HEALTH TIPS

No title

                     ಹೊಸತನ್ನುನ ಕಲಿಸಿದ ಬಯಲು ಪ್ರವಾಸ
     ಬದಿಯಡ್ಕ : ಪಳ್ಳತ್ತಡ್ಕ  ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಅಧ್ಯಾಪಕರೊಂದಿಗೆ ಅಲ್ಲಿಗೆ ಸಮೀಪದ ಕೋರಿಕ್ಕಾರ್ ಅಣೆಕಟ್ಟಿಗೆ ಬಯಲುಪ್ರವಾಸವನ್ನು ಇತ್ತೀಚೆಗೆ ಕೈಗೊಂಡರು. ಸುಮಾರು 50 ಕ್ಕೂ ಹೆಚ್ಚು ಮಕ್ಕಳು   ಬಿಸಿಲಿನ  ಧಗೆಯನ್ನು ಲೆಕ್ಕಿಸದೆ ಉತ್ಸಾಹದಿಂದ ನಡೆದು ಅಣೆಕಟ್ಟಿನ್ನು  ವೀಕ್ಷಿಸಿದರು. ಎರಡು ಬದಿಯಿಂದ ಹಲಗೆಯನ್ನು ಇರಿಸಿ ಅದರೊಳಗೆ ಮಣ್ಣನ್ನು ತುಂಬಿಸಿ ಗಟ್ಟಿಯಾದ ತಡೆಯನ್ನು ಮಾಡಿ ನೀರನ್ನು ಸಂಗ್ರಹಿಸಿ ಇಡುವ ರೀತಿಯನ್ನು ನೋಡಿ ತಿಳಿದರು.ಅಣೆಕಟ್ಟಿನ ಒಂದು ಭಾಗದಲ್ಲಿ ಸಂಗ್ರಹಗೊಂಡಿರುವ ನೀರಿನ ಸಂಗ್ರಹವನ್ನು ವೀಕ್ಷಿಸಿ ಅದರ ಸಾಧಕಗಳನ್ನು ವಿದ್ಯಾಥರ್ಿಗಳು ತಿಳಿದುಕೊಂಡರು. ನೀರಿನಲ್ಲಿ ವಾಸಿಸುವ ಜಲಚರಗಳನ್ನು ವೀಕ್ಷಿಸಿ ವಿವರ ಸಂಗ್ರಹಿಸಿದರು. ಸುಮಾರು 28 ಲಕ್ಷ ಖಚರ್ಿನಲ್ಲಿ ನಿಮರ್ಿತವಾದ ಈ ಅಣೆಕಟ್ಟು 2007 ಜೂನ್ ರಂದು ಅಸ್ತಿತ್ವಕ್ಕೆ ಬಂತು.
  ಕಟ್ಟದಲ್ಲಿ ತುಂಬಿಕೊಂಡಿರುವ ನೀರು ಮತ್ತು ಸುತ್ತುಮುತ್ತು ಹುಲುಸಾಗಿ ಬೆಳೆದಿರುವ ಮರಗಳಿರುವ ಕಾರಣ ಆ ಪ್ರದೇಶವು ತಂಪಿನಿಂದ ಕೂಡಿತ್ತು.ಈ ಸಂದರ್ಭ ಪ್ರಕೃತಿಯ ಸಹಜ ಸೊಬಗಿನಿಂದ ಭಾವಪರವಶರಾದ ವಿದ್ಯಾಥರ್ಿಗಳು ಮರದ ಬಳ್ಳಿಯಲ್ಲಿ ಉಯ್ಯಾಲೆಯಾಡಿ ಸಂತಸಪಟ್ಟರು. ಮರದಲ್ಲಿ ಮಡಕೆಯನ್ನಿರಿಸಿ ಜೇನು ಸಂಗ್ರಹಿಸುವ ರೀತಿಯನ್ನ ತೋರಿಸಿ ವಿವರಿಸಲಾಯಿತು. ಸಮೀಪದಲ್ಲಿದ್ದ ಬಾಳೆಯ ತೋಟವನ್ನು ನಿರೀಕ್ಷಿಸಲಾಯಿತು. ನೀರು ಮಲಿನವಾಗುವ ರೀತಿಯನ್ನು ಹೇಳಿಕೊಡಲಾಯಿತು.ಅರಿವನ್ನು ತುಂಬಿ ಮಕ್ಕಳು ಶಾಲೆಗೆ ಮರಳಿದರು. ಅಧ್ಯಾಪಕ ರಾದ ಶರತ್, ವಿಘ್ನೇಶ್, ವಿದ್ಯ,ಮಮತಾ, ಶಾಲಿನಿ, ಶ್ರೀಲತ, ರೋಜ ನೇತೃತ್ವದಲ್ಲಿ ಬಯಲು ಪ್ರವಾಸ ನಡೆಯಿತು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries