ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 07, 2018
ಶಬರಿಮಲೆ: ಮಹಿಳಾ ಯಾತ್ರಿ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯ ಬಂಧನ
ತಿರುವನಂತಪುರಂ: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಹಿಳಾ ಯಾತ್ರಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ 29 ವರ್ಷದ ವ್ಯಕ್ತಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ ನೀಡಬೇಕು ಎಂದು ಸುಪ್ರೀಂಕೋಟರ್್ ಆದೇಶ ಹೊರಡಿಸಿದ ನಂತರ ಎರಡನೇ ಬಾರಿಗೆ ವಿಶೇಷ ಪೂಜೆಗಾಗಿ ಸೋಮವಾರ ದೇಗುಲದ ಬಾಗಿಲು ತೆರೆದಿದ್ದು, ಮಂಗಳವಾರ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಸೂರಜ್ ಎಂಬುವವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಅಯ್ಯಪ್ಪಸ್ವಾಮಿ ದೇವಸ್ಥಾನ ಪ್ರವೇಶಿಸಲು ಯತ್ನಿಸಿದ ಲಲಿತಾ ರವಿ ಎಂಬ 52 ವರ್ಷದ ಮಹಿಳೆ ಮೇಲೆ ನೂರಾರು ಭಕ್ತರು ದಾಳಿ ನಡೆಸಿದ್ದರು.ಸೂರಜ್ ನನ್ನು ಜಾಮೀನು ರಹಿತ - ಐಪಿಸಿ ಸೆಕ್ಷನ್ 308 ಹಾಗೂ 354ರಡಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಜಿಟಲ್ ಸಾಕ್ಷ್ಯ ಮತ್ತು ಫೋಟೋ ಆಧಾರದ ಮೇಲೆ ಪ್ರಮುಖ ಆರೋಪಿ ಸೂರಜ್ ನನ್ನು ಬಂಧಿಸಿದ್ದು, ಇತರೆ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪತ್ತನಂತಿಟ್ಟ ಪೊಲೀಸ್ ವರಿಷ್ಠಾಧಿಕಾರಿ ಟಿ ನಾರಾಯಣನ್ ಅವರು ಹೇಳಿದ್ದಾರೆ.




