ಎಡನೀರು ಶ್ರೀಮಠದಲ್ಲಿ ತೈಲಭ್ಯಂಜನ ಸ್ನಾನ
ಸಮರಸ ಚಿತ್ರ ಸುದ್ದಿ: ಕಾಸರಗೋಡು: ಎಡನೀರು ಮಠದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಮಠಾಧೀಶರಾದ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿಯವರಿಂದ ತೈಲಾಭ್ಯಂಜನ ನಡೆಯಿತು. ನೂರಾರು ಭಕ್ತರು ಮುಂಜಾನೆಯೇ ಆಗಮಿಸಿ ಶ್ರೀಮಠದಲ್ಲಿ ಸೇವೆಗೈದು, ಶ್ರೀಗಳ ಅನುಗ್ರಹಗಳೊಂದಿಗೆ ಸಾಂಪ್ರದಾಯಿಕ ಶ್ರದ್ದಾ ಭಕ್ತಿಯೊಂದಿಗೆ ತೈಲಾಭ್ಯಂಜನ ಸ್ನಾನಗೈದು ಪುನೀತರಾದರು.