ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 07, 2018
ನ.8 ರಿಂದ ಪೆರ್ಲದಲ್ಲಿ ಗೋಮಾತಾ ಸಪಯರ್ಾ ಹಾಗೂ ಗೋಪಾಷ್ಟಮಿ ಮಹೋತ್ಸವ.
ಪೆರ್ಲ: ಪೆರ್ಲ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವರ್ಧನ ಧರ್ಮ ಮಂದಿರದಲ್ಲಿ ನ.8ರಿಂದ 15ರ ತನಕ ಗೋಮಾತಾ ಸಪಯರ್ಾ ಹಾಗೂ ಗೋಪಾಷ್ಟಮಿ ಮಹೋತ್ಸವ ನಡೆಯಲಿದ್ದು, ಇದರಂಗವಾಗಿ ಗೋಶಾಲೆಯ ಪದಾಧಿಕಾರಿಗಳು ಮಾಣಿಲ ಶ್ರೀ ಧಾಮದ ಯೋಗಿ ಕೌಸ್ತುಭ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರಿಗೆ ಆಮಂತ್ರಣವನ್ನು ನೀಡಿ ಆಶೀವರ್ಾದವನ್ನು ಪಡೆದುಕೊಂಡರು.
ಇದರಂಗವಾಗಿ ನ.7ರಂದು ಸಂಜೆ 5ರಿಂದ ದೇವತಾ ಪ್ರಾರ್ಥನೆ, ಸಪ್ತಶುದ್ಧಿ, ಪುಣ್ಯಾಹ, ಮಂಟಪ ಸಂಸ್ಕಾರ, ವಾಸ್ತು ಪೂಜೆ, ರಾಕ್ಷೋಘ್ನ ಹವನ ನಡೆಯಿತು. ನ.8ರಂದು ಬೆಳಗ್ಗೆ 7ರಿಂದ ಗಣಪತಿ ಹವನ, ಕಾಮಧೇನು ಹವನ, ಸಂಜೆ 4.30ರಿಂದ ಭಜನ ರಾಮಾಯಣ, ವಿಷ್ಣುಸಹಸ್ರನಾಮ ಪಾರಾಯಣ, ಗೋ ಪೂಜೆ, ತುಳಸೀ ಪೂಜೆ, ಗೋಪಾಲಕೃಷ್ಣ ಪೂಜೆ, ರಾತ್ರಿ 7ರಿಂದ ದೀಪೋತ್ಸವ, ಮಂಗಳಾರತಿ, ಪ್ರಸಾದ ವಿತರಣೆ, ಉಪಾಹಾರ, ನ.10ರಂದು ಬೆಳಗ್ಗೆ 9.30ರಿಂದ ಶನಿದೋಶ ನಿವಾರಣೆಗಾಗಿ ಆಂಜನೇಯ ಕಲ್ಪೋಕ್ತ ಪೂಜೆ ಹಾಗೂ ಹವನ, ಮಧ್ಯಾಹ್ನ 12ರಿಂದ ಮಹಾ ಮಂಗಳಾರತಿ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ.
ನ.14ರಂದು ಸಂಜೆ 5ರಿಂದ ಶ್ರೀ ಲಕ್ಷ್ಮೀ ನಾರಾಯಣ ಪೂಜೆ, ನ.15ರಂದು ಗೋಪಾಷ್ಟಮೀ ಮಹೋತ್ಸವ ಪ್ರಯುಕ್ತ ಬೆಳಗ್ಗೆ 7ರಿಂದ ಗಣಪತಿ ಹವನ, ಕಾಮಧೇನು ಹವನ, ಗೋವರ್ಧನ ಹವನ, ಬೆಳಗ್ಗೆ 10ರಿಂದ ಮಾತೆಯರಿಂದ ಕುಂಕುಮಾರ್ಚನೆ, ಭಜನೆ, ಮಧ್ಯಾಹ್ನ 12ರಿಂದ ಹವನ ಪೂಣರ್ಾಹುತಿ, 12.30ರಿಂದ ಪ್ರಸಾದ ವಿತರಣೆ, ಪ್ರಸಾದ ಭೋಜನ, ಸಂಜೆ 4.30ರಿಂದ ಗೋವರ್ಧನ ಪೂಜೆ, ಭಜನ ರಾಮಾಯಣ, ವಿಷ್ಣು ಸಹಸ್ರ ನಾಮ ಪಾರಾಯಣ, ಸಂಜೆ 5ರಿಂದ ಗೋಪೂಜೆ, ತುಳಸೀ ಪೂಜೆ, ಗೋಪಾಲಕೃಷ್ಣ ಪೂಜೆ, ಭಜನೆ, 7ರಿಂದ ದೀಪೋತ್ಸವ, ಮಹಾ ಮಂಗಳಾರತಿ, ಅಷ್ಟಾವಧಾನ ಸೇವೆ, 8ರಿಂದ ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ.




