HEALTH TIPS

No title

           `ವೇದಗಳ ಸಂದೇಶವನ್ನು ಅಳವಡಿಸಿದಲ್ಲಿ ಬದುಕಿನಲ್ಲಿ ಸಾರ್ಥಕತೆಯನ್ನು ಪಡೆಯಬಹುದು'
  ಬದಿಯಡ್ಕ: ವೇದಗಳ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕಿನಲ್ಲಿ ಸಾರ್ಥಕತೆಯನ್ನು ಪಡೆಯಲು ಸಾಧ್ಯ ಎಂದು ಕೂಟ ಮಹಾಜಗತ್ತು ಸಾಲಿಗ್ರಾಮದ ಕೇಂದ್ರ ಸಂಸ್ಥೆಯ ಉಪಾಧ್ಯಕ್ಷ ಪಿ.ಶೇಷಗಿರಿ ರಾವ್ ಅವರು ಅಭಿಪ್ರಾಯಪಟ್ಟರು.
    ಕೂಟ ಮಹಾಜಗತ್ತು ಕಾಸರಗೋಡು ಅಂಗ ಸಂಸ್ಥೆ ಮತ್ತು ಬೇಳದಲ್ಲಿನ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇಗುಲದ ಶರವಣ ಟ್ರಸ್ಟ್ನ ಜಂಟಿ ಆಶ್ರಯದಲ್ಲಿ ಬೇಳ ಕುಮಾರಮಂಗಲ  ಶ್ರೀಕ್ಷೇತ್ರದಲ್ಲಿ ಎರಡು ತಿಂಗಳುಗಳ ಕಾಲ ನಡೆದ ವಸಂತ ವೇದಪಾಠ ಶಿಬಿರದ ಸೋಮವಾರ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
   ವೇದಗಳನ್ನು ಎಂದಿಗೂ ಅಲಕ್ಷ್ಯ ಮಾಡಬಾರದೆಂದು ಕಿವಿಮಾತು ಹೇಳಿದ ಅವರು ವೇದಗಳ ಬೋಧನೆಗಳನ್ನು ಅನುಸರಿಸಿದಾಗ ಮಾನವನು ಮಾಧವನಾಗುತ್ತಾನೆ. ಇಲ್ಲವಾದಲ್ಲಿ ದಾನವನಾಗುತ್ತಾನೆ ಎಂದು ಹೇಳಿದರು.
   ಸಮಾರಂಭದ ಅಧ್ಯಕ್ಷತೆಯನ್ನು ಕೂಟ ಮಹಾಜಗತ್ತಿನ ಕಾಸರಗೋಡು ಅಂಗಸಂಸ್ಥೆಯ ಅಧ್ಯಕ್ಷ ಎಸ್.ಎನ್.ಮಯ್ಯ ಬದಿಯಡ್ಕ ವಹಿಸಿದ್ದರು. ಶರವಣ ಟ್ರಸ್ಟ್ನ ಸಂಚಾಲಕರಾದ ವೇದಮೂತರ್ಿ ಗೋಪಾಲಕೃಷ್ಣ ಭಟ್, ಕುಮಾರಮಂಗಲ ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ರಾಮಚಂದ್ರ ಅಡಿಗ ಬೇಳ, ಗಣಪತಿ ಕಾರಂತ, ವೇದಪಾಠ ಶಿಬಿರ ಅಧ್ಯಾಪಕರಾದ ವೇದಮೂತರ್ಿ ಶಿವಾನಂದ ಮಯ್ಯ, ವೇದಮೂತರ್ಿ ಗೋವಿಂದ ಜೋಯಿಸ, ಪುದುಕೋಳಿ  ಕೃಷ್ಣಮೂತರ್ಿ  ಭಟ್, ಮಂಡೆಕೋಲು ವೆಂಕಟ ರಾವ್ ಮುಂತಾದವರು ಉಪಸ್ಥಿತರಿದ್ದು ಶುಭ ಹಾರೈಸಿ ಮಾತನಾಡಿದರು.
    ವೇದಪಾಠ ಶಿಬಿರದಲ್ಲಿ 60 ಕ್ಕಿಂತಲೂ ಹೆಚ್ಚು ಶಿಬಿರಾಥರ್ಿಗಳು ಭಾಗವಹಿಸಿದ್ದು, ವಿದ್ಯಾಥರ್ಿಗಳ ಪರವಾಗಿ ಶಂಕರನಾರಾಯಣ ಮಯ್ಯ, ಕೃಪಾನಿಧಿ, ರಾಮನಂದನ, ಶ್ರೀಕಾಂತ ಮುಂತಾದವರು ಅನುಭವಗಳನ್ನು ಹಂಚಿಕೊಂಡರು.
    ಕೂಟಮಹಾಜಗತ್ತು ಕಾಸರಗೋಡು ಅಂಗಸಂಸ್ಥೆಯ ಪ್ರಧಾನ ಕಾರ್ಯದಶರ್ಿ ನರಸಿಂಹ ಮಯ್ಯ ಮಧೂರು ಸ್ವಾಗತಿಸಿ,  ಅಧ್ಯಾಪಕ ವೇದಮೂತರ್ಿ ಗೋವಿಂದ ಜೋಯಿಸ ವಂದಿಸಿದರು.ಚಂದ್ರಶೇಖರ ರಾವ್ ಏತಡ್ಕ ಕಾರ್ಯಕ್ರಮ ನಿರೂಪಿಸಿದರು. 
   ಅಂಗಸಂಸ್ಥೆಯ 144 ನೇ ಸಂಪರ್ಕ ಸಭೆಯು ಜೂನ್ 10 ರಂದು ಅಪರಾಹ್ನ ಎಡನೀರಿನ ಕಳೇರಿಯ ಮಾಧವ ಹೇರಳ ಮಾಸ್ಟರ್ ಅವರ ಮನೆಯಲ್ಲಿ ಜರಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಮಾಜಬಾಂಧವರು ಭಾಗವಹಿಸುವಂತೆ ಸಂಬಂಧಪಟ್ಟವರು ಈ ಸಂದರ್ಭ ತಿಳಿಸಿರುವರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries