಸುಭಾಶ್ಚಂದ್ರ ಕಣ್ವತೀರ್ಥ ಸ್ವಾಗತಿಸಿ, ವಂದಿಸಿದರು. ಕವಿ ಹರೀಶ್ ಸುಲಾಯ ಒಡ್ಡಂಬೆಟ್ಟು ಕಾರ್ಯಕ್ರಮ ನಿರೂಪಿಸಿದರು.



