HEALTH TIPS

No title

                "ವಿದ್ಯಾಥರ್ಿಗಳು ಸ್ವಸ್ಥ ಸಮಾಜದ ರೂವಾರಿಗಳು"
    ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದಲ್ಲಿ ಕೃಷ್ಣ ಯಾದವ್ ಅಭಿಮತ
    ಬದಿಯಡ್ಕ: ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ನೀಡುವ ಆರೋಗ್ಯ ಸಂಬಂಧಿ ಮಾಹಿತಿಯನ್ನು ಪಡೆದುಕೊಂಡು ಅದರ ಪ್ರಯೋಜನವನ್ನು  ಎಲ್ಲೆಡೆ ವ್ಯವಸ್ಥಿತವಾಗಿ ಪ್ರಚುರಪಡಿಸುವಲ್ಲಿ ಶಿಬಿರಾಥರ್ಿಗಳು ನೆರವಾಗಬೇಕು.ದೊರಕಿದ ತರಬೇತಿ ಹಾಗೂ ಮಾಹಿತಿಯನ್ನು ಜನಹಿತಕ್ಕಾಗಿ ಬಳಸಬೇಕು ಎಂದು ಸ್ಟುಡೇಂಟ್ ಪೋಲಿಸ್ ಕೇಟೆಡ್ನ ಸಮುದಾಯ ಪೋಲೀಸ್ ಅಧಿಕಾರಿ ಕೃಷ್ಣಯಾದವ್ ಅಭಿಪ್ರಾಯ ವ್ಯಕ್ತಪಡಿಸಿದರು.
  ನವಜೀವನ ಹೈಯರ್ ಸೆಕೆಂಡರಿ ಶಾಲೆ ಬದಿಯಡ್ಕದಲ್ಲಿ ಆರೋಗ್ಯ ಇಲಾಖೆ ಹಾಗೂ ಎನ್.ಆರ್.ಎಚ್.ಎಮ್ನ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಶಾಲೆಗಳಿಂದ ಆಯ್ದ 75 ವಿದ್ಯಾಥರ್ಿಗಳಿಗೆ ಸೋಮವಾರ ಆಯೋಜಿಸಲಾದ "ಕುಟ್ಟಿ ಡಾಕ್ಟರ್" ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದಲ್ಲಿ ಶಿಬರಾಥರ್ಿಗಳಿಗೆ ಉಚಿತ ಬ್ಯಾಗ್ ವಿತರಿಸಿ ಅವರು ಮಾತನಾಡಿದರು.
  ಸ್ವಸ್ಥ ಹಾಗೂ ಸ್ವಾಥ್ಯ ಸಮಾಜ ನಿಮರ್ಾಣದಲ್ಲಿ ಯುವಜನರ, ವಿದ್ಯಾಥರ್ಿಗಳ ಪಾತ್ರ ಮಹತ್ವದ್ದಾಗಿದ್ದು, ವಿವಿಧ ಸಂದರ್ಭಗಳಲ್ಲಿ ದೊರಕುವ ಅವಕಾಶವನ್ನು ಸದ್ಬಳಕೆ ಮಾಡಿ ಸಮಾಜದ ಅಭಿವೃದ್ದಿಗೆ ವಿನಿಯೋಗಿಸಬೇಕು ಎಂದು ತಿಳಿಸಿದರು.
   ಮಕ್ಕಳಿಗೆ ಬ್ಯಾಗ್ ವಿತರಿಸಿ ಕಾರ್ಯಕ್ರಮವನ್ನು ಬದಿಯಡ್ಕ ಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಉದ್ಘಾಟಿಸಿದರು. ವೈದ್ಯಾಧಿಕಾರಿ ಡಾ.ಸತ್ಯಶಂಕರ ಭಟ್ ಅಧ್ಯಕ್ಷತೆ ವಹಿಸಿದರು.
ಆರೋಗ್ಯ ಸಂರಕ್ಷಣೆಗೆ ಪಾಲಿಸಬೇಕಾದ ಜೀವನಕ್ರಮಗಳು, ಕೌನ್ಸಿಲಿಂಗ್, ರೋಗ ಬರದಂತೆ ತಡೆಯುವುದು ಹೇಗೆ ಮುಂತಾದ ವಿಷಯಗಳ ಕುರಿತು ವಿಶ್ವಸ್ಥ ಕೇಂದ್ರಗಳಿಂದ ದೊರೆಯುವ ಮಾಹಿತಿಯನ್ನು ಸಂಗ್ರಹಿಸಿ ಉಪಯೋಗಿಸಿಕೊಳ್ಳುವ ಸಾಮಥ್ರ್ಯ ಕೌಮಾರ ಪ್ರಾಯದ ಮಕ್ಕಳಲ್ಲಿದ್ದು ಆ ಪ್ರಜ್ಞೆಯನ್ನು ಉತ್ತೇಜಿಸುವ ರೀತಿಯಲ್ಲಿ ತರಬೇತಿಯನ್ನು ನೀಡಲಾಯಿತು.
ಎರಡನೇ ಹಂತದ ತರಬೇತಿ ಶಿಬಿರವನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಶ್ರಫ್ ಉದ್ಘಾಟಿಸಿದರು.  ಶಾಲಾ ಮುಖ್ಯೋಪಾಧ್ಯಾಯ ಶ್ಯಾಂ ಭಟ್ ಅಧ್ಯಕ್ಷತೆ ವಹಿಸಿದರು. ಆರೋಗ್ಯ ಪರಿವೀಕ್ಷಕ ಸಾಬು ಜೋಜರ್್,  ಕೌನ್ಸಿಲರ್ ನಿಮಿಷಾ ಜೋಜರ್್ ಶುಭ ಹಾರೈಸಿದರು. ಆರೋಗ್ಯ ಕಾರ್ಯಕರ್ತರು ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries