HEALTH TIPS

No title

         ರತ್ನಗಿರಿ ಕುದುರೆಕ್ಕಾಳಿ ಭಗವತಿ ಕ್ಷೇತ್ರದ ವಷರ್ಾವಧಿ ಕಳಿಯಾಟ ಮಹೋತ್ಸವ ಸಂಪನ್ನ
       ಅಪೂರ್ವ ಜನ ಸ್ಪಂಧನದೊಂದಿಗೆ ಯಶಸ್ವಿಗೊಂಡ  ದಿ.ಕಾಳಿಂಗ ನಾವಡರ ಸ್ಮರಣೆ- ನಾಗಶ್ರೀ-ಚಿತ್ರಾಕ್ಷಿ
    ಬದಿಯಡ್ಕ:  ನೀಚರ್ಾಲು ರತ್ನಗಿರಿ ಶ್ರೀ ಕುದುರೆಕ್ಕಾಳಿ ಭಗವತಿ ಕ್ಷೇತ್ರದ ವಷರ್ಾವಧಿ ಕಳಿಯಾಟ ಮಹೋತ್ಸವ ಶನಿವಾರ ಆರಂಭಗೊಂಡು ಮಂಗಳವಾರದ ವರೆಗೆ  ವಿವಿಧ ಕಾರ್ಯಕ್ರಮಗಳೊಂದಿಗೆ ನಡೆದು ಸಂಪನ್ನಗೊಂಡಿತು.
     ಫೆ.24 ರಂದು ಪ್ರಾತ:ಕಾಲ ಗಣಪತಿ ಹೋಮ, ಪ್ರತಿಷ್ಠಾ ದಿನ ಆಚರಣೆ, ಬೆಳಗ್ಗೆ 10 ಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, 11.30 ರಿಂದ ತುಲಾಭಾರ ಸೇವೆ, ಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆಯಿತು. 25 ರಂದು ಬೆಳಗ್ಗೆ 8.30 ರಿಂದ ಭಜನೆ, 11 ರಿಂದ ಕುದುರೆಕ್ಕಾಳಿ ಭಗವತಿ ಪೂಜೆ, ಪ್ರಸಾದ ವಿತರಣೆ, ಅನ್ನದಾನ, ಸಂಜೆ 4 ರಿಂದ ಬಬ್ಬರ್ಯ ಕಟ್ಟೆಯಲ್ಲಿ ತಂಬಿಲ, ರಾತ್ರಿ 7.30 ರಿಂದ ಬಾಲ ಕಲಾವಿದರಿಂದ ನೃತ್ಯ ಕಾರ್ಯಕ್ರಮ, 9 ಕ್ಕೆ ಶ್ರೀ ವಿಷ್ಣುಮೂತರ್ಿ ದೈವದ ಭಂಡಾರ ಹೊರಟು 10 ರಿಂದ ಶ್ರೀ ವಿಷ್ಣುಮೂತರ್ಿ ದೈವದ ಕುಳಿಚ್ಚಾಟ ನಡೆಯಿತು. 
   ಫೆ.26 ರಂದು ಬೆಳಗ್ಗೆ 10 ರಿಂದ ಶ್ರೀ ವಿಷ್ಣುಮೂತರ್ಿ ದೈವದ ನೇಮೋತ್ಸವ, ಶ್ರೀ ಮುಡಿ ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನದಾನ, ಅಪರಾಹ್ನ 2.30 ರಿಂದ ಯಕ್ಷಗಾನ ತಾಳಮದ್ದಳೆ, ರಾತ್ರಿ 7.30 ರಿಂದ ಶ್ರೀ ರಕ್ತ ಚಾಮುಂಡಿ ದೈವದ ಭಂಡಾರ ಇಳಿಯಿತು. ರಾತ್ರಿ  9 ರಿಂದ ಯಕ್ಷಗಾನ ಬಯಲಾಟ, ಶ್ರೀ ದೈವದ ತೊಡಂಙಲ್ ನಡೆಯಿತು. 27 ರಂದು ಪೂವರ್ಾಹ್ನ 10 ರಿಂದ ಶ್ರೀ ರಕ್ತ ಚಾಮುಂಡಿ ದೈವದ ನೇಮೋತ್ಸವ, ಮಧ್ಯಾಹ್ನ ಶ್ರೀ ಮುಡಿ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 3 ರಿಂದ ಶ್ರೀ ಗುಳಿಗ ದೈವದ ಕೋಲ, ಪ್ರಸಾದ ವಿತರಣೆಯೊಂದಿಗೆ ವಷರ್ಾವಧಿ ಕಳಿಯಾಟ ಮಹೋತ್ಸವ ಸಂಪನ್ನಗೊಂಡಿತು. 
    ಕಳಿಯಾಟ ಮಹೋತ್ಸವದ ಸಂದರ್ಭ ಫೆ.23 ರಂದು ಪೂವರ್ಾಹ್ನ 9 ಕ್ಕೆ ಶ್ರೀ ಕ್ಷೇತ್ರದಲ್ಲಿ ಚಂಡಿಕಾ ಹೋಮ ಮತ್ತು ಶ್ರೀ ಕ್ಷೇತ್ರದಲ್ಲಿ ನೂತನವಾಗಿ ನಿಮರ್ಿಸಿದ ಗೋಪುರದ ಸಮರ್ಪಣಾ ಕಾರ್ಯಕ್ರಮವು ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ  ನೇತೃತ್ವದಲ್ಲಿ ನಡೆಯಿತು. 
    ವಿಶೇಷ ಆಕರ್ಷಣೆ ನೀಡಿದ ಕಾಳಿಂಗ ನಾವಡರ ನಾಗಶ್ರೀ- ಚಿತ್ರಾಕ್ಷಿ ಬಡಗು ಬಯಲಾಟ:
    ಕಳಿಯಾಟ ಮಹೋತ್ಸವದ ಅಂಗವಾಗಿ ಫೆ. 26 ರಂದು ಸೋಮವಾರ ರಾತ್ರಿ 9 ರಿಂದ ಯಕ್ಷಲೋಕದ ಮಹಾನ್ ಚೇತನ ದಿ.ಕಾಳಿಂಗ ನಾವಡರನ್ನು ನೆನಪಿಸುವ ನಾಗಶ್ರೀ ಹಾಗೂ ಚಿತ್ರಾಕ್ಷಿ ಪ್ರಸಂಗಗಳ ಬಯಲಾಟವನ್ನು ವಿಶೇಷವಾಗಿ ಪ್ರದಶರ್ಿಸಲಾಯಿತು.  ಜಲವಳ್ಳಿಯ ಕಲಾಧರ ಯಕ್ಷರಂಗ ಪ್ರಸ್ತುತಪಡಿಸಿದ  ಯಕ್ಷಗಾನದ ಹಿಮ್ಮೇಳದಲ್ಲಿ ಭಾಗವತರಾಗಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಪ್ರಸನ್ನ ಭಟ್ ಬಾಳ್ಕಲ್, ಚಂದ್ರಕಾಂತ್ ರಾವ್ ಮೂಡುಬೆಳ್ಳೆ ಮತ್ತು ಎನ್.ಜಿ.ಹೆಗಡೆ ಎಲ್ಲಾಪುರ, ಗಜಾನನ ಭಂಡಾರಿ ಬೀಳ್ಗೆಲೆ, ಗಣೇಶ್ ಗಾಂವ್ಕರ್, ವಿಶ್ವೇಶ್ವರ ಕೆಸರುಕೊಪ್ಪ, ಮುಮ್ಮೇಳದ ಸ್ತ್ರೀವೇಶಧಾರಿಗಳಾಗಿ ನೀಲ್ಕೋಡು ಶಂಕರ ಹೆಗಡೆ, ಗಣೇಶ್ ನಾಯ್ಕ ಮುಗ್ಬಾ, ನಾಗರಾಜ ದೇವಮಕ್ಕಿ, ಮಂಜುನಾಥ ಕೆರೆವಳ್ಳಿ, ಹಾಸ್ಯಗಾರರಾಗಿ ಹಳ್ಳಾಡಿ ಜಯರಾಮ ಶೆಟ್ಟಿ, ಶ್ರೀಧರ ಭಟ್ ಕಾಸರ್ಕೋಡು ಸಹಕರಿಸುವರು. ಇತರ ಪಾತ್ರಗಳಲ್ಲಿ ಬಳ್ಕೂರು ಕೃಷ್ಣ ಯಾಜಿ, ಸುಬ್ರಹ್ಮಣ್ಯ ಚಿಟ್ಟಾಣಿ, ಜಲವಳ್ಳಿ ವಿದ್ಯಾಧರ ರಾವ್, ನಾಗೇಂದ್ರ ಭಟ್ ಮೂರೂರು, ವಿನಯ ಭಟ್ ಬೇರೊಳ್ಳಿ, ಮಹಾಬಲೇಶ್ವರ ಗೌಡ, ನಾಗೇಶ್ ಕುಳಮನೆ, ಸುಬ್ರಹ್ಮಣ್ಯ ಗೌಡ, ಶ್ರೀಕಾಂತ್ ಪೆಲತ್ತೂರು, ಗೌರೀಶ ಗುಣವಂತೆ, ನಿರಂಜನ ವಾನಳ್ಳಿ ಸಹಿತ ಇತರ ಕಲಾವಿದರು ವಿವಿಧ ಪಾತ್ರಗಳಿಗೆ ಜೀವತುಂಬಿದರು.
   



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries