HEALTH TIPS

No title

          ಗಡಿನಾಡಲ್ಲಿ ಕನ್ನಡ ರಕ್ಷಿಸಲು ಸತ್ಯಮೇವ ಜಯತೇ ಟ್ರಸ್ಟ್ ರಂಗಕ್ಕೆ-  ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಟ್ರಸ್ಟ್ನ ಲಕ್ಷ್ಯ 
      ಉಪ್ಪಳ: ಕೇರಳದ ತುಳುನಾಡಿನ ಗಡಿಭಾಗವಾಗಿರುವ ಮಂಜೇಶ್ವರ ತಾಲೂಕಿನ ವೇಗವಾಗಿ  ವಾಣಿಜ್ಯ ಕೇಂದ್ರವಾಗಿ ಮಾರ್ಪಡುತಿರುವ ಉಪ್ಪಳಕ್ಕೆ ಕನರ್ಾಟಕದಿಂದ ತಲುಪವ ಮುಖ್ಯ ಮಾರ್ಗಗಳಲ್ಲಿ ಒಂದು ಉಪ್ಪಳ-ಕೈಕಂಬ-ಬಾಯರ್-ಕನ್ಯಾನ ರಸ್ತೆ. ಇತ್ತೀಚೆಗೆ ಉತ್ತಮ ರಸ್ತೆ ಡಾಮರೀಕರಣವಾಗಿದ್ದು , ಆದರೆ  ರಸ್ತೆಯಲ್ಲಿ ಹಾಕಲಾದ ಊರಿನ ನಾಮಫಲಕಗಳು ಮಲಯಾಳಂ ಮತ್ತು ಆಂಗ್ಲ ಭಾಷೆಯಲ್ಲಿ ಮಾತ್ರ ಹಾಕಲಾಗಿದೆ.ಆದರೆ ಬಹುಸಂಖ್ಯಾತ ಕನ್ನಡ ಮಾತನಾಡುವ, ವ್ಯಾವಹಾರಿಕ ಕನ್ನಡಿಗರೇ ಇರುವ ಈ ಅಂತರ್ ರಾಜ್ಯ ರಸ್ತೆಯಲ್ಲಿ ಕನ್ನಡದ ನಾಮ ಫಲಕ ಬೇಕೇಬೇಕು. ಆದರೆ ಮಲೆಯಾಳೀಕರಣದ ವೇಗ ಮತ್ತು ಅಧಿಕಾರಿ ವರ್ಗದ ನಿರ್ಲಕ್ಷ್ಯದ ಕಾರಣ ಕನ್ನಡದ ನಾಮ ಫಲಕಗಳೇ ಇಲ್ಲದಿರುವುದು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಉಪ್ಪಳದಿಂದ ಬಾಯಾರು ಮುಳಿಗದ್ದೆ ಗಡಿಯ ತನಕ(ಬಳಿಕ ದಕ್ಷಿಣ ಕನ್ನಡ ಜಿಲ್ಲೆ)5ಕ್ಕಿಂತಲೂ ಅಧಿಕ ಕನ್ನಡ ಮಾಧ್ಯಮ ಶಾಲೆಗಳೂ ಇವೆ.
    ಸತ್ಯಮೇವ ಜಯತೇ ಟ್ರಸ್ಟ್ ರಂಗಕ್ಕೆ:
   ನಾಮ ಫಲಕ ಕನ್ನಡದಲ್ಲಿ ಇಲ್ಲದಿರುವುದರಿಂದ ಈ ಬಗ್ಗೆ ಎಚ್ಚೆತ್ತಿರುವ ಸತ್ಯಮೇವ ಜಯತೇ ಚಾರಿಟೇಬಲ್ ಟ್ರಸ್ಟ್ ಈ ಬಗ್ಗೆ ಇದೀಗ ರಂಗಕ್ಕೆ ಬಂದಿದ್ದು, ಶೀಘ್ರ ಶಾಸಕರಿಗೆ ಮನವಿ ನೀಡಲು ಕಾಯರ್ೋನ್ಮುಖವಾಗಿದೆ.  ವಿವಿಧ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಗುರುತಿಸಿಕೊಂಡಿರುವ ಸತ್ಯಮೇವ ಜಯತೇ ಚಾರಿಟೇಬಲ್ ಟ್ರಸ್ಟ್ ಈಗಾಗಲೇ ಹಲವು ಜನಪರ ಕಾರ್ಯಕ್ರಮದ ಮೂಲಕ ಯಶಸ್ವಿಯಾಗಿದೆ. ಮೊದಲು ಪೈವಳಿಕೆ ಕೇಂದ್ರೀಕರಿಸಿ ಮೂರು ವರ್ಷಗಳ ಹಿಂದೆ ಉತ್ಸಾಹಿ ಯುವಕ  ಅಶ್ವಥ್ ಎಂ.ಸಿ 

ಲಾಲ್ಭಾಗ್ ಪೈವಳಿಕೆ ಎಂಬವರಿಂದ ಆರಂಭಗೊಂಡ ವಾಟ್ಸ್ಫ್  ಬಳಗ ಬಳಿಕ ಸಾಮಾಜಿಕ ಸೇವೆಯ ತುತರ್ು, ಅನಿವಾರ್ಯತೆಗಳಿಂದ ಟ್ರಸ್ಟ್ ಆಗಿ ಬದಲಾಯಿಸಿ, ಮಂಗಳೂರು ಕೇಂದ್ರವಾಗಿಸಿ ಕಾಯರ್ಾಚರಿಸುತ್ತಿದೆ.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries