ಇಂದು ಮುಳ್ಳೇರಿಯದಲ್ಲಿ ಕವಿಗೋಷ್ಠಿ
ಮುಳ್ಳೇರಿಯ: ಪೆರ್ಲದ ಕವಿ ಹೃದಯದ ಸವಿ ಮಿತ್ರರು ವೇದಿಕೆಯ ನೇತೃತ್ವದಲ್ಲಿ ಆಯೋಜನೆಗೊಳ್ಳುತ್ತಿರುವ ಸರಣಿ ಸಾಹಿತ್ಯಗೋಷ್ಠಿಯ ಹತ್ತನೇ ಕವಿಗೋಷ್ಠಿ ಇಂದು(ಭಾನುವಾರ) ಬೆಳಿಗ್ಗೆ 10 ರಿಂದ ಮುಳ್ಳೇರಿಯದ ಶ್ರೀಗಜಾನನ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.
ಕವಯಿತ್ರಿ ಶಾಂತಾ ರವಿ ಕುಂಟಿನಿ ಅಧ್ಯಕ್ಷತೆ ವಹಿಸುವ ಸಮಾರಂಭದಲ್ಲಿ ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕ, ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಡಾ. ರತ್ನಾಕರ ಮಲ್ಲಮೂಲೆ ಉದ್ಘಾಟಿಸುವರು. ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಗಳ ಉದಯೋನ್ಮುಖ ಕವಿಗಳು ಭಾಗವಹಿಸುವರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕೆಂದು ಸಂಚಾಲಕ ಮಣಿರಾಜ್ ವಾಂತಿಚ್ಚಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.